ಗುಳೇದಗುಡ್ಡದ ವೆಂಕಟೇಶ ಕನ್ನಡ ಮಾಧ್ಯಮ ಶಾಲೆಯಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರ ನಡೆಯಿತು…!!!

Listen to this article

ಹಲ್ಲುಗಳ ಆರೋಗ್ಯ ಕಾಪಾಡಿಕೊಳ್ಳಿ: ಮಾಲಪಾಣಿ
ಗುಳೇದಗುಡ್ಡ: ಮನುಷ್ಯನ ಆರೋಗ್ಯದಲ್ಲಿ ಬಾಯಿ ಆರೋಗ್ಯವೂ ಪ್ರಮುಖ ಪಾತ್ರವಹಿಸುತ್ತದೆ. ನಿತ್ಯ ಹಲ್ಲು, ಬಾಯಿಯನ್ನು ಸ್ವಚ್ಛತೆ ಮಾಡಿಕೊಳ್ಳಬೇಕು. ಗಡ್ಡೆಗೆಣಸು, ತರಕಾರಿ, ಹಣ್ಣು, ರಾಗಿಯಂತಹ ಖನಿಜಯುಕ್ತ ಆಹಾರ ಸೇವಿಸಬೇಕು. ಹಲ್ಲುಗಳಲ್ಲಿ ತೊಂದರೆ ಕಂಡುಬಂದರೆ ವೈದ್ಯರ ಬಳಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಸ್ಥಳೀಯ ಮಾಹೇಶ್ವರಿ ವಿದ್ಯಾಪ್ರಚಾರಕ ಮಂಡಳದ ಚೇರಮನ್ನ ಕಮಲಕಿಶೋರ ಮಾಲಪಾಣಿ ಹೇಳಿದರು.
ಅವರು ಸ್ಥಳೀಯ ವೆಂಕಟೇಶ ಕನ್ನಡ ಮಾಧ್ಯಮ ಶಾಲೆಯಲ್ಲಿ ಇಲಕಲ್ಲದ ಶ್ರೀ ರಾಮನುಜಾಚಾರ್ಯ ಪೌಂಡೇಶನ್ ಹಾಗೂ ಇಲಕಲ್ಲದ ಮಾಹೇಶ್ವರಿ ಆಸ್ಪತ್ರೆಗಳ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ವೆಂಕಟೇಶ ಕನ್ನಡ ಮಾಧ್ಯಮ ಪೂರ್ವ ಪ್ರಾಥಮಿಕ, ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಮಕ್ಕಳಿಗೆ ಉಚಿತ ಆರೋಗ್ಯ ಹಾಗೂ ದಂತ ತಪಾಸಣಾ ಶಿಬಿರದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳು ಶಿಕ್ಷಣದೊಂದಿಗೆ ಆರೋಗ್ಯ ಕಾಪಾಡಿಕೊಳ್ಳಬೇಕು. ಉತ್ತಮ ಆಹಾರ ಸೇವಿಸುವುದರಿಂದ ಆರೋಗ್ಯ ಸಂಪತ್ತು ಹೆಚ್ಚಿಸುತ್ತದೆ ಎಂದರು.
ಚಿಕ್ಕಮಕ್ಕಳ ತಜ್ಞ ಡಾ.ಪವನಕುಮಾರ ಧರಕ ಮಾತನಾಡಿ, ಆಹಾರ ಪದಾರ್ಥಗಳನ್ನು ಬೇಗಬೇಗ ಸೇವಿಸುವುದರಿಂದ ಆರೋಗ್ಯದಲ್ಲಿ ತೊಂದರೆ ಉಂಟಾಗುತ್ತದೆ. ಮಕ್ಕಳು ಹೆಚ್ಚಾಗಿ ಕುರುಕುಲು ತಿಂಡಿಗಳನ್ನು ತಿನ್ನದೇ ಪೌಷ್ಠಿಕ ಆಹಾರ ಸೇವಿಸಬೇಕು. ಉತ್ತಮ ಆರೋಗ್ಯ ಇದ್ದಾಗ ಮಾತ್ರ ಆಸಕ್ತಿಯಿಂದ ಓದಲು ಸಾಧ್ಯವಾಗುತ್ತದೆ ಎಂದರು.
ಡಾ. ಪ್ರಭು ಮದಭಾವಿ, ಚಿಕ್ಕ ಮಕ್ಕಳ ಶಸ್ತ್ರ ಚಿಕಿತ್ಸಕರಾದ ಡಾ. ವಿಕ್ರಂ ನಾಗಠಾಣ , ಚಿಕ್ಕ ಮಕ್ಕಳ ತಜ್ಞರಾದ ಡಾ. ಅರ್ಷದ ಭಾಗವಾನ, ದಂತ ವೈದ್ಯರುಗಳಾದ ಡಾ. ರಶ್ಮಿ ದರಕ, ಡಾ. ಸಾದಿಯಾ, ಡಾ.ಕಾರ್ತಿಕ ಅವರು ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಮಾಡಿ, ಶಿಬಿರದಲ್ಲಿ ಉಚಿತವಾಗಿ ಔಷಧಿಗಳನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಗೌರವಾಧ್ಯಕ್ಷ ಬಂಕಟಲಾಲ್ ದೂತ, ಉಪಚೇರಮನ್ನ ಶ್ರೀಲಕ್ಷ್ಮೀ ನಿವಾಸ ಕಾಬ್ರಾ, ಕಾರ್ಯದರ್ಶಿ ಗೋವಿಂದಜಿ ಬಜಾಜ್, ಸಂಸ್ಥೆಯ ಕಾರ್ಯಕಾರಿ ಮಂಡಳಿ, ಮಾಹೇಶ್ವರಿ ಸಭಾಧ್ಯಕ್ಷರಾದ ಗೋಪಾಲ ಮಾಲಪಾಣಿ, ಕಾರ್ಯದರ್ಶಿ ನಂದಲಾಲ ಝಂವರ, ಪ್ರಾಥಮಿಕ ಶಾಲೆಯ ಶಾಲಾ ಸುಧಾರಣಾ ಸಮಿತಿಯ ಸದಸ್ಯರು, ವೆಂಕಟೇಶ್ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕರು ಆರ್. ವಿ. ಪಾಟೀಲ ಹಾಗೂ ಸಿಬ್ಬಂದಿ ವರ್ಗದವರು, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ಬಿ ಆರ್. ಪಾಟೀಲ ಹಾಗು ಶಿಕ್ಷಕರು ಇದ್ದರು…

ವರದಿ. ಸಚಿನ್ ಬಾಗಲಕೋಟ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend