ಮಂಗಗಳ ಗುಂಪಿನಿಂದ ಮಹಿಳೆ ಮೇಲೆ ದಾಳಿ ಮಹಿಳೆಗೆ ಗಂಭೀರ ಗಾಯ ಆಸ್ಪತ್ರೆಗೆ ದಾಖಲು…!!!

Listen to this article

ಮಂಗಗಳ ಗುಂಪಿನಿಂದ ಮಹಿಳೆ ಮೇಲೆ ದಾಳಿ ಮಹಿಳೆಗೆ ಗಂಭೀರ ಗಾಯ ಆಸ್ಪತ್ರೆ ದಾಖಲು
ಹಗರಿಬೊಮ್ಮನಹಳ್ಳಿ ತಾಲೂಕು ಸೊನ್ನ ಗ್ರಾಮದಲ್ಲಿ ದಿನದಿಂದ ದಿನಕ್ಕೆ ಮಂಗಗಳ ಗುಂಪಿನಿಂದ ದಾಳಿ ಆಗುತ್ತಾ ಬರುತ್ತಿದೆ ಇಂದಿನ ತಿಂಗಳು ಆಗಸ್ಟ್ 25 ರಂದು 8ನೇ ತರಗತಿಯ ವಿದ್ಯಾರ್ಥಿ ಎಂ ವಿನಾಯಕ ಮೇಲೆ ದಾಳಿ ನಡೆಸಿತು ನಂತರ ಇದೇ ತಿಂಗಳು 6ನೇ ತಾರೀಕು ಡಿ ದೊಡ್ಡಜ್ಜ ಟ್ಯಾಕ್ಟರ್ ಚಾಲಕನ ಮೇಲೆ ದಾಳಿ ನಡೆಸಿ
ಕೂದಲ ಎಳೆಯಷ್ಟುರಲ್ಲಿ ಪ್ರಾಣ ಅಪಾಯದಿಂದ ಪಾರಾಯದನು.
ಈ ದಿನ ಸಂಜೆ 4:00ಗೆ ಮೈನಹಳ್ಳಿ ಕಾಳಮ್ಮ 43 ವರ್ಷದ ಮಹಿಳೆಯ ಮೇಲೆ ಮಂಗಗಳ ಗುಂಪಿನಿಂದ ದಾಳಿ ಮಾಡಿದ್ದಾವೆ ಬಲಗೈ ತುಂಬಾ ಗಾಯವಾಗಿದ್ದು ಸುಮಾರು ಹತ್ತು ಹೊಲಿಗೆ ಬಿದ್ದಿದ್ದಾವೆ ಎಂದು ತಿಳಿದುಬಂದಿದೆ. ಸುಮಾರು ಒಂದು ತಿಂಗಳಿಂದ ಗ್ರಾಮ ಪಂಚಾಯಿತಿಗೆ ಸಾರ್ವಜನಿಕರು ಮೂಖಿಕವಾಗಿ ದೂರು ನೀಡಿದರು. ಪಂಚಾಯಿತಿ ಅಧಿಕಾರಿಗಳು ನಿರ್ಲಕ್ಷ ತೋರುತ್ತಿರುವುದು ಸಾರ್ವಜನಿಕರಿಗೆ ಬೇಸರವನ್ನು ವ್ಯಕ್ತಪಡಿಸಿದರು. ಜೊತೆಗೆ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಅರಣ್ಯ ಅಧಿಕಾರಿಗಳಿಗೆ ಮನವಿ ಮಾಡಿಕೊಳ್ಳಲು ಸಾರ್ವಜನಿಕರು ಬೇಟೆ ಮಾಡಿದ್ದು 2012ರಿಂದ ಇಲ್ಲಿಯವರೆಗೆ ಅರಣ್ಯ ಅಧಿಕಾರಿಗಳ ಕಚೇರಿ ತೆರೆದಿರುವುದಿಲ್ಲ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಪರಿಹಾರ ಮಾಡುವಂತೆ ಅಂಗಲಾಚಿ ಬೇಡಿಕೊಳ್ಳುವ ಪರಿಸ್ಥಿತಿ ಉಂಟಾಗಿದೆ ಗ್ರಾಮದ ಗ್ರಾಮಸ್ಥರು ಹೊರಗೆ ಬರಬೇಕಾದರು, ವಿದ್ಯಾರ್ಥಿಗಳು ನಿರ್ಭೀತಿಯವಾಗಿ ಶಾಲೆಗೆ ಹೋಗಲು ತುಂಬಾ ತೊಂದರೆ ಆಗುತ್ತದೆ ಕೂಲಿ ಕೆಲಸ ಮಾಡಲು ಮಹಿಳೆಯರು ಇದರಿಂದ ನಿರ್ಭಯವಾಗಿ ಹೊರಗಡೆ ಹೋಗಲು ಸಾಧ್ಯವಾಗುತ್ತಿಲ್ಲ ಗ್ರಾಮ ಪಂಚಾಯತಿ ಅಧಿಕಾರಿಯಾಗಲಿ ಅಥವಾ ಅರಣ್ಯ ಇಲಾಖೆ ಅಧಿಕಾರಿಗಳಾಗಲಿ ಕೂಡಲೇ ಇದಕ್ಕೆ ಪರಿಯರ ಮಾಡಿಕೊಡಬೇಕು ಮಂಗನನ್ನು ಹಿಡಿದುಕೊಂಡು ದೂರ ಹೋಗಿ ಬಿಟ್ಟು ಬರುವಂತೆ ಸಾರ್ವಜನಿಕರು ಮನವಿ ಮಾಡಿಕೊಳ್ಳುತ್ತಿದ್ದಾರೆ ಹಾಗೂ ದಾಳಿಗೆ ಒಳಗಾದವರಿಗೆ ಉತ್ತಮ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕಾಗಿ ಮನವಿ ಮಾಡಿಕೊಳ್ಳುತ್ತಿದ್ದಾರೆ…

ವರದಿ.ಮ್ಯಾಗೇರಿ ಸಂತೋಷ ಹೂವಿನಹಡಗಲಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend