ಸರಕಾರಿ ಆಸ್ಪತ್ರೆಯಲ್ಲಿ ವಿಕಲಚೇತನರಿಗೆ ಗುರುತಿನ ಚೀಟಿ ಪಡೆಯಲು ನೂಕು ನುಗ್ಗಲು…!!!

Listen to this article

ಸರಕಾರಿ ಆಸ್ಪತ್ರೆಯಲ್ಲಿ ವಿಕಲಚೇತನರಿಗೆ ಗುರುತಿನ ಚೀಟಿ ಪಡೆಯಲು ನೂಕು ನುಗ್ಗಲು.

ಸಿಂಧನೂರು : ಜೂನ್ 27.ನಗರದ ಸರಕಾರಿ ಆಸ್ಪತ್ರೆಯಲ್ಲಿ ವಿಕಲಚೇನರಿಗೆ,ಬುದ್ದಿಮಾಂದ್ಯರಿಗೆ, ವೈದ್ಯಕೀಯ ತಪಾಸಣಾ ಶಿಬಿರ ಹಾಗೂ ಸಾಧನ ಸಲಕರಣೆಗಳಿಗೆ ಅರ್ಜಿಯನ್ನು ತೆಗೆದುಕೊಳ್ಳುವುದು ಹಾಗೂ ಮಾಹಿತಿ ಮಾರ್ಗ ಶಿಬಿರಗಳನ್ನು ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ ರಿಮ್ಸ್ ಸಂಸ್ಥೆ ರಾಯಚೂರು ವತಿಯಿಂದ ಹಮ್ಮಿಕೊಳಲಾಗಿತ್ತು. ಅದಕ್ಕಾಗಿ ವಿಕಲಚೇತನರು, ಬುದ್ದಿಮಾಂದ್ಯರು, ಭಾಗವಹಿಸಿ ಗುರುತಿಸಿ ಚೀಟಿ ಪಡೆದು ಸರ್ಕಾರದ ಸೌಲಭ್ಯ ಪಡೆದುಕೊಳ್ಳಲು ಅವಶ್ಯಕವಾಗಿದ್ದು ನೂರಾರು ಜನ ಫಲಾನುಭವಿಗಳು ಬಂದಿದ್ದರು.

ತಾಲೂಕಿನ ನಾನಾ ಗ್ರಾಮಗಳಿಂದ 400 ಕ್ಕೂ ಹೆಚ್ಚು ವಿಕಲಚೇತನರು ಬಂದಿದ್ದು, ಚೀಟಿ ಪಡೆಯಲು ವಯೋವೃದ್ಧ್ದರು, ಚಿಕ್ಕಮಕ್ಕಳು ಸೇರಿದಂತೆ ನೂರಾರು ವಿಕಲಚೇತನರು ಬೆಳಗ್ಗೆಯಿಂದ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿಯುಂಟಾಯಿತು. ಆದರೆ, ಗುರುತಿನ ಚೀಟಿ ಕೆಲವರಿಗೆ ಸಿಕ್ಕರೆ ಇನ್ನೂ ಕೆಲವರಿಗೆ ಸಿಗುತ್ತಿಲ್ಲ. ಗುರುತಿನ ಚೀಟಿಗೆ ಬೇಡಿಕೆ ಹೆಚ್ಚಿದ್ದರೂ ಸರಕಾರದಿಂದ ವಿತರಣೆಯಾಗುತ್ತಿಲ್ಲ ಎಂದು ವಿಕಲಚೇತನರೊಬ್ಬರು ಆರೋಪಿಸಿದರು.

ಗುರುತಿನ ಚೀಟಿ ಹೊಂದಿದ ಫಲಾನುಭವಿಗಳಿಗೆ ಉಚಿತ ಬಸ್ ಪಾಸ್ ಸೌಲಭ್ಯ, ರೈಲ್ವೆ ಪ್ರಯಾಣದಲ್ಲಿ ರಿಯಾಯಿತಿ, ಆಶ್ರಯ, ರಾಜೀವ್‌ಗಾಂಧಿ ಯೋಜನೆ, ವಿಕಲಚೇತನ ಮಾಸಿಕ ನಿರ್ವಹಣಾ ಭತ್ಯೆ, ವಿದ್ಯಾರ್ಥಿ ವೇತನ, ಪ್ರೋತ್ಸಾಹ ಧನ ಸೇರಿದಂತೆ ನಾನಾ ಸೌಲಭ್ಯಗಳು ದೊರೆಯಲಿದ್ದು, ಕೆಲವರು ಗುರುತಿನ ಚೀಟಿಗಾಗಿ 4 ರಿಂದ 5 ತಿಂಗಳು ಕಾಯಬೇಕಾಗಿದೆ. ಗುರುತಿನ ಚೀಟಿ ವಿತರಣೆ ವೇಳೆ ಅಧಿಕಾರಿಗಳು ಯಾವುದೇ ಸಮಯ ನಿಗದಿಪಡಿಸುತ್ತಿಲ್ಲ.ಯಾವುದೇ ಮುಂಜಾಗ್ರತೆ ಇಲ್ಲದೇ ಎಲ್ಲರಿಗೂ ಏಕಕಾಲಕ್ಕೆ ಸರತಿ ನಿಲ್ಲಿಸುತ್ತಿರುವುದರಿಂದ ತೊಂದರೆಯಾಗುತ್ತಿದ್ದು, ಹೆಚ್ಚಿನ ದಿನ ಗುರುತಿನ ಚೀಟಿ ನೀಡಲು ಅವಕಾಶ ಮಾಡಿಕೊಡಬೇಕೆಂದು ಕೆಲವು ವಿಕಲಚೇತನರು ಪತ್ರಿಕೆಗೆ ತಮ್ಮ ನೋವನ್ನು ತೊಡಿಕೊಂಡರು …

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend