72 ವರ್ಷಗಳ ನಂತರ ರಾಜ್ಯಕ್ಕೆ 2ನೇ ಪದಕ!!!!

Listen to this article

72 ವರ್ಷಗಳ ನಂತರ ರಾಜ್ಯಕ್ಕೆ 2ನೇ ಪದಕ! ಒಲಿಂಪಿಕ್ಸ್​ನಲ್ಲಿ ಕಂಚುಗೆದ್ದ ಸ್ವಪ್ನಿಲ್​ಗೆ ಬಂಪರ್ ಬಹುಮಾನ ಘೋಷಿಸಿದ ಶಿಂಧೆ
ಪ್ಯಾರಿಸ್ ಒಲಿಂಪಿಕ್ಸ್ 2024ರ ಆರನೇ ದಿನದಂದು ಭಾರತಕ್ಕೆ ಮೂರನೇ ಪದಕ ತಂದುಕೊಟ್ಟ ಶೂಟರ್​ ಸ್ವಪ್ನಿಲ್ ಕುಸಾಲೆಗೆ ಬಂಪರ್​ ಬಹುಮಾನ ಸಿಕ್ಕಿದೆ. 50 ಮೀಟರ್ ರೈಫಲ್ 3 ಪೊಸಿಸನ್​ ಸ್ಪರ್ಧೆಯಲ್ಲಿ ಸ್ವಪ್ನಿಲ್​ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದರು. ಸ್ವಪ್ನಿಲ್ ಭಾರತೀಯ ಶೂಟಿಂಗ್ ಇತಿಹಾಸದಲ್ಲಿ ಈ ಬಿಭಾಗದಲ್ಲಿ ಪದಕ ಗೆದ್ದ ಏಕೈಕ ಶೂಟರ್​ ಎನಿಸಿಕೊಂಡಿದ್ದರು.ಪ್ಯಾರಿಸ್ ಒಲಿಂಪಿಕ್ಸ್ 2024ರ ಆರನೇ ದಿನದಂದು ಭಾರತಕ್ಕೆ ಮೂರನೇ ಪದಕ ತಂದುಕೊಟ್ಟ ಶೂಟರ್​ ಸ್ವಪ್ನಿಲ್ ಕುಸಾಲೆಗೆ ಬಂಪರ್​ ಬಹುಮಾನ ಸಿಕ್ಕಿದೆ. 50 ಮೀಟರ್ ರೈಫಲ್ 3 ಪೊಸಿಸನ್​ ಸ್ಪರ್ಧೆಯಲ್ಲಿ ಸ್ವಪ್ನಿಲ್​ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದರು. ಸ್ವಪ್ನಿಲ್ ಭಾರತೀಯ ಶೂಟಿಂಗ್ ಇತಿಹಾಸದಲ್ಲಿ ಈ ಬಿಭಾಗದಲ್ಲಿ ಪದಕ ಗೆದ್ದ ಏಕೈಕ ಶೂಟರ್​ ಎನಿಸಿಕೊಂಡಿದ್ದರು.

ಭಾರತಕ್ಕೆ ಐತಿಹಾಸಿಕ ಪದಕ ಗೆದ್ದುಕೊಟ್ಟಿದ್ದಕ್ಕೆ ಸ್ವಪ್ನಿಲ್‌ ಕುಸಾಲೆಗೆ ಮಹಾರಾಷ್ಟ್ರ ಸರ್ಕಾರ 1 ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದೆ. ಸ್ವಪ್ನಿಲ್ ಕುಸಾಲೆ ಭಾರತಕ್ಕೆ ಮರಳಿದ ನಂತರ ಅವರಿಗೆ ಬಹುಮಾನ ನೀಡಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಏಕನಾಥ್ ಶಿಂಧೆ, ಸ್ವಪ್ನಿಲ್ ಕುಸಾಲೆ ಅವರ ತಂದೆ ಮತ್ತು ತರಬೇತುದಾರರೊಂದಿಗೆ ಮಾತನಾಡಿದ್ದೇನೆ. ಪದಕ ಗೆದ್ದ ಸ್ವಪ್ನಿಲ್​ ಜೊತೆ ವೀಡಿಯೊ ಕರೆ ಮೂಲಕ ಅಭಿನಂದನೆ ಸಲ್ಲಿಸಿದ್ದೇನೆ ಎಂದು ಹೇಳಿದರು.

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ತಮ್ಮ ಹೇಳಿಕೆಯಲ್ಲಿ, ” ಮಹಾರಾಷ್ಟ್ರ ಸರ್ಕಾರವು ಸ್ವಪ್ನಿಲ್ ಕುಸಾಲೆಗೆ 1 ಕೋಟಿ ರೂಪಾಯಿ ಬಹುಮಾನವನ್ನು ಘೋಷಿಸುತ್ತಿದೆ. ಪ್ಯಾರಿಸ್ ಒಲಿಂಪಿಕ್ಸ್ 2024 ರಿಂದ ಭಾರತಕ್ಕೆ ಹಿಂದಿರುಗಿದ ನಂತರ ಅವರಿಗೆ ಪ್ರಶಸ್ತಿಯನ್ನು ನೀಡಲಾಗುವುದು” ಎಂದು ಹೇಳಿದ್ದಾರೆ. ಸ್ವಪ್ನಿಲ್ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿರುವ ಕಂಬಲವಾಡಿ ಗ್ರಾಮದಿಂದ ಬಂದವರು.

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಮತ್ತು ಮಹಾರಾಷ್ಟ್ರ ಒಲಿಂಪಿಕ್ ಸಂಸ್ಥೆಯ ಮುಖ್ಯಸ್ಥ ಅಜಿತ್ ಪವಾರ್ ಅವರು ಸ್ವಪ್ನಿಲ್ ಕುಸಾಲೆ ಅವರನ್ನು ಅಭಿನಂದಿಸುತ್ತಾ, ” 50 ಮೀಟರ್ ರೈಫಲ್ 3 ಪೊಸಿಷನ್ಸ್ ಸ್ಪರ್ಧೆಯಲ್ಲಿ ದೇಶಕ್ಕೆ ಕಂಚಿನ ಪದಕ ಗೆದ್ದಿರುವ ಕೊಲ್ಹಾಪುರದ ನಮ್ಮವರೇ ಆದ ಸ್ವಪ್ನಿಲ್ ಅವರಿಗೆ ಅಭಿನಂದನೆಗಳು. ಅವರ ಪರಿಶ್ರಮ ಮತ್ತು ಕಠಿಣ ಪರಿಶ್ರಮವನ್ನು ನಾನು ಪ್ರಶಂಸಿಸುತ್ತೇನೆ, ಗೌರವಿಸುತ್ತೇನೆ. ನೀವು ಇನ್ನೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತೀರಿ ಮತ್ತು ಕೊಲ್ಹಾಪುರ ಮತ್ತು ಇಡೀ ಭಾರತವನ್ನು ಹೆಮ್ಮೆಪಡುವಂತೆ ಮಾಡುತ್ತೀರಿ ಎಂದು ನಾನು ಭಾವಿಸುತ್ತೇನೆ” ಎಂದು ತಿಳಿಸಿದ್ದಾರೆ.ಸ್ವಪ್ನಿಲ್ ಕುಸಾಲೆ ಒಲಿಂಪಿಕ್ ಪದಕ ಗೆದ್ದ ಮಹಾರಾಷ್ಟ್ರದ ಎರಡನೇ ಅಥ್ಲೀಟ್ ಆಗಿದ್ದಾರೆ. ಇವರಿಗಿಂತ ಮೊದಲು 1952ರ ಒಲಿಂಪಿಕ್ಸ್‌ನಲ್ಲಿ ಖಾಶಾಬಾ ದಾದಾಸಾಹೇಬ್ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದಿದ್ದರು. ಈ ಐತಿಹಾಸಿಕ ಸಾಧನೆಗೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಲ್ಲದೆ ಮಹಾರಾಷ್ಟ್ರ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಕೂಡ ಸ್ವಪ್ನಿಲ್ ಅವರನ್ನು ಅಭಿನಂದಿಸಿದ್ದರು…

ವರದಿ. ಮಹಾಲಿಂಗ ಗಗ್ಗರಿ, ಬೆಳಗಾವಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend