ಶಾಸ್ತ್ರ,ಮಂತ್ರ ದಿಕ್ಕರಿಸಿ ವಿಶ್ವ ಮಾನವನ ಆಶಯದಂತೆ ಮಂತ್ರ ಮಾಂಗಲ್ಯ…!!!

Listen to this article

ಶಾಸ್ತ್ರ,ಮಂತ್ರ ದಿಕ್ಕರಿಸಿ ವಿಶ್ವ ಮಾನವನ ಆಶಯದಂತೆ ಮಂತ್ರ ಮಾಂಗಲ್ಯ.

ಸಿಂಧನೂರು :ಜೂನ್ 27.ಇತಿಹಾಸದಲ್ಲಿ ಮೊದಲ ಬಾರಿಗೆ ಬುದ್ಧ, ಬಸವ, ಅಂಬೇಡ್ಕರ್ ರವರ ಆಶಯದಂತೆ ಹಾಗೂ ಕುವೆಂಪುರವರ ಮಂತ್ರ ಮಾಂಗಲ್ಯದಿಂದ ಎಪಿಎಂಸಿಯ ರೈತ ಭವನದಲ್ಲಿ ತಾಯಪ್ಪ ಜೊತೆ ಗಂಗಮ್ಮ ರವರ ಸರಳ ವಿವಾಹ ನೆರವೇರಿತು.

ಬುದ್ಧ, ಬಸವ, ಅಂಬೇಡ್ಕರ್, ಕಾರ್ಲಮಾರ್ಕ್ಸ್, ಕುವೆಂಪು ಇನ್ನಿತರ ದಾರ್ಶನಿಕ ಚಿಂತನೆಗಳ ಮೇರೆಗೆ ನಂಬಿಕೆ ಹೊಂದಿರುವ ತಾಯಪ್ಪ ಹಾಗೂ ಗಂಗಮ್ಮ ರವರು ತಮ್ಮ ವಿವಾಹವನ್ನು ಪುರೋಹಿತ ಶಾಹಿ ಮೌಢ್ಯ ಮಂತ್ರವನ್ನು ದಿಕ್ಕರಿಸಿ ಕುವೆಂಪು ರವರ ಸರಳ ವಿವಾಹದ ಬದುಕಿನಂತೆ ಜನಪರ ವಿಚಾರಗಳಲ್ಲಿ ನಂಬಿಕೆ ಹೊಂದಿದ ಪರಸ್ಪರ ಒಬ್ಬರನ್ನನೊಬ್ಬರು ಮನಸ್ಸಿನ ಇಚ್ಚೆಯಂತೆ ತಂದೆ ತಾಯಿ ಹಾಗೂ ಗುರುಗಳ ಆರ್ಶಿವಾದಗಳೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ನನ್ನ ನೆಚ್ಚಿನ ವಿದ್ಯಾರ್ಥಿಗಳ ಬದುಕು ಸಮಾಜಕ್ಕೆ ಮಾದರಿಯಾಗಲೆಂದು ಡಾ.ಹನುಮಂತಪ್ಪ ಎಂ ಪ್ರಾದ್ಯಾಪಕರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿ.ಎಚ್ ಕಂಬಳಿಯವರು ವಹಿಸಿದರು.ಬಸವ ಕೇಂದ್ರದ ಜಿಲ್ಲಾ ಅಧ್ಯಕ್ಷ ವಿರುಭದ್ರಪ್ಪ ವಿವಾಹ ಪ್ರತಿಜ್ಞಾ ವಚನ ಭೋದಿಸಿದರು.ಶಂಕರ್ ವಾಲಿಕಾರ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತನಾಡಿದರು. ಸಮತಾಗೀತೆಯನ್ನು ಬಸವರಾಜ್ ಎಕ್ಕಿ ಬಸವರಾಜ್ ಬಾದರ್ಲಿ ಸಂಗಡಿಗರು ನೇರವರಿಸಿದರು, ರಮೇಶ್ ಹಲಗಿ ವಂದಿಸಿದರು.

ಈ ವೇದಿಕೆಯಲ್ಲಿ ಮಾರೆಪ್ಪ ವಕೀಲರು,ರಾಮಣ್ಣ ಸಿಂಗಾಪುರ್ ಚಂದ್ರಶೇಖರ ಗೋರೆಬಾಳ, ಹಾಗೂ ಶಕುಂತಲಾ ದೇವೇಂದ್ರಗೌಡ, ಡಾ.ಹುಸೇನೆಪ್ಪ ಅಮರಾಪುರ ನಾಗರಾಜ ಪೂಜಾರಿ, ವಧುವರರ ತಂದೆ ತಾಯಿಗಳಾದ ದೇವಪ್ಪ ಪಾವಡೆಮ್ಮ ತಿಡಿಗೋಳ, ಮತ್ತು ಯಲ್ಲಮ್ಮ ಯಂಕಪ್ಪ, ಉಪಸ್ಥಿತರಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend