ಮೋರಿಗೇರಿ ಗ್ರಾಮ ಪಂಚಾಯಿತಿಯಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಣೆ…!!!

Listen to this article

ಮೋರಿಗೇರಿ ಗ್ರಾಮ ಪಂಚಾಯಿತಿಯಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಣೆ

ಗ್ರಾಮದ ಎನ್.ಡಿ.ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯ,ಅಂಗವಾಗಿ ತಾಯಿಯ ಹೆಸರಿನಲ್ಲಿ ಒಂದು ವೃಕ್ಷ (Ek ped maa ke naam) ಎಂಬ ಅಭಿಯಾನವನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮಕ್ಕೆ ಗ್ರಾ.ಪಂ.ಅಧ್ಯಕ್ಷರಾದ,ಸಿ. ಉದಯ ಕುಮಾರ ಅವರು ಸಸಿ ನೆಡುವ ಮೂಲಕ ಉದ್ಘಾಟಿಸಿದರು, ಅಧ್ಯಕ್ಷರು ಮಾತನಾಡಿ ನಮ್ಮ ಸುತ್ತ ಮುತ್ತಲಿನ ವಾತಾವರಣ ಗಿಡ, ಮರ, ಗಾಳಿ,ನೀರು, ಇವು ಮನುಷ್ಯನಿಗೆ ಅವಶ್ಯಕವಾಗಿದ್ದು ಹಾಗಾಗಿ ಪ್ರತಿಯೊಬ್ಬರು ಸಸಿ ನೆಡುವುದರ ಮೂಲಕ ಪರಿಸರ ರಕ್ಷಿಸಿಸುವ ಜವಾಬ್ದಾರಿ ನಮ್ಮದಾಗಿದೆ ಅಲ್ಲದೆ ಈಗಿನ ಕಾಲದಲ್ಲಿ ಕಾಡುಗಳಿಲ್ಲದೆ, ಕಾಡು ಪ್ರಾಣಿಗಳಿಲ್ಲದೆ ಪರಿಸರ ಸ್ಮಶಾನಕ್ಕಿಂತ ಭೀಕರ ವಾಗಿ ಕಾಣುತ್ತಿದೆ ಎಂದು ಕಳವಳವಾಗಿ ಅಭಿಪ್ರಾಯ ವ್ಯಕ್ತ ಪಡಿಸಿದರು.ಈ ಸಂದರ್ಭದಲ್ಲಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳಾದ,ಜಗಳೂರು ಕೊಟ್ರೇಶ್, ಗ್ರಾ. ಪಂ. ಸದಸ್ಯರಾದ ಎನ್. ಮಹೇಶ್ವರ ಗೌಡ್ರು, ಸಿ ಶೇಖರಪ್ಪ, ಕೆ. ನಾಗರಾಜ್, ಗ್ರಾ. ಪಂ. ಡಿಟಿಪಿ ಆಪರೇಟರ ಪ್ರಕಾಶ್, ಶಿವಣ್ಣ, ಶಾಲಾ ಮುಖ್ಯಪಾಧ್ಯಾರಾದ ಶಂಭುಲಿಂಗಯ್ಯ, ಮಹಿಳಾ ಸಂಜೀವಿನಿ ಒಕ್ಕೂಟದ ಸದಸ್ಯರು,ಅಂಗನವಾಡಿ ಕಾರ್ಯಕರ್ತರು, ಶಾಲಾ ಮಕ್ಕಳು, ಗ್ರಾ.ಪಂ. ಸಿಬ್ಬಂದಿಗಳು, ಗ್ರಾಮಸ್ಥರು, ಪರಿಸರ ಪ್ರೇಮಿಗಳು ಉಪಸ್ಥಿತರಿದ್ದರು…

ವರದಿ, ಸಂತೋಷ ಮ್ಯಾಗೇರಿ ಹಡಗಲಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend