ಮನೆಗೆ ಆಕಸ್ಮಿಕ ಬೆಂಕಿ ತಗುಲಿ 4.5 ಲಕ್ಷ ರೂ. ವಸ್ತು ಹಾನಿ…!!!

Listen to this article

ಮನೆಗೆ ಆಕಸ್ಮಿಕ ಬೆಂಕಿ ತಗುಲಿ 4.5 ಲಕ್ಷ ರೂ. ವಸ್ತು ಹಾನಿ
ಗುಳೇದಗುಡ್ಡ; ಪಟ್ಟಣದ ಕುಂಬಾರ ಓಣಿಯ ಮೈಲಾರಿ ಸಂಗಪ್ಪ ಹೂಲಗೇರಿ ಎಂಬುವರ ಮನೆಗೆ ಆಕಸ್ಮಿಕವಾಗಿ ಶಾರ್ಟ್ ಸಕ್ರ್ಯೂಟ್‍ನಿಂದ ಮನೆಯ ಜಂತಿಗೆ ಬೆಂಕಿ ತಗುಲಿ ಮನೆಯಲ್ಲಿದ್ದ ಸುಮಾರು 4.50 ಲಕ್ಷ ರೂ ಮೊತ್ತದ ನಗದು, ಚಿನ್ನ, ಬೆಳ್ಳಿ, ಗೃಹಬಳಕೆಯ ವಸ್ತುಗಳು ಬೆಂಕಿಗೆ ಆಹುತಿಯಾದ ಘಟನೆ ಬೆಳಿಗ್ಗೆ ಶುಕ್ರವಾರ ನಡೆದಿದೆ.


ಮನೆಯವರು ಕೆಲಸ ನಿಮಿತ್ತ ಹೊರಗೆ ಹೋದ ಸಮಯದಲ್ಲಿ ಶಾರ್ಟ್ ಸಕ್ರ್ಯೂಟ್‍ನಿಂದಾಗಿ ಮನೆಯ ಜಂತಿಗೆ ಬೆಂಕಿತಗುಲಿದ್ದು, ಬೆಂಕಿ, ಹೊಗೆ ನೋಡಿದ ಅಕ್ಕಪಕ್ಕದವರು ಅಗ್ನಿಶಾಮಕ ದಳಕ್ಕೆ ಕರೆಮಾಡಿದ್ದು, ಅಗ್ನಿ ಶ್ಯಾಮಕದಳ ಬೆಂಕಿಯನ್ನು ನಂದಿಸಿದ್ದಾರೆ.
ಬೆಂಕಿಯಿಂದಾಗಿ ಇಡೀ ಮನೆ ಸಂಪೂರ್ಣ ಹಾನಿಯಾಗಿದ್ದು, ಮೆನೆಯಲ್ಲಿ 4 ತೊಲೆ ಬಂಗಾರದ ಆಭರಣ, 25 ತೊಲೆ ಬೆಳ್ಳಿ ಆಭರಣಗಳು ಹಾಗೂ ಗೃಹ ಬಳೆಕೆ ವಸ್ತುಗಳು ಸೇರಿ ಒಟ್ಟು 4.50 ಲಕ್ಷ ರೂ. ಹಾನಿಯಾಗಿದೆ. ಸ್ಥಳಕ್ಕೆ ಪಿಎಸ್‍ಐ ಸಿದ್ದಪ್ಪ ಯಡಹಳ್ಳಿ, ಪುರಸಭೆ ಮ್ಯಾನೇಜರ ಎ.ಎಚ್. ಮುದ್ದೇಬಿಹಾಳ, ಗ್ರಾಮಲೆಕ್ಕಾಧಿಕಾರಿ ಪಿ.ಪಿ. ತಳವಾರ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪ್ರಕರಣ ಸ್ಥಳೀಯ ಠಾಣೆಯಲ್ಲಿ ದಾಖಲಾಗಿದೆ…

ವರದಿ, ಸಚಿನ್ ಬಾಗಲಕೋಟ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend