ರಂಗಭೂಮಿ ಕಲಾವಿದರ ಅಭಿವೃದ್ಧಿ ಅವಶ್ಯ : ಬರಗುಂಡಿ…!!!

Listen to this article

ರಂಗಭೂಮಿ ಕಲಾವಿದರ ಅಭಿವೃದ್ಧಿ ಅವಶ್ಯ : ಬರಗುಂಡಿ

ಗುಳೇದಗುಡ್ಡ : ಗ್ರಂಥ ರಚನೆ, ಸಂಪದಾನೆ ಕಷ್ಟದ ಕೆಲಸ. ಸಾಕಷ್ಟು ಅಲೆದಾಟ, ವಿಷಯ ಗ್ರಹಿಕೆ, ಸಂಗ್ರಹದ ಮೂಲಕ ಪುರಾಣ ಗ್ರಂಥ ರಚನೆಗೊಂಡಿದೆ. ಅದರಂತೆ ಗುಳೇದಗುಡ್ಡದ ಕುರುಹಿನಶೆಟ್ಟಿ ಸಮಾಜದ ಹವ್ಯಾಸಿ ಕಲಾವಿದರ ಕುರಿತಾಗಿ ಬರೆದ ಗ್ರಂಥವೂ ಚಿಕ್ಕದಾಗಿದ್ದರೂ ಅನೇಕ ರಂಗಕಲಾವಿದರ ಮಾಹಿತಿ ಸಂಗ್ರಹಿಸಲಾಗಿದೆ. ಎಂದು ವಿಶ್ರಾಂತ ಪ್ರಾಚಾರ್ಯ, ಚಿಂತಕ ಸಿದ್ದಲಿಂಗಪ್ಪ ಬರಗುಂಡಿ ಹೇಳಿದರು.
ಅವರು ಭಾನುವಾರ ಪಟ್ಟಣದ ಗಿರೀಶ ಪ್ರಕಾಶನದ ಆಶ್ರಯದಲ್ಲಿ ವಿಶ್ರಾಂತ ಪ್ರಾಧ್ಯಾಪಕ ಮಹಾದೇವಯ್ಯ ನೀಲಕಂಠಮಠ ರಚಿಸಿದ ಎರಡು ಗ್ರಂಥಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿ, ನೀಲಕಂಠಮಲ್ಲಿಕಾರ್ಜುನ ಪುರಾಣ ಶಾಸ್ತ್ರಬದ್ಧವಾಗಿ ಗ್ರಂಥ ರಚನೆಯಾಗಿದೆ. ಇದು ಕುರುಹಿನಶಟ್ಟಿ ಸಮಾಜದ ಧರ್ಮ ಗ್ರಂಥವೆಂತಲೂ ಕರೆಯಬಹುದು. ಇಂದು ರಂಗಭೂಮಿಯ ಕಲಾವಿದರ ಅಭಿವೃದ್ಧಿ ಅವಶ್ಯಕವಾಗಿದೆ. ಕಲಾವಿದರಿಗೆ ಸರ್ಕಾರ ಸಾಲ ಸೌಲಭ್ಯ, ಸಹಾಯ ನೀಡುವ ಕೆಲಸ ಮಾಡಲಿ ಎಂದರು.
ಧಾರವಾಡದ ವಿಶ್ರಾಂತ ಪ್ರಾಚಾರ್ಯ ಟಿ.ಬಿ. ಚಿಲಕವಾಡ ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಶ್ರೀ ಗುರುಬಸವ ದೇವರು ದಿವ್ಯ ಸಾನಿಧ್ಯವಹಿಸಿದ್ದರು.
ಹುಬ್ಬಳ್ಳಿ ವೀರಭಿಕ್ಷಾವರ್ತಿಮಠದ ಪೀಠಾಧ್ಯಕ್ಷ ಶ್ರೀಶಿವಶಂಕರ ಶಿವಾಚಾರ್ಯ ಶ್ರೀಗಳು, ಗುರುಸಿದ್ದೇಶ್ವರ ಬ್ರಹನ್ಮಠದ ಬಸವರಾಜ ಪಟ್ಟದಾರ್ಯ ಶ್ರೀಗಳು, ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಕಲೆಗೆ ತಮ್ಮ ಜೀವ ಸವೆದು ಹೋದ ಕಲಾವಿದರನ್ನು ಈ ಗ್ರಂಥ ಗುರುತಿಸುವ ಕೆಲಸ ಮಾಡಿದೆ. ಒಂದು ಜನಾಂಗದವರ ಕಲೆ ಮತ್ತು ಸಂಸ್ಕøತಿಯ ಪರಿಚಯಿಸುವ ಕೆಲಸವನ್ನು ಲೇಖಕರು ಮಾಡಿದ್ದಾರೆ. ಅವರ ಶ್ರಮ ಸಾರ್ಥಕವಾದುದು ಎಂದರು.
ಲೇಖಕ ಮಹಾದೇವಯ್ಯ ನೀಲಕಂಠಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಪಾದನಾ ಕೃತಿಯಾಗಿರುವ ಶ್ರೀನೀಲಕಂಠ ಮಲ್ಲಿಕಾರ್ಜುನ ಪುರಾಣದ ಹಸ್ತಪ್ರತಿಯನ್ನು ಸಂಗ್ರಹಿಸಿ ಮುದ್ರಣ ಮಾಡಿರುವುದಾಗಿ ಹಾಗೂ ಗುಳೇದಗುಡ್ಢ ಕುರುಹಿನಶೆಟ್ಟಿ ಹವ್ಯಾಸಿ ಕಲಾವಿದರ ಕುರಿತಾದ ಸಂಕ್ಷಿಪ್ತ ಮಾಹಿತಿ ಸಂಗ್ರಹಿಸಿ ಪುಸ್ತಕ ರೂಪ ಕೊಟ್ಟಿದ್ದೇನೆ. ಇದಕ್ಕೆ ಬಳಹ ವರ್ಷಗಳ ಪರಿಶ್ರಮವೂ ಇದೆ ಎಂದು ಹೇಳಿದರು.
ಬಸವಕೇಂದ್ರ, ಜೇರಕಲ್ ನಾಟ್ಯ ಸಂಘ, ನಗ್ಲಿಪೇಟೆ ಮ್ಯಾಳ, ಜಾಗತಿಕ ಲಿಂಗಾಯತ ಮಹಾಸಭಾ, ನೀಲಕಂಠಪ್ರಿಯ ಮಹಿಳಾ ಸಂಘದ ಸದಸ್ಯರು ಇದ್ದರು.
ಕಾರ್ಯಕ್ರಮದಲ್ಲಿ ಈರಣ್ಣ ಹಳ್ಳಿ, ಡಾ. ರಾಜಶೇಖರ ಬಸುಪಟ್ಟದ, ಡಾ. ಎಸ್.ವಿ. ಬನ್ನಿ, ಸಂಗಮೇಶ ಹುನಗುಂದ, ಸಂಗಣ್ಣ ಚಿಕ್ಕಾಡಿ, ರಾಜು ಜಾಲಿಗಿಡದ, ಚಂದ್ರಶೇಖರ ಹೆಗಡೆ, ಗೋಪಾಲ ಹಳ್ಳೂರ, ಸಂಜಯ ಬರಗುಂಡಿ, ರಾಚಣ್ಣ ಕೆರೂರ, ದ್ರಾಕ್ಷಾಯಣಿ ಹಿರೇಮಠ, ಡಾ.ಗೀರಿಶ ನೀಲಕಂಠಮಠ, ಮುರಗೇಶ ಶೇಖಾ, ರಮೇಶ ಅಗಸಿನಮನಿ, ರವಿ ಕಲಕೇರಿ, ಪೋಲಿಸಪ್ಪ ಮಾನುಟಗಿ ಮತ್ತಿತರರು ಇದ್ದರು…

ವರದಿ. ಸಚಿನ್ ಬಾಗಲಕೋಟ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend