ಶಿಕ್ಷಕರು ತರಬೇತಿ ಪಡೆದುಕೊಂಡು ಇದರ ಉಪಯೋಗ ಮಕ್ಕಳಿಗೆ ತಿಳಿಸಬೇಕು – ಸಾಬಣ್ಣ ವಗ್ಗರ್…!!!

Listen to this article

ಶಿಕ್ಷಕರು ತರಬೇತಿ ಪಡೆದುಕೊಂಡು ಇದರ ಉಪಯೋಗ ಮಕ್ಕಳಿಗೆ ತಿಳಿಸಬೇಕು – ಸಾಬಣ್ಣ ವಗ್ಗರ್.

ಸಿಂಧನೂರು : ಜೂನ್25. ಮಕ್ಕಳು ಆಟ ಪಾಟದೊಂದಿಗೆ ಪೌಷ್ಟಿಕ ಆಹಾರ ನಿಯಮಿತ ವ್ಯಾಯಾಮ ಮಾಡುವುದರೊಂದಿಗೆ ದೇಹವನ್ನು ರಕ್ಷಿಕೊಳ್ಳಲು ವಿಜ್ಞಾನ ಶಿಕ್ಷಕರು ತರಬೇತಿ ಪಡೆದುಕೊಂಡು ಇದರ ಉಪಯೋಗ ಮಕ್ಕಳಿಗೆ ಹಾಗೂ ಗ್ರಾಮಸ್ಥರಿಗೆ ಅರಿವು ಮೂಡಿಸಬೇಕು ಅಂದಾಗ ಮಾತ್ರ ಕಾರ್ಯಾಗಾರ ಮಾಡಿದ್ದಕ್ಕೆ ಸ್ವಾರ್ಥಕವಾಗುತ್ತದೆ ಎಂದು ಅಕ್ಷರದಾಸೋಹ ತಾಲೂಕು ಅಧಿಕಾರಿ ಸಾಬಣ್ಣ ವಗ್ಗರ್ ಹೇಳಿದರು.

ಜಿಲ್ಲಾ ಪಂಚಾಯಿತಿ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಇಲಾಖೆ ಸಿಂಧನೂರು ಹಾಗೂ ರಾಯಚೂರು ಇವರ ಸಂಯುಕ್ತಾಶ್ರಯದಲ್ಲಿ ತಾಲೂಕ ಮಟ್ಟದ ಪ್ರೌಢ ಶಾಲಾ ವಿಜ್ಜಾನ ಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ ತರಬೇತಿ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಮಲೇರಿಯಾ ಹಾಗೂ ಸೊಳ್ಳೆಗಳಿಂದ ಹರಡುವ ಡೆಂಗೀ ಮತ್ತು ಚಿಕನ್ ಗುನ್ಯಾ ರೋಗಗಳ ತರಬೇತಿ ಕಾರ್ಯಾಗಾರಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಪೌಷ್ಠಿಕಾಂಶ ಉಳ್ಳ ಆಹಾರ ಸೇವನೆಯಿಂದ ಮಾತ್ರ ಎಂದರು.

ಮಕ್ಕಳಲ್ಲಿ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕವಾಗಿರುತ್ತದೆ ಅಲ್ಲದೆ ಆಂತರಿಕ ಶಕ್ತಿ ಅಂದರೆ ರೋಗ ನಿರೋಧಕ ಶಕ್ತಿ ವೃದ್ಧಿಯಾಗಿ ರೋಗಗಳಿಂದ ರಕ್ಷಣೆ ಕೋಡುತ್ತದೆ ಪೌಷ್ಟಿಕ ಆಹಾರಕ್ಕೆ ಹೆಚ್ಚು ಒತ್ತು ನೀಡುವುದರ ಜೊತೆಗೆ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟವುದು ಪ್ರತಿಯೊಬ್ಬರ ಆದ್ಯಕರ್ತವ್ಯವಾಗಿದೆ. ನೈಸರ್ಗಿಕವಾಗಿ ಕಾಲಕ್ಕೆ ತಕ್ಕಂತೆ ಸಿಗುವ ಕಾಯಿ ಪಲ್ಲೆಗಳು ಹಾಗೂ ಹಣ್ಣು ಹಂಪಲುಗಳನ್ನು ಸೇವಿಸಿ ಜೀವನ ಶೈಲಿ ಯನ್ನು ಬದಲಾಯಿಸಿಕೊಂಡು ಆರೋಗ್ಯವಂತರಾಗಬೇಕೆಂದು ಹೇಳಿದರು.

ನಂತರ ಮಾತನಾಡಿದ ಸೇವಾ ಮನೋಭಾವನೆ ಇತರರಿಂದ ತಿಳಿಯಲಾರದ ವಿಷಯಗಳನ್ನು ತಿಳಿದುಕೊಳ್ಳವ ತವಕ ಕಡಿಮೆಯಾಗುತ್ತಿದ್ದು ಮಕ್ಕಳಿಗೆ ಆರೋಗ್ಯ ಹಾಗೂ ಶಿಕ್ಷಣ ನೀಡಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ತಾಲೂಕ ದೈಹಿಕ ಶಿಕ್ಷಣಾಧಿಕಾರಿ ರಂಗನಾಥ ರೆಡ್ಡಿ ಹೇಳಿದರು

ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕರಾದ ಸಾವನ್ ಸಾಬ್. ಕೆ ಕಾರ್ಯಕ್ರಮ ನಿರೂಪಿಸಿದರು.ಜಿಲ್ಲಾ ವಿಬಿಡಿಸಿ ಅಧಿಕಾರಿಗಳ ಕಾರ್ಯಾಲಯದಿಂದ ಆಂಜನೇಯ, ಮಾನಯ್ಯ, ತಾಯಪ್ಪ,ಹಿರಿಯ ಆರೋಗ್ಯ ನೀರಿಕ್ಷಾಣಾಧಿಕಾರಿಗಳು ಮತ್ತು ಕಿರಿಯ ಆರೋಗ್ಯ ನೀರಿಕ್ಷಾಣಾಧಿಕಾರಿಗಳಾದ ಅಶೋಕ್ ಪಾಟೀಲ್, ಅಮೀತ್ ಆರೋಗ್ಯ ಇಲಾಖೆಯ ಬ್ಲಾಕ್ ಹೆಲ್ತ್ ಎಜುಕೇಶನ್ ಅಧಿಕಾರಿ ಗೀತಾ ಹಿರೇಮಠ, ತಾಲೂಕ ಮಲೇರಿಯಾ ತಾಂತ್ರಿಕ ಮೇಲ್ವಿಚಾರಕರಾದ ಎಫ್.ಎ ಹಣಗಿ,ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ಬಸವರಾಜ ವಾಲೇಕಾರ್,ಮಲೇರಿಯಾ ಲಿಂಕ್ ವರ್ಕರ್ ಮಲ್ಲಪ್ಪ ಸೇರಿದಂತೆ ಇತರರು ಹಾಜರಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend