ನಿಜಾಚಾರಣೆಯತ್ತ ಲಿಂಗಾಯತ ಯುವಜನತೆ’

Listen to this article

ನಿಜಾಚಾರಣೆಯತ್ತ ಲಿಂಗಾಯತ ಯುವಜನತೆ’

ಹಗರಿಬೊಮ್ಮನಹಳ್ಳಿ:
ಕನ್ನಡ ನೆಲದ ವಚನ ಆಧಾರಿತ ಲಿಂಗಾಯತ ಧರ್ಮದ ವಿಶಿಷ್ಟ ಹಾಗೂ ಸರಳವಾದ ಆಚರಣೆಗಳು ಎಲ್ಲಾ ತಳ ಸಮುದಾಯದ ಜನತೆಗೆ ಯಾವುದೇ ಆರ್ಥಿಕ ಹೊರೆಯಾಗದೆ ಆಚರಿಸುವ ವಿಧಾನವಾಗಿವೆ ಎಂದು ಬಾಚಿಗೊಂಡನಹಳ್ಳಿ, ತೋಂಟದಾರ್ಯ ಶಾಖಾ ಮಠದ ಶ್ರೀ ಶಿವಮಹಾಂತ ಸ್ವಾಮೀಜಿ ಹೇಳಿದರು.

ಕಳೆದ ಭಾನುವಾರ, ವಿಜಯನಗರ ಜಿಲ್ಲೆ, ಹಗರಿಬೊಮ್ಮನಹಳ್ಳಿಯ ಪ್ರಸಿದ್ದ ಚಾರ್ಟರ್ಡ್ ಅಕೌಂಟೆಂಟ್, ಶರಣ ಸರ್ಪಭೂಷಣ ಎಂ.ಎಸ್. ಮತ್ತು ಶರಣೆ ಅನಿತಾ ದಂಪತಿಗಳ ಮಗಳ ನಾಮಕಾರಣ ಕಾರ್ಯಕ್ರಮವನ್ನು ವಚನ ಧರ್ಮದ ಪ್ರಕಾರ ನೇರವೇರಿಸಿ ಅವರು ಅನುಭಾವ ನೀಡಿದರು.

ವೈದಿಕರ ಎಲ್ಲಾ ದಾಳಿಯನ್ನು ಮೀರಿ ಬೆಳೆದಿರುವ ಲಿಂಗಾಯತ ಧರ್ಮ ಸ್ವತಂತ್ರವಾಗಿದೆ. ಅದೀಗ ವಿಶ್ವವ್ಯಾಪಿಯಾಗುವ ಕಾಲವೂ ದೂರವಿಲ್ಲ. ವಚನದ ಅಂತರ್ಗತ ಶಕ್ತಿಯನ್ನು ಯುವಜನತೆ ಅಭ್ಯಾಸ ಮಾಡುತ್ತ ಅವುಗಳನ್ನು ಅರಿತರೆ ಮುಂದೆ ಭಾರತ ಬಸವಭಾರತವಾಗಿ ಬೆಳಗಲಿದೆ ಎಂದರು. ಲಿಂಗಾಯತರು ತಮ್ಮ ಕಾಯಕ ಮತ್ತು ದಾಸೋಹಗಳನ್ನು ಸಮಾಜಮುಖಿಯಾಗಿ ಬಳಸಬೇಕು ಎಂದು ಕರೆ ನೀಡಿದರು.

ಎನ್.ಆರ್. ಪುರದ ಶ್ರೀ ಬಸವಯೋಗಿ ಪ್ರಭುಗಳು ನಾಮಕರಣ ಕಾರ್ಯವನ್ನು ವಚನ ಆಧಾರಿತವಾಗಿ ಎಲ್ಲರಿಗೂ ಅರ್ಥವಾಗುವಂತೆ ನಡೆಸಿಕೊಟ್ಟರು.

ಮೊದಲಿಗೆ ಮಗುವಿನ ದಂಪತಿ ಇಷ್ಟಲಿಂಗ ಪೂಜೆ ಮಾಡಿದರು. ನಂತರ ಹೆಣ್ಣು ಮಗುವಿಗೆ ‘ಬಸವ ಚಿನ್ನಿದಿ’ ಎಂದು ನಾಮಕರಣ ಮಾಡಲಾಯಿತು. ಬಂದವರೆಲ್ಲರು ತಾಯಿ, ಮಗುವಿಗೆ ಪುಷ್ಪಾರ್ಪಣೆ ಮಾಡುವ ಮೂಲಕ ಶುಭಹಾರೈಸಿದರು.

ಈ ಕಾರ್ಯಕ್ರಮ ಈ ಭಾಗದಲ್ಲಿ ನಡೆದ ಹೊಸ ವಾತವರಣವನ್ನು ಸೃಷ್ಟಿಮಾಡಿತು. ಜೊತೆಗೆ ಜನಮನಕ್ಕೆ ಸರಳ ಆಚರಣೆಗಳತ್ತ ವಾಲುವ ದಾರಿಯನ್ನು ತೋರಿಸಿತು ಎಂಬ ಅಭಿಪ್ರಾಯ ಕಾರ್ಯಕ್ರಮಕ್ಕೆ ಬಂದವರಿಂದ ಕೇಳಿಬಂತು.

ಮೊದಲಿಗೆ ಲಿಂಗಾಯತ ಧರ್ಮ ಸಂಸ್ಥಾಪಕ, ಗುರು ಬಸವಣ್ಣನವರ ಭಾವಚಿತ್ರ ಮತ್ತು ಪುತ್ಥಳಿಗೆ ಪೂಜೆ ಸಲ್ಲಿಸಲಾಯಿತು.

ಶರಣ ಎಂ.ಎಸ್. ಸರ್ಪಭೂಷಣ ಅವರು ಮಾತನಾಡಿ, 12ನೇ ಶತಮಾನದಲ್ಲಿ ಶರಣರು ಸ್ಥಾಪಿಸಿದ ಲಿಂಗಾಯತ ಧರ್ಮವನ್ನು ಜನತೆಗೆ ತಲುಪಿಸಲು ತೀವ್ರವಾಗಿ ತಡೆದ ವೈದಿಕ ಪರಂಪರೆಯವರ ಕುತಂತ್ರವನ್ನು ವಿವರಿಸಿದರು. ಮತ್ತು ಬಸವ ತತ್ವದ ಜನಪರ ನಿಲುವುಗಳ ಅನುಭವವನ್ನು ಹಂಚಿಕೊಂಡರು.

ಪೂಜ್ಯಶ್ರೀ ಬಸವಯೋಗಿ ಪ್ರಭುಗಳು ಮಾತಾಡುತ್ತಾ, ನಿಜಾಚರಣೆಗಳನ್ನು ಜಾರಿಗೆ ತರುವ ಜವಬ್ದಾರಿ ಲಿಂಗಾಯತರ ಮೇಲಿದೆ ಎಂದು, ತಾವುಗಳು ಶರಣ ಪರಂಪರೆಯನ್ನು ಮುಂದಿನ ಜನಾಂಗಕ್ಕೆ ಸಾಗಿಸಬೇಕಿದೆ. ಹಾಗಾಗಿ ಈ ನೆಲ ಮೂಲದ ಕನ್ನಡ ಧರ್ಮವು ವಿಶ್ವವ್ಯಾಪಿಯಾಗಿ ಬೆಳೆಯಲು ಒತ್ತಾಸೆಯಾಗಿ ತಮ್ಮ ಕಾಯಕದಿಂದ ಬಂದ ಫಲದಲ್ಲಿ ಒಂದು ಭಾಗವನ್ನು ದಾಸೋಹವಾಗಿ ನೀಡಬೇಕೆಂದು, ಆ ಮೂಲಕ ಲಿಂಗಾಯತ ಚಳುವಳಿಯನ್ನು ಬಲಿಷ್ಡವಾಗಿ ಕಟ್ಟಲು ಶ್ರಮಿಸಬೇಕಿದೆ ಎಂದರು.

ಇದೇ ಸಂದರ್ಭದಲ್ಲಿ ಎಂ.ಎಸ್. ಸರ್ಪಭೂಷಣ ಮತ್ತು ಹೊಸೂರ ಭರಮಲಿಂಗಪ್ಪನವರ ತಂಡಕ್ಕೆ ಜಾಗತಿಕ ಲಿಂಗಾಯತ ಮಹಾಸಭಾದ ಹಗರಿಬೊಮ್ಮನಹಳ್ಳಿಯ ಸಂಘಟನೆಯನ್ನು ಕಟ್ಟಲು, ಸ್ವಾಮಿಜಿಗಳು ಅವರಿಗೆ ಸದಸ್ಯತ್ವ ಪುಸ್ತಕಗಳನ್ನು ನೀಡುವುದರ ಮೂಲಕ ಚಾಲನೆ ನೀಡಿದರು.

ಬಸವ ಬಳಗ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ಮತ್ತಿಹಳ್ಳಿ ಶೆಟ್ರು ಕುಟುಂಬದ ಶರಣ ಬಂಧುಗಳು, ಆಪ್ತರು, ಮಿತ್ರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎಲ್ಲರಿಗೂ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು…

ವರದಿ. ಪ್ರಕಾಶ್ ಕಲ್ಮನಿ, ಹಗರಿಬೊಮ್ಮನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend