ಶಿಕ್ಷಣದಿಂದ ಮಕ್ಕಳ ಭವಿಷ್ಯ ಉಜ್ವಲ: ಚಿಮ್ಮನಕಟ್ಟಿ…!!!

Listen to this article

ಶಿಕ್ಷಣದಿಂದ ಮಕ್ಕಳ ಭವಿಷ್ಯ ಉಜ್ವಲ: ಚಿಮ್ಮನಕಟ್ಟಿ
ಗುಳೇದಗುಡ್ಡ: ವಿದ್ಯೆ ವ್ಯಕ್ತಿಯ ಬದುಕನ್ನು ರೂಪಿಸುತ್ತದೆ. ಸಂಸ್ಕಾರ, ಸಂಸ್ಕತಿಯನ್ನು ಕಲಿಸುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಮಕ್ಕಳಿಗೆ ಶಿಕ್ಷಣ ನೀಡುವ ಕೆಲಸ ಮಾಡಬೇಕು. ಅಕ್ಷರದಿಂದ ಮಕ್ಕಳ ಉಜ್ವಲ ಭವಿಷ್ಯ ರೂಪಗೊಳ್ಳುತ್ತದೆ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.
ಅವರು ಸಮೀಪದ ಹಾನಾಪೂರ ಎಸ್.ಪಿ.ಗ್ರಾಮದಲ್ಲಿ ಜಿಲ್ಲಾಪಂಚಾಯತಿ, ತಾಪಂ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ 2018-19ನೇ ಸಾಲಿನ ಠೇವಣಿ ವಂತಿಕೆ ಅಡಿಯಲ್ಲಿ ನಿರ್ಮಿಸಿದ ಹಾಗೂ 2019-20ನೇ ಸಾಲಿನ ನಬಾರ್ಡ 25 ಆರ್.ಐ.ಡಿ.ಎಫ್.ಯೋಜನೆಯ ಅಡಿಯಲ್ಲಿ ನಿರ್ಮಿಸಲಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಶಾಲಾ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿ, ಬಡತನದಿಂದಾಗಿ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡದೇ ಮಕ್ಕಳಿಗೆ ಶಿಕ್ಷಣ ನೀಡಬೇಕು. ಸಮಾಜದಲ್ಲಿ ತಲೆ ಎತ್ತುವಂತಹ ಸಾಧನೆ ಶಿಖರ ಏರುತ್ತಾರೆ. ಆಸಕ್ತಿಯಿಂದ ಕಷ್ಟ ಪಟ್ಟು ಓದಿದ ವ್ಯಕ್ತಿ ಸಮಾಜದಲ್ಲಿ ದೊಡ್ಡ ಸ್ಥಾನಮಾನ ಗಳಿಸುತ್ತಾರೆ ಎಂದರು.
ಶ್ರದ್ದಾನಂದಮಠದ ವಿದ್ಯಾನಂದ ಶ್ರೀಗಳು ಸಾನಿಧ್ಯ ವಹಿಸಿದ್ದರು. ಇದೇ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಜಗದೀಶ ಹಿರೇಗೌಡರ, ಉಪಾಧ್ಯಕ್ಷೆ ಸಂಗೀತಾ ಪಮ್ಮಾರ, ಎಸ್.ಡಿ.ಎಂ.ಸಿ.ಅಧ್ಯಕ್ಷ ಪರಸಪ್ಪ ರಾಠೋಡ ಅವರು ಶಾಸಕ ಭೀಮಸೇನ್ ಚಿಮ್ಮನಕಟ್ಟಿ ಹಾಗೂ ಗಣ್ಯರನ್ನು ಸನ್ಮಾನಿಸಿದರು. ಬಳಿಕ ಶಾಲಾ ಮಕ್ಕಳಿಂದ ಸಾಂಸ್ಕತಿಕ ಕಾರ್ಯಕ್ರಮಗಳು ಜರುಗಿದವು.
ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯರಾದ ಪುಂಡಲಿಕ ನಾಯಕ, ಸೋಮು ರಾಠೋಡ, ಕರಿಯವ್ವ ಮಾದರ, ಪುಂಡಲಿಕ ಕಂಬಳಿ, ಮಂಜುನಾಥ ಗೌಡರ, ಜ್ಞಾನೇಶ್ವರ ಮೂಂದಿನಮನಿ, ಹನಮಂತ ಹಿರೇಗೌಡರ, ಮೀನಾಕ್ಷಿ ಪಮ್ಮಾರ, ಅಶ್ವಿನಿ ನಾಯಕ, ಮಂಜುಳಾ ಪಮ್ಮಾರ, ಹನಮವ್ವ ಮಾದರ, ಅನಸವ್ವ ಚವ್ಹಾಣ, ಮಲ್ಲಪ್ಪ ಜಗ್ಗಲ, ಬಿಇಓ ಬಸವರಾಜ ಹಳಗೇರಿ, ಅಕ್ಷರ ದಾಸೋಹ ಅಧಿಕಾರಿ ಎಂ.ಬಿ. ದೊಡ್ಡಪ್ಪನವರ, ವೈ.ಎಸ್.ಮಜ್ಜಗಿ, ಪಿ.ವಿ.ಜಾಧವ, ಸಿದ್ದಲಿಂಗಪ್ಪ ಪಟ್ಟಣಶೆಟ್ಟಿ, ವಿ.ಪಿ.ದಾಸರ, ಬಾಪಟ, ಶಾಲೆ ಮುಖ್ಯಶಿಕ್ಷಕಿ ಎಸ್.ಜಿ. ತೋಟಗೇರ, ಶಿಕ್ಷಕ ವಸಂತ ಪಮ್ಮಾರ, ಪಿಡಬ್ಲೂಡಿ ಎಇಇ ಎ.ಎಸ್. ಆಡೀನ, ಪಿಡಿಓ ಎಸ್.ಬಿ. ಅಂಕೋಲೆ, ಪಾಂಡು ದಾಸರ, ಎಸ್.ಬಿ. ಪಟ್ಟನಶೆಟ್ಟಿ, ಕಿರಿಯ ಅಭಿಯಂತ ಎ.ಎಚ್. ಮಕಾನದಾರ, ಸಿಆರ್‍ಪಿ ರಾಮಚಂದ್ರ ಭಾಪಟ್, ಇತರರು ಇದ್ದರು…

ವರದಿ. ಸಚಿನ್ ಬಾಗಲಕೋಟ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend