ತಾಲೂಕು ಕಚೇರಿಯಲ್ಲಿ ತಹಸೀಲ್ದಾರಗೆ ಬೀಳ್ಕೊಡುಗೆ ಮತ್ತು ಸ್ವಾಗತ ಸಮಾರಂಭ…!!!

Listen to this article

ತಾಲೂಕು ಕಚೇರಿಯಲ್ಲಿ ತಹಸೀಲ್ದಾರಗೆ ಬೀಳ್ಕೊಡುಗೆ ಮತ್ತು ಸ್ವಾಗತ ಸಮಾರಂಭ.

ಸಿಂಧನೂರು : ಜೂನ್ 28. ನಗರದ ತಾಲೂಕು ಕಚೇರಿಯಲ್ಲಿ ತಹಸೀಲ್ದಾರಗೆ ಬೀಳ್ಕೊಡುಗೆ ಮತ್ತು ಸ್ವಾಗತ ಸಮಾರಂಭವನ್ನು ತಾಲೂಕು ಆಡಳಿತ ವತಿಯಿಂದ ಏರ್ಪಡಿಸಲಾಗಿತ್ತು.

ಅಧಿಕಾರ ನಿರ್ವಹಿಸಿ ಉತ್ತಮ ಸೇವೆ ಸಲ್ಲಿಸುವ ಮೂಲಕ ಜನಮೆಚ್ಚುಗೆ ಗಳಿಸಿದ್ದ ತಹಸೀಲ್ದಾರ್ ಮಂಜುನಾಥ ಭೋಗಾವತಿಯವರು ಬೇರೆಡೆಗೆ ವರ್ಗವಣೆಗೊಂಡಿದ್ದು ಒಂದೆಡೆ ಸಂತಸವಾದರೆ ಮತ್ತೊಂಡೆದೆ ಬೇಸರ ಮೂಡುತ್ತದೆ. ಆದರೂ ಸರಕಾರಿ ಸೇವೆಯಲ್ಲಿ ಇದೆಲ್ಲಾ ಸರ್ವೆ ಸಾಮಾನ್ಯ. ನಗರದ ತಾಲೂಕು ಕಚೇರಿಯಲ್ಲಿ ನಡೆದ, ಸಮಾರಂಭದಲ್ಲಿ ತಹಸೀಲ್ದಾರ್ ಮಂಜುನಾಥ ಭೋಗಾವತಿ ಯವರು ವರ್ಗಾವಣೆಗೊಂಡಿರುವ ಹಿನ್ನೆಲೆಯಲ್ಲಿ ಅವರಿಗೆ ಬೀಳ್ಕೊಡುಗೆ ನೀಡಲಾಯಿತು. ಜತೆಗೆ ನೂತನವಾಗಿ ಬಂದಿರುವ ತಹಸೀಲ್ದಾರ್ ಅರುಣ್ ಹೆಚ್. ದೇಸಾಯಿ ಅವರನ್ನು ಸ್ವಾಗತ ಕಾರ್ಯವನ್ನು ಅದೇ ವೇದಿಕೆಯಲ್ಲಿ ಏರ್ಪಡಿಸಲಾಗಿತ್ತು.

ತಹಸೀಲ್ದಾರ್ ಮಂಜುನಾಥ ಭೋಗಾವತಿ ಮಾತನಾಡಿ, ಕೆಲವು ತಿಂಗಳ ಅವಧಿಯಲ್ಲಿ ಎಲ್ಲರ ಸಹಕಾರದಿಂದ ಉತ್ತಮ ಕಾರ್ಯ ನಿರ್ವಹಿಸಿದ ತೃಪ್ತಿ ನನಗಿದೆ. ಕಂದಾಯ ಇಲಾಖೆ ವತಿಯಿಂದ ಹಲವಾರು ಕೆಲಸ ಕಾರ್ಯಗಳು ತಹಸೀಲ್ದಾರ್ ಕಚೇರಿಯಿಂದಲೇ ಆರಂಭವಾಗುವುದರಿಂದ ಇಲ್ಲಿ ಕಾರ್ಯ ನಿರ್ವಹಿಸುವುದು ಪುಣ್ಯದ ಕೆಲಸ ರಾಜ್ಯದಲ್ಲಿ ಅತೀ ಹೆಚ್ಚು ಹೋಬಳಿ ಮತ್ತು ಅಧಿಕಾರಿಗಳನ್ನು ಹೊಂದಿದ ತಾಲೂಕು ಸಿಂಧನೂರು,ಮೂಲ ಕಂದಾಯದ ಕೆಲಸಗಳು ಬಾಕಿ ಉಳಿದಿದ್ದವು, ಹಿರಿಯ ಅಧಿಕಾರಿಗಳ ಸಹಕಾರದಿಂದ ಸಮಸ್ಯಗಳನ್ನು ಬಗೆಹರಿಸಿದ್ದೇನೆ ಎಂದರು.

ನೂತನ ತಹಸೀಲ್ದಾರ್ ಅರುಣ್.ಎಚ್ ದೇಸಾಯಿ ಮಾತನಾಡಿ ವರ್ಗಾವಣೆಗೊಂಡ ತಹಸೀಲ್ದಾರ್ ನಡೆಸಿಕೊಂಡು ಬಂದಿರುವುದನ್ನು ನಾನು ಮುಂದುವರಿಸಿಕೊಂಡು ಸಿಂಧನೂರನ್ನು ಶಸಕ್ತ, ಸಮೃದ್ಧ, ಸಾಮರ್ಥ್ಯ ತಾಲೂಕನ್ನಾಗಿ ಮಾಡೋಣ. ಇದಕ್ಕೆ ಮಾಧ್ಯಮಗಳ, ಜನಪ್ರತಿನಿಧಿನಗಳ, ಅಧಿಕಾರಿಗಳ, ಸಿಬ್ಬಂದಿಗಳ ಸಹಕಾರದಿಂದ ಮಾತ್ರ ಸಾಧ್ಯ.
ಕಂದಾಯ ಇಲಾಖೆ ಬಳಗ 200 ರಿಂದ 250 ಸೈನ್ಯ ಹೊಂದಿದೆ. ತಾಲೂಕು ಕಚೇರಿಯನ್ನು ಅದರ ಸಾರಥಿಯಾಗಿ ಮುನ್ನಡೆಸಿಕೊಂಡು ಹೋಗುತ್ತೇನೆ ಎಂದು ಹೇಳಿದರು.

ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ತಹಸೀಲ್ದಾರ ಬಗ್ಗೆ ತಮ್ಮ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡರು.ವರ್ಗಾವಣೆಗೊಂಡ ಮತ್ತು ನೂತನ ತಹಸೀಲ್ದಾರರಿಗೆ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘ ಸಂಸ್ಥೆಗಳು, ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ. ಅಯ್ಯನಗೌಡ, ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು, ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ ಹಿರೇಮಠ, ಕಂದಾಯ ಇಲಾಖೆ ಸಿಬ್ಬಂದಿಗಳು ಸಂಘ ಸಂಸ್ಥೆಗಳು ಮುಖಂಡರು ಇನ್ನಿತರರಿದ್ದರು…

ವರದಿ.ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend