ದೇವದಾಸಿ ಮಹಿಳೆಯರ ಕುಟುಂಬದ ಸದಸ್ಯರ ಗಣತಿಗಾಗಿ ಆಗ್ರಹ…!!!

Listen to this article

ದೇವದಾಸಿ ಮಹಿಳೆಯರ ಕುಟುಂಬದ ಸದಸ್ಯರ ಗಣತಿಗಾಗಿ ಆಗ್ರಹ

ಕರ್ನಾಟಕ ರಾಜ್ಯದಲ್ಲಿನ ಸಾಮಾಜಿಕ ದೌರ್ಜನ್ಯಕ್ಕೆ ತುತ್ತಾದ ಒಂದು ಲಕ್ಷಕ್ಕೂ ಅಧಿಕ ದೇವದಾಸಿ ಮಹಿಳೆಯರ ಕುಟುಂಬದ ಸದಸ್ಯರುಗಳಾದ ನಾವುಗಳು, ಸ್ವಾತಂತ್ರ್ಯ ಬಂದು 76 ವರ್ಷಗಳನ್ನು ನಮ ದೇಶ ಪೂರೈಸುತ್ತಿದ್ದರೂ, ದಲಿತರ ಅಭಿವೃದ್ಧಿ ಹೆಸರೇಳಿ ಲಕ್ಷ ಲಕ್ಷ ಕೋಟಿ ರೂಗಳನ್ನು ಸರಕಾರಗಳು ವ್ಯಯಿಸಿದ್ಸರು ನಮ್ಮಗಳ ಮೇಲಿನ ದೌರ್ಜನ್ಯ ಹಾಗೂ ಅಪಮಾನದ ನೋವಿನ ಬದುಕು ಕೊನೆಗಾಣದಿರುವುದು ವಿಷಾದನೀಯವಾಗಿದೆ. ಈಗಲು ನಮಗೊಂದು ಗೌರವದ, ಸ್ವಾವಲಂಬಿ ಬದುಕಿಗಾಗಿ ನಾವು ಹಂಬಲಿಸುತ್ತಿದ್ದೇವೆ.
ದೌರ್ಜನ್ಯದ ದೇವದಾಸಿ ಪದ್ದತಿಯನ್ನು ಆಮೂಲಾಗ್ರವಾಗಿ ಕೊನೆಗೊಳಿಸುವ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಈಗಲೂ, ತಾಯಂದಿರ ಅನಾರೋಗ್ಯದ ಅಕಾಲಿಕ ಸಾವುಗಳಿಂದ ಅನಾಥರಾಗುತ್ತಿದ್ದೆವೆ. ಬುದ್ದಿ ಬಲಿತ ಮಕ್ಕಳು ಪ್ರತಿ ದಿನ ಪ್ರತಿ ಕ್ಷಣ ಸಮಾಜದ ನಿಂದನೆಗಳಿಂದ ಅಪಮಾನಿತರಾಗುತ್ತಿದ್ಸೇವೆ. ಅಪಮಾನಿತರಾಗುತ್ತಿದ್ದೇವೆ. ತಾಯಂದಿರ ಅಸಮರ್ಪಕ ಗಣತಿಯಿಂದ ಪುನರ್ವಸತಿಯ ಅಲ್ಪವಾದ ಸೌಲಭ್ಯಗಳಿಂದಲು ವಂಚಿತರಾಗಿದ್ದೇವೆ. ಇದರಿಂದಾಗಿ ಶಿಕ್ಷಣ ಮತ್ತಿತರೆ ನೆರವು ದೊರೆಯದಾಗಿದೆ. ಇತರ ಕುಟುಂಬಗಳ ವಿದ್ಯಾವಂತ ಮಕ್ಕಳು ಉದ್ಯೋಗವಿಲ್ಲದೆ ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ಯುವತಿಯರು ಮತ್ತು ಗಂಡ ಬಿಟ್ಟ ಯುವ ಮಹಿಳೆಯರು ಪುನಃ ದೌರ್ಜನ್ಯದ ದೇವದಾಸಿ ಪದ್ಧತಿಗೆ ಬಲವಂತವಾಗಿ ತಳ್ಳಲ್ಪಡುತ್ತಿದ್ದಾರೆ.

ಜನ್ಮದಾತ ಕಣ್ಣೆದುರಿಗಿದ್ದರು ಆತನನ್ನು ತಂದೆಯೆಂದು ಕರೆಯುವಂತಿಲ್ಲ. ಆತನಿಗೆ ನಮ್ಮಗಳ ಕುರಿತ ಯಾವುದೇ ಹೊಣೆಗಾರಿಕೆಯಿಲ್ಲ. ದೌರ್ಜನ್ಯದ ದೇವದಾಸಿ ಪದ್ಧತಿಯನ್ನು ತಡೆಯಲು ಇಂತಹ ಫಲಾನುಭವಿಗಳನ್ನು ಶಿಕ್ಷಿಸದೆ, ಅದಾಗಲೆ ಇರುವ ಫಲಾನುಭವಿಗಳಿಗೆ ಹೊಣೆಗಾರಿಕೆ ನಿಗದಿಸಿ ಅದನ್ನು ಸಮರ್ಪಕವಾಗಿ ಜಾರಿಗೊಳಿಸುವ ಕಾನೂನು ಮತ್ತು ಇಲಾಖೆಯನ್ನು ಗುರುತಿಸಿ ಜಾರಿಗೊಳಿಸಲಿಲ್ಲ.

ಕಡು ಬಡತನದಿಂದ ಬಳಲುವ ತಾಯಿಗಿಲ್ಲದ ಆಸ್ತಿ, ಭೂಮಿ ನಮಗೆಲ್ಲಿಯದು. ಆಧುನಿಕ ತಂತ್ರಜ್ಞಾನವು ಕೂಲಿ ಅವಕಾಶಗಳನ್ನು ಕುಂಠಿತಗೊಳಿಸಿದೆ. ಉದ್ಯೋಗ ಖಾತ್ರಿ ಯೋಜನೆಯು ಭ್ರಷ್ಠಾಚಾರ ಮತ್ತಿತರೆ ಕಾರಣದಿಂದ ವರ್ಷದಲ್ಲಿ 15-20 ದಿನಗಳು ದೊರೆಯುತ್ತಿಲ್ಲ. ನಮ್ಮಲ್ಲಿ ಹಲವರು ಸ್ವಯಂ ಉದ್ಯೋಗಿಗಳಾಗಲು ಮತ್ತು ವ್ಯವಸಾಯದಲ್ಲಿ ತೊಡಗಲು ಇಚ್ಛಿಸುವರಾದರೂ ಭೂಮಿ ಮತ್ತು ಬಂಡವಾಳಗಳಿಲ್ಲ.
ಹೀಗಾಗಿ ನಾವುಗಳು ಕಡುಬಡತನ, ಅಪೌಷ್ಠಿಕತೆ ಎದುರಿಸುತ್ತಿದ್ದೇವೆ. ಈ ದುಸ್ಥಿತಿಯೇ ನಮ್ಮನ್ನು ಪರಾವಲಂಬಿಗಳನ್ನಾಗಿಸಿ ಸಾಮಾಜಿಕ ದೌರ್ಜನ್ಯಕ್ಕೆ ತಳ್ಳಿದೆ.
ಆದ್ದರಿಂದ ರಾಜ್ಯ ಸರಕಾರ ಈ ಸಾಮಾಜಿಕ ದೌರ್ಜನ್ಯದಿಂದ ಹೊರಬಂದು ಗೌರವದ ಬದುಕಿನ ಕಡೆ ಸಾಗುವಂತಾಗಲು ನಮ್ಮ ಎಲ್ಲ ಕುಟುಂಬಗಳ ಗಣತಿಗೆ ಕ್ರಮವಹಿಸಿ ಅಗತ್ಯ ಪುನರ್ವಸತಿಗೆ ಕ್ರಮವಹಿಸಲು ಕೆಳಕಂಡ ಹಕ್ಕೊತ್ತಾಯಗಳನ್ನು ಪರಿಗಣಿಸಲು ಮನವಿ ಮಾಡುವೆವು.

*ಹಕ್ಕೊತ್ತಾಯಗಳು*

1) ದೇವದಾಸಿ ಮಹಿಳೆಯರ ಕುಟುಂಬದ ಎಲ್ಲ ಸದಸ್ಯರ ಗಣತಿ ಮಾಡಬೇಕು. ಪರಿಶಿಷ್ಠರ ಅನುದಾನದಲ್ಲಿ ಕನಿಷ್ಠ ಶೇ 10 ಅನುದಾನವನ್ನು ಇವರಿಗಾಗಿ ವ್ಯಯ ಮಾಡಲು ಕ್ರಮವಹಿಸಬೇಕು.

2) ದೇವದಾಸಿ ಮಹಿಳೆಯರ ಮಕ್ಕಳಿಗೆ, ಉನ್ನತ ಶಿಕ್ಷಣವೂ ಸೇರಿದಂತೆ ಎಲ್ಲಾ ಹಂತದ ಶೈಕ್ಷಣಿಕ ಸಂಸ್ಥೆಗಳಲ್ಲಿ ವಸತಿ ಸಮೇತ ಉಚಿತ ಶಿಕ್ಷಣ ದೊರೆಯುವಂತಾಗಲು ಸ್ಪರ್ದೆ ಇರದ ನೇರ ಪ್ರವೇಶ ಒದಗಿಸಲು ಅಗತ್ಯ ಕ್ರಮ ವಹಿಸಬೇಕು ಮತ್ತು ಶಿಕ್ಷಣಕ್ಕೆ ಅಗತ್ಯವಾದ ಪುಸ್ತಕ, ಕಂಪೂಟರ್ ಮತ್ತಿತರೆ ಪರಿಕರಗಳನ್ನು ಒದಗಿಸಬೇಕು.

3) ದೇವದಾಸಿ ಮಹಿಳೆಯರ ವಿದ್ಯಾವಂತ ನಿರುದ್ಯೋಗಿ ಮಕ್ಕಳಿಗೆ ಉದ್ಯೋಗ ದೊರೆಯುವವರೆಗೆ ಮಾಸಿಕ 10,000 ರೂಗಳ ನಿರುದ್ಯೋಗ ಭತ್ಯೆ ಒದಗಿಸಬೇಕು…

 


ವರದಿ ಮ್ಯಾಗೇರಿ ಸಂತೋಷ್ ಹೂವಿನಹಡಗಲಿ..

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend