ನಗರಕ್ಕೆ ಸಂಸದ ಪ್ರಜ್ವಲ್ ರೇವಣ್ಣ ಆಗಮನ. ಜಿಲ್ಲಾ ಸಾಮಾಜಿಕ ಜಾಲತಾಣದ ತರಬೇತಿ ಕಾರ್ಯಾಗಾರಕ್ಕೆ ಚಾಲನೆ….!!!

Listen to this article

ನಗರಕ್ಕೆ ಸಂಸದ ಪ್ರಜ್ವಲ್ ರೇವಣ್ಣ ಆಗಮನ. ಜಿಲ್ಲಾ ಸಾಮಾಜಿಕ ಜಾಲತಾಣದ ತರಬೇತಿ ಕಾರ್ಯಾಗಾರಕ್ಕೆ ಚಾಲನೆ.

ಸಿಂಧನೂರು : ಜೂನ್ 27. ಲೋಕಸಭಾ ಸಂಸದರಾದ ಪ್ರಜ್ವಲ್ ರೇವಣ್ಣ ನವರರು ರಾಯಚೂರು ಜಿಲ್ಲಾ ಪ್ರವಾಸದ ಕೈಗೊಂಡಿದ್ದು, ಜೂನ್ 27 ಸೋಮವಾರ ದಂದು ನಗರದ ಜೈನ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ 10 ಗಂಟೆಗೆ ಜಿಲ್ಲಾ ಸಾಮಾಜಿಕ ಜಾಲತಾಣದ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಲಿದ್ದಾರೆ ಎಂದು ಶಾಸಕ ವೆಂಕಟರಾವ್ ನಾಡಗೌಡ ತಿಳಿಸಿದರು.

ನಗರದ ಶಾಸಕರ ಕಾರ್ಯಲಯದಲ್ಲಿ ಕರೆದ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಪಕ್ಷ ಸಂಘಟನೆಗಾಗಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದು ಪ್ರತಿಯೊಂದು ಕ್ಷೇತ್ರಕ್ಕೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಒಂದೊಂದು ದಿನ ಗ್ರಾಮ ವಾಸ್ಥವ್ಯ ಹೂಡಲಿದ್ದಾರೆ. ಅದಕ್ಕಾಗಿಯೇ ನಾಲ್ಕು ದಿನಗಳ ಕಾಲ ಕಾರ್ಯಗಾರ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅಭ್ಯರ್ಥಿಗಳು ಯಾವ ರೀತಿ ಜನರನ್ನು ತಲುಪಬೇಕು ಎಂಬುದು ನಾಯಕತ್ವ, ಶಿಸ್ತು ಬೆಳೆಸಲು ತರಬೇತಿ ನೀಡಲಾಗುತ್ತದೆ. 2023ರ ಚುನಾವಣೆಯಲ್ಲಿ 123 ಗುರಿ ತಲುಪಲು, ಬಡವರ ಹಲವು ಸಮಸ್ಯೆ ಮುಂದಿಟ್ಟುಕೊಂಡು ಹೊರಟಿದ್ದೇವೆ. 2023ರಿಂದ ಹೊಸ ಯುಗ ಆರಂಭವಾಗಲಿದೆ ಎಂದರು.

ನಾಳೆ ತಾಲ್ಲೂಕಿನ ಸರಕಾರಿ ಆಸ್ಪತ್ರೆಯಲ್ಲಿ ವಿಕಲಚೇನರಿಗೆ, ಬುದ್ದಿಮಾಂದ್ಯರಿಗೆ,ವೈದ್ಯಕೀಯ ತಪಾಸಣಾ ಶಿಬಿರ ಹಾಗೂ ಸಾಧನ ಸಲಕರಣೆಗಳಿಗೆ ಅರ್ಜಿಯನ್ನು ತೆಗೆದುಕೊಳ್ಳುವುದು ಹಾಗೂ ಮಾಹಿತಿ ಮಾರ್ಗ ಶಿಬಿರಗಳನ್ನು ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ ರಿಮ್ಸ್ ಸಂಸ್ಥೆ ರಾಯಚೂರು ವತಿಯಿಂದ ಹಮ್ಮಿಕೊಳಲಾಗಿದೆ. ಆದ್ದರಿಂದ ವಿಕಲಚೇತನರು,ಬುದ್ದಿಮಾಂದ್ಯರು, ಭಾಗವಹಿಸಿ ಗುರುತಿಸಿ ಚೀಟಿ ಪಡೆದು ಸರ್ಕಾರದ ಸೌಲಭ್ಯ ಪಡೆದುಕೊಳ್ಳಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜ ನಾಡಗೌಡ, ಮುಖಂಡರಾದ ಧರ್ಮನಗೌಡ ಮಲ್ಕಾಪೂರು, ನಗರ ಸಭೆ ಸದಸ್ಯರಾದ ಸತ್ಯನಾರಾಯಣ ದಾಸರಿ, ಚಂದ್ರು ಮೈಲಾರಿ, ಅಲ್ಲಮಪ್ರಭು ಪೂಜಾರಿ,ದೇವೆಂದ್ರಗೌಡ ಇನ್ನಿತರರಿದ್ದರು…

 

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend