ಕಾಡುಗೊಲ್ಲ ಸಮುದಾಯಕ್ಕೆ ಕಾಡುಗೊಲ್ಲ ಎಂದು ಜಾತಿಯ ಪ್ರಮಾಣ ಪತ್ರ ನೀಡಬೇಕೆಂದು ಅಗ್ರಹಿ ಶನಿವಾರ ಪ್ರತಿಭಟನೆ ನಡೆಸಿದರು…!!!

Listen to this article

ಹೊಳಲ್ಕೆರೆ : ಬುಡಕಟ್ಟು ಸಂಸ್ಕೃತಿಯ ಕಾಡುಗೊಲ್ಲ ಸಮುದಾಯಕ್ಕೆ ಕಾಡುಗೊಲ್ಲ ಎಂದು ಜಾತಿಯ ಪ್ರಮಾಣ ಪತ್ರ ನೀಡಬೇಕೆಂದು ಅಗ್ರಹಿ ತಾಲ್ಲೂಕಿನ ಕಾಡುಗೊಲ್ಲ ಹೋರಾಟ ಸಮಿತಿ ಸದಸ್ಯರು ಸಮಾಜದ ಅನೇಕ ಯುವಕರು ಮುಖಂಡರು ಶನಿವಾರ ಪ್ರತಿಭಟನೆ ನಡೆಸಿದರು.

ತಾ.ಅಧ್ಯಕ್ಷ ಎ.ಚಿತ್ತಪ್ಪ ಮಾತನಾಡಿ, ತಾಲ್ಲೂಕಿನ ಅಡವಿಗೊಲ್ಲ, ಹಟ್ಟಿಗೊಲ್ಲ, ಕಾಡು ಗೊಲ್ಲ ಸೇರಿದಂತೆ ಎಲ್ಲಾ ಗೊಲ್ಲ ಸಮುದಾಯದ ಉಪಪಂಗಡಗಳಿವೆ. ತಾಲ್ಲೂಕಿನ ಬಹುತೇಕ ಹಟ್ಟಿಗಳಲ್ಲಿ ಕಾಡು ಗೊಲ್ಲರೆ ಏತೇಚ್ಚವಾಗಿದ್ದು ತಮ್ಮ ಜೀವನಾಧರಾವಾಗಿ ಕುರಿ ಮೇಕೆ ಧನಗಳನ್ನು ಮೇಯಿಸಲು ಒಂದು ಕಡೆಯಿಂದ ಇನ್ನೊಂದು ಕಡೆಗೆ ವಲಸೆ ಹೋಗಿ ಅಡವಿ ಕಾಡಗಳಲ್ಲೇ ಇಂದಿಗೂ ಜೀವನ ನಡೆಸುತ್ತಿದ್ದಾರೆ. ಕಾಡುಗೊಲ್ಲರ ಸಂಪ್ರದಾಯಗಳು ಧಾರ್ಮಿಕ ಆಚರಣೆಗಳು ವಿಭಿನ್ನವಾಗಿದ್ದು, ಇಂದಿಗೂ ಕಾಡುಗೊಲ್ಲ ಸಮುದಾಯದ ಜನರು ಪದವಿ ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಜೀವನ ನಿರ್ವಹಿಸುವುದೇ ಕಷ್ಟ ವಾಗಿದೆ. ಕಾಡುಗೊಲ್ಲ ಜನರಿಗೆ ಜಾತಿಯ ಪ್ರಮಾಣ ಪತ್ರ ಸಿಕ್ಕುತ್ತಿಲ್ಲ, ಸರ್ಕಾರ ಈಗಾಗಲೇ ಕಾಡು ಗೊಲ್ಲ ಸಮುದಾಯದ ಜನರಿಗೆ ಜಾತಿಯ ಪ್ರಮಾಣದ ಪತ್ರ ನೀಡಬೇಕೆಂದು ಸುತ್ತೋಲೆ ನೀಡಿದೆ. ಚಿತ್ರದುರ್ಗ ಜಿಲ್ಲೆಯ ಎಲ್ಲಾ ಕಡೆ ಜಾತಿಯ ಪ್ರಮಾಣ ಪತ್ರ ನೀಡುತ್ತಿದ್ದಾರೆ. ಇಲ್ಲಿಯೂ ಅರ್ಜಿಯನ್ನು ಸಲ್ಲಿಸಿದ ಕಾಡು ಗೊಲ್ಲ ಸಮುದಾಯದ ಜನರಿಗೆ ಪ್ರಮಾಣ ಪತ್ರ ನೀಡಬೇಕೆಂದು ಕಾಡುಗೊಲ್ಲ ಸಮುದಾಯದವರು ಒತ್ತಾಯ ಮಾಡಿದರು.

ಬಳಿಕ ತಹಸೀಲ್ದಾರ್ ಬೀಬಿ ಫಾತೀಮ ಇವರಿಗೆ ಮನವಿ ಪತ್ರ ಸಲ್ಲಿಸಿದರು.

ಗ್ರಾ.ಪಂ.ಅಧ್ಯಕ್ಷ ದಾನೇಂದ್ರ, ಗುಂಜಿಗನೂರು ಗ್ರಾ.ಪಂ.ಅಧ್ಯಕ್ಷ ವಿಜಯಲಕ್ಷ್ಮಿ ದಾಸಪ್ಪ, ಮಾಜಿ ಅಧ್ಯಕ್ಷ ಎ.ಬಂಗಾರಪ್ಪ, ಕಾಡುಗೊಲ್ಲ ಕ್ಷೇಮಾಭಿವೃದ್ಧಿ ಸಂಘದ ಅದ್ಯಕ್ಷ ತಿಮ್ಮಪ್ಪ, ಗೌಡಿಹಳ್ಳಿ ರಾಘವೇಂದ್ರ, ಬಿದರಕೆರೆ ಎಕಾಂತಪ್ಪ, ಶ್ರೀ ಧರ, ಸುರೇಶ್ಅವಿನಹಟ್ಟಿ, ಗೋವಿಂದಪ್ಪ, ಅಮೃತಾಪುರ ರಂಗಸ್ವಾಮಿ, ತೇಖಲವಟ್ಟಿ ಸಚಿನ್ ಸಮಾಜದ ಇನ್ನು ಮುಂತಾದ ಮುಖಂಡರುಗಳು ಇದ್ದರು..

ಹೊಳಲ್ಕೆರೆ ತಾಲ್ಲೂಕಿನ ಬಿದರಿಕೆರೆ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ದಾನವೇಂದ್ರ ದಾನೇಶ್ ಆಯ್ಕೆಯಾಗಿದ್ದಾರೆ. ಆಯ್ಕೆ ಮಾಡಿದ ಗ್ರಾಮ ಪಂಚಾಯತಿಯ ಸರ್ವ ಸದಸ್ಯರುಗಳಿಗೆ ದಾನೇಶ್ ಧನ್ಯವಾದ ತಿಳಿಸಿದ್ದಾರೆ…

 

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend