ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಒಳ ಮೀಸಲಾತಿ ಕುರಿತಂತೆ ಸುಪ್ರೀಂ ಕೋರ್ಟ್ ನೀಡಿರುವ ಮಹತ್ವದ ತೀರ್ಪು…!!!

Listen to this article

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಒಳ ಮೀಸಲಾತಿ ಕುರಿತಂತೆ ಸುಪ್ರೀಂ ಕೋರ್ಟ್ ನೀಡಿರುವ ಮಹತ್ವದ ತೀರ್ಪು

ದೇಶದಲ್ಲಿ ಒಳಮೀಸಲಾತಿ ಹೋರಾಟ ಮೂರು ದಶಕಗಳ ಕಾಲದ ದೊಡ್ಡ ಪ್ರಮಾಣದ ಹೋರಾಟ. ಸ್ವಾತಂತ್ರ್ಯದ ನಂತರ ಸಂವಿಧಾನದಲ್ಲಿ ಮೀಸಲಾತಿಯನ್ನು ಅಳವಡಿಸಿದರು. ಅದರಿಂದ ಅದು ಪರಿಶಿಷ್ಟ ಸಮುದಾಯಗಳನ್ನ ಮೇಲೆತ್ತುಲು ಸಹಾಯ ಹಸ್ತವಾಗುತ್ತದೆ. ಅದರಂತೆ ಪರಿಶಿಷ್ಟ ಜಾತಿಯೊಳಗಿನ ಕೆಲವು ಬಲಿಷ್ಠ ಮತ್ತು ಸಶಕ್ತ ಜಾತಿಗಳು ಹೆಚ್ಚಿನ ಪ್ರಮಾಣದಲ್ಲಿ ಮೀಸಲಾತಿ ಕಬಳಿಸಿರುವುದು ಮೀಸಲಾತಿಯ ಹಂಚಿಕೆಯಲ್ಲಿ ಕಾಣುತ್ತದೆ. ಕೆಲವು ಶೋಷಿತ ಸಮುದಾಯಗಳು ಮೀಸಲಾತಿ ಪ್ರಯೋಜನದಿಂದ ದೂರವೇ ಉಳಿದಿದ್ದು, ಮೀಸಲಾತಿ ಇರುವ ಜಾತಿಗಳಲ್ಲಿ ಅಸಮಾನತೆ ಒಳಗಾದವರಿಗೆ ಸಮಾನತೆ ಸಿಗಬೇಕೆಂದರೆ ಜನಸಂಖ್ಯೆನುಗುಣವಾಗಿ ಮೀಸಲಾತಿ ಬೇಕು. ಈ ಮೀಸಲಾತಿ ಸಮಾನ ಹಂಚಿಕೆ ಆಗಬೇಕಾದರೆ ಅದಕ್ಕೆ ಒಳಮೀಸಲಾತಿ ಜಾರಿಯಾಗಬೇಕು._

_ಸಂವಿಧಾನದ ಆಶಯದಂತೆ ಒಳಮೀಸಲಾತಿ ಹೋರಾಟ ಶುರುವಾಯಿತು. ದೇಶದ ಬೇರೆ ರಾಜ್ಯದಂತೆ ಒಳಮೀಸಲಾತಿ ಹೋರಾಟದ ಕೂಗು ದೇಶಾದ್ಯಂತ ಉದ್ದಗಲಕ್ಕೂ ಬೆಂಕಿಯ ಜ್ವಾಲೆಯಂತೆ ಸಂಚಲನಗೊಂಡಿತ್ತು. ಈ ದೇಶದ ಅನೇಕ ರಾಜ್ಯದಲ್ಲಿ ಒಳಮೀಸಲಾತಿಗೆ ಅನುವು ಮಾಡಿಕೊಟ್ಟಿದೆ. 1975 ಮೇ 5 ರಂದು ಪಂಜಾಬ್ ರಾಜ್ಯದಲ್ಲಿ ಮೊದಲ ಸಂವೇದನಾ ಒಳಮೀಸಲಾತಿ ಅನುಷ್ಠಾನಗೊಳಿಸಿದೆ. ಅದರಂತೆ ಹರಿಯಾಣ, ಉತ್ತರಪ್ರದೇಶ, ರಾಜಸ್ಥಾನ, ಬಿಹಾರ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಒಳಮೀಸಲಾತಿ ಜಾರಿಗೆ ತಂದಿರುವುದು ಉದಾಹರಣೆಯಾಗಿದೆ. ತಮಿಳುನಾಡಿನ ರಾಜ್ಯದಲ್ಲಿ ಪ್ರತ್ಯೇಕ ಒಳಮೀಸಲಾತಿ ಜಾರಿಗೆ ತಂದಿರುವುದು ನಮ್ಮ ಕಣ್ಣ ಮುಂದೆ ಉದಾಹರಣೆ ಇದೆ._

_ಆಂಧ್ರಪ್ರದೇಶದ ನ್ಯಾಯಮೂರ್ತಿ ರಾಮಚಂದ್ರನ್ ಆಯೋಗದ ವರದಿ ಶಿಫಾರಸ್ಸು ಆಧಾರದ ರಚಿಸಿದ Andrapradesh SC (Rationalisation of Reservation) Act 2000 ಪರಿಶಿಷ್ಟ ಜಾತಿಗಳ ವರ್ಗೀಕರಣ ಕಾನೂನು ಸಾಂವಿಧಾನಿಕವಾಗಿ ಪುರಸ್ಕರಿಸಿತ್ತು. ಆಂಧ್ರಪ್ರದೇಶ ಉಚ್ವ ನ್ಯಾಯಾಲಯದಲ್ಲಿ ಪ್ರಶ್ನಿಸಲಾಯಿತ್ತು. ಆದರೆ ಉಚ್ಚ ನ್ಯಾಯಾಲಯ ರಾಜ್ಯ ಸರ್ಕಾರ ರೂಪಿಸಿದ ಕಾನೂನಿನ ಸಂವಿಧಾನತ್ಮವಾಗಿದೆ ಎಂದು ಅರ್ಜಿದಾರರ ಮನವಿಯನ್ನು ತಿರಸ್ಕರಿಸಲಾಯಿತು. ಆಂಧ್ರಪ್ರದೇಶ ಉಚ್ಚ ನ್ಯಾಯಾಲಯ ಆದೇಶದ ವಿರುದ್ಧ ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿಯನ್ನು ಸಲ್ಲಿಸಿತು. E.V. Chinnaiah v/s State of Andrapradesh ಇ.ವಿ. ಚಿನ್ನಯ್ಯ ಪ್ರಸರಣದ ದಿನಾಂಕ 15-11-2004 ರಂದು ತನ್ನ ತೀರ್ಪನ್ನು ಪ್ರಕಟಿಸಿರುತ್ತದೆ. ಐದು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು ನೀಡಿದ ತೀರ್ಪು ಆಂಧ್ರಪ್ರದೇಶದ ಪರಿಶಿಷ್ಟ ಜಾತಿಗಳ ವರ್ಗೀಕರಣ ಅಸಂವಿಧಾನ ಎಂದು ಘೋಷಿಸಿತು. ಅದರಂತೆ ಒಳಮೀಸಲಾತಿ ಜಾರಿಗೊಳಿಸಿದ್ದ ತಮಿಳುನಾಡು ರಾಜ್ಯ ಹೊರತುಪಡಿಸಿ ಉಳಿದ ರಾಜ್ಯಗಳಲ್ಲಿ ಒಳಮೀಸಲಾತಿಯನ್ನ ಹಿಂಪಡೆದುಕೊಂಡರು._

_2004 ನೀಡಿದ್ದ ತೀರ್ಪನ್ನು ಮರುಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಹೇಳಿರುವುದು ಸ್ವಾಗತಾರ್ಹ. ಐವರು ಸದಸ್ಯರ ನ್ಯಾಯಾಧೀಶರ ಪೀಠದ ಇ.ವಿ.ಚಿನ್ನಯ್ಯ ಪ್ರಕರಣದ ತೀರ್ಪನ್ನು ಮರುಪರಿಶೀಲನೆ ಮಾಡುವ ಅಗತ್ಯವಿದೆ. ಉದಾಹರಣೆಗೆ, ಏಳು ಸದಸ್ಯರ ನ್ಯಾಯಾಧೀಶರ ಪೀಠದ ವಸಂತ್ ಕುಮಾರ್ (1985) ಮತ್ತು ಹನ್ನೊಂದು ಸದಸ್ಯರ ನ್ಯಾಯಾಧೀಶರ ಪೀಠದ ಎನ್.ಎಮ್. ಥಾಮಸ್ (1975) ಪ್ರಕರಣಗಳ ತೀರ್ಪಿಗೆ ಬದ್ಧವಾಗಿರುವುದಿಲ್ಲ ಮತ್ತು ಒಂಬತ್ತು ಸದಸ್ಯರ ನ್ಯಾಯಾಧೀಶರ ಪೀಠದ ಇಂದ್ರ ಸ್ವಾಹ್ನಿ (1992) ಪ್ರಕರಣದ ತೀರ್ಪನ್ನು ಸರಿಯಾಗಿ ಅರ್ಥೈಸಿ ಅನ್ವಯಿಸಿರುವುದಿಲ್ಲದ ಕಾರಣ ಪರಾಮರ್ಶಿಸುವ ಅಗತ್ಯ ಇದೆ. ಈ ತೀರ್ಪನ್ನು ಪರಾಮರ್ಶೆ ಮಾಡಿ ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಪಂಚಪೀಠದ ತೀರ್ಪು 27 ಆಗಸ್ಟ್‌ 2020 ರಂದು. ಅರುಣ್‌ ಮಿಶ್ರಾ ನೇತೃತ್ವ ಐವರು ನ್ಯಾಯಮೂರ್ತಿ ಪೀಠವು ವ್ಯತಿರಿಕ್ತವಾದ ಅಭಿಪ್ರಾಯ ವ್ಯಕ್ತಪಡಿಸಿದರು. ಸಮಾನತೆ ತರುವುದಕ್ಕಾಗಿ ಎಲ್ಲರೂ ಮೀಸಲಾತಿ ನೀಡಲು ಒಳ ವರ್ಗೀಕರಣಗಳನ್ನು ಮಾಡಲು ಅವಕಾಶ ಇದೆ. ಒಳಮೀಸಲಾತಿ ನೀಡದೆ ಇದ್ದರೆ ಅಸಮಾನರನ್ನು ಸಮಾನರು ಎಂದು ಪರಿಗಣಿಸಲಾಗುತ್ತದೆ. ಸಮಾನತೆಯ ಹಕ್ಕನ್ನು ಕಸಿದಂತಾಗುತ್ತದೆ ಪೀಠವು ಹೇಳಿದೆ. ಹಿಂದುಳಿದ ವರ್ಗದಲೂ ಒಳಮೀಸಲಾತಿ ಈಗಾಗಲೇ ಇರುವುದರಿಂದ ಪರಿಶಿಷ್ಟ ಜಾತಿಗಳಿಗೆ ಅನ್ವಯಿಸುವುದರಲ್ಲಿ ತಪ್ಪಿಲ್ಲ ಎಂದು ಪೀಠವು ತೀರ್ಪು ನೀಡಿದೆ._

*_ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತ್ರತ್ವದ ಐವರು ನ್ಯಾಯಪೀಠ ತೀರ್ಪಿನ ಕೆಲವು ಮುಖ್ಯಾಂಶಗಳನ್ನ ಉಲ್ಲೇಖಿಸಲಾಗಿದೆ._*

_⏩ ಒಳಮೀಸಲಾತಿ ಎನ್ನುವುದು ಮೀಸಲಾತಿಯ ಮೂಲ ಆಶಯದ ವಿಸ್ತರಣೆಯಾಗಿದೆ._

_⏩ ಒಳಮೀಸಲಾತಿ ಪರಿಶಿಷ್ಟ ಜಾತಿಗಳ ಪಟ್ಟಿಯನ್ನು ಏರುಪೇರು ಮಾಡುವುದಿಲ್ಲ, ಗುಂಪುಗಳಾಗಿ ವಿಂಗಡಿಸುವುದರಿಂದ ಯಾವಜಾತಿಯನ್ನು ತೆಗೆಯುವ, ಸೇರಿಸುವ ಪ್ರಶ್ನೆ ಉದ್ಭವಿಸುವುದಿಲ್ಲ._

_⏩ ಕೆನೆಪದರ ಕುರಿತಾದ ಜರ್ನೈಲ್ ಸಿಂಗ್ ಪ್ರಕರಣದ ತೀರ್ಪಿನ ಉಲ್ಲೇಖ ಹೀಗಿದೆ. ಕೆನಪದರ ಜಾರಿಗೊಳಿಸುವುದು ೩೪೧ ವಿಧಿಯನ್ನು ಬಾಧಿಸುವುದಿಲ್ಲ. ಮೀಸಲಾತಿಯಿಂದ ಶಕ್ತರಾದವರು ಹೊರಬರುತ್ತಾರೆ. ಮೀಸಲಾತಿ ಪಟ್ಟಿಯಲ್ಲಿನ ಜಾತಿಗಳು ಹಾಗೆ ಇರುತ್ತವೆ._

_⏩ ಪರಿಶಿಷ್ಟ ಜಾತಿಗಳ ಪಟ್ಟಿ ‘ಏಕಸ್ವರೂಪದ ಸಮುದಾಯವಲ್ಲ’ ಎಂದು ಅನೇಕರಾಜ್ಯಗಳ anthropological study ಮತ್ತು ನ್ಯಾಯಿಕ ಆಯೋಗಗಳ ದಾಖಲೆಗಳು ಹೇಳುತ್ತವೆ._

_⏩ ಜಾತಿ , ಉದ್ಯೋಗ, ಬಡತನದಿಂದ ಬಾಣಲೆಗೆ ಬಿದ್ದ ದುರ್ಬಲರನ್ನು ಹುರಿದು ಮುಕ್ಕಲಾಗುತ್ತದೆ._

_⏩ ಪೌರಕಾರ್ಮಿಕರಾಗಿ ಕೆಲಸ ಮಾಡುವ ಸಮುದಾಯಗಳಿಗೆ ಅಧ್ಯತೆ ಸಿಗದಂತೆ ಆಗಿದೆ._

_⏩ ಒಳಮೀಸಲಾತಿಯನ್ನು ನಿರಾಕರಿಸುವುದು ಅಸಮಾನರ ನಡುವಿನ ಸ್ಪರ್ಧೆಗೆ ಅವಕಾಶ ನೀಡುತ್ತದೆ._

_⏩ ಬುಟ್ಟಿಯಲ್ಲಿನ ಹಣ್ಣುಗಳು ಹಸಿದ ದುರ್ಬಲರಿಗೆ ಸಿಗದೆ ತಾಕತ್ತಿದವರ ಪಾಲಾಗಬಾರದು._

_⏩ಸಾಮಾಜಿಕ ವಾಸ್ತವಗಳನ್ನು ‘ ಏಕಸ್ವರೂಪದ ಸಮುದಾಯ’ ದ ಅಡಿಯಲ್ಲಿ ಮುಚ್ಚಿಡಲಾಗದು._

_⏩ ಮೀಸಲಾತಿಯ ನ್ಯಾಯೋಚಿತ ಹಂಚಿಕೆ ಸಾಮಾಜಿಕ ನ್ಯಾಯದ ಭಾಗವೇ ಆಗಿದೆ._

_⏩ ಸಾಲಿನ ಕೊನೆಯಲ್ಲಿ ಉಳಿದವರನ್ನು ಮೇಲೆತ್ತುವುದೇ ಮುಖ್ಯಪ್ರಶ್ನೆಯಾಗಬೇಕು._

_⏩ ಅಸಮಾನತೆ ನಿವಾರಣೆಯ ವಿಷಯದಲ್ಲಿ ರಾಜ್ಯಗಳನ್ನು ಇನ್ನು ಹೆಚ್ಚು ಹೊಣೆಗಾರರನ್ನಾಗಿಸಬೇಕು. ರಾಜ್ಯಗಳಿಂದ ಬರುವ ಸ್ವಪ್ರೇರಿತ ಕ್ರಮಗಳು ಗುರಿಸಾಧಿಸಲು ಪೂರಕವಾಗಬೇಕು._

_⏩ ಬದಲಾಗುತ್ತಿರುವ ಸಾಮಾಜಿಕ ವಾಸ್ತವಗಳನ್ನು ಪರಿಗಣಿಸಿ ಸಂವಿಧಾನವನ್ನು ಅರ್ಥೈಸಿಕೊಂಡು ಸಾಮಾಜಿಕ ನ್ಯಾಯದ ಗುರಿಸಾಧಿಸಬೇಕು._

_⏩ ಐವರು ಸದಸ್ಯರ ನ್ಯಾಯಪೀಠವಾಗಿ ನಮಗೆ ಮತ್ತೊಂದು ಐವರು ಸದಸ್ಯರ ಪೀಠದ ತೀರ್ಪಿನ್ನು ಪರಿಶೀಲಿಸಲಾಗದು. ಹೀಗಾಗಿ ಸರ್ವೊಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಏಳು ಅಥವಾ ಅದಕ್ಕೂ ಹೆಚ್ಚಿನ ಸದಸ್ಯರ ನ್ಯಾಯಪೀಠ ರಚಿಸಿ ಈ ವಿಷಯದ ಪರಿಶೀಲನೆಯಾಗಬೇಕೆಂದು ವಿನಂತಿಸುತ್ತೇವೆ ._

12 ಅಕ್ಟೋಬರ್ 2023 ರಂದು ಸುಪ್ರೀಂ ಕೋರ್ಟಿನಲ್ಲಿ ಏಳು ಸದಸ್ಯರ ನ್ಯಾಯಾಧೀಶರ ಪೀಠ ರಚನೆಯಾಗಿದ್ದು. ಒಳಮೀಸಲಾತಿ ಪರವಾಗಿ ವಕಾಲತ್ತು. ಸಾಲಿಸಿಟರಿ ಜನರಲ್ ತುಷಾರ್ ಮೇಹ್ರಾ ಸಾಲಿಸಿಟರಿ ಜನರಲ್ ವೆಂಕಟರಮಣಿ ಅವರಿಗೆ ವಕಾಲತ್ತು ನಿರ್ವಹಿಸಲು ಜವಾಬ್ದಾರಿ ನೀಡಲಾಗಿದೆ. ದಿನಾಂಕ 6 ಮತ್ತು 7 ಪೆಬ್ರವರಿ 2024 ರಂದು ಸುಪ್ರೀಂ ಕೋರ್ಟಿನಲ್ಲಿ ಮೊದಲ ವಿಚಾರಣೆ ಮಾಡಲಾಗಿದೆ ಮಾಡಿದ ನಂತರ ಒಳಮೀಸಲಾತಿ ತೀರ್ಪು ಸುಪ್ರೀಂ ಕೋರ್ಟ ಏಳುಜನ ನ್ಯಾಯಾಧೀಶರ ಸಂವಿಧಾನ ಪೀಠದ ತಿರ್ಪುಸಮಸ್ತ ಶೋಷಿತರ ಪರವಾಗಿ ಪ.ಜಾತಿ. ಮತ್ತು ಪ.ಪಂ ವರ್ಗಿಕರಣದ ಪರವಾಗಿ ನೀಡಿದ ಸುಪ್ರೀಂ ಕೋರ್ಟಗೆ ಸಮಸ್ತ ಮಾದಿಗರ/ಧ್ವನಿಹೀನಾ ಶೋಷಿತರ ಪರವಾಗಿ ತುಂಬು ಹೃದಯದ ಧನ್ಯವಾದಗಳು…

ವರದಿ ಮ್ಯಾಗೇರಿ ಸಂತೋಷ್ ಹೂವಿನಹಡಗಲಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend