ದೈಹಿಕ, ಮಾನಸಿಕ ವೃದ್ಧಿಗೆ ಕ್ರೀಡಾಕೂಟಗಳು ಸಹಕಾರಿ: ಪ್ರೊ.ಎಂ ಮುನಿರಾಜು…!!!

Listen to this article

ವಿಎಸ್‌ಕೆ ವಿವಿಯಲ್ಲಿ ಪ್ರೊ-ಕಬಡ್ಡಿ ಪ್ರಥಮ ಆವೃತ್ತಿದೈಹಿಕ, ಮಾನಸಿಕ ವೃದ್ಧಿಗೆ ಕ್ರೀಡಾಕೂಟಗಳು ಸಹಕಾರಿ: ಪ್ರೊ.ಎಂ ಮುನಿರಾಜು

ಬಳ್ಳಾರಿ,:ಸದೃಢ ದೇಹಕ್ಕೆ ಆಟಗಳು ಉಪಯುಕ್ತವಾಗಿದ್ದು, ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ವೃದ್ಧಿಗೆ ಕ್ರೀಡಾಕೂಟಗಳು ಸಹಕಾರಿಯಾಗುತ್ತವೆ ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಎಂ ಮುನಿರಾಜು ಅವರು ಹೇಳಿದರು.
ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಮುಖ್ಯ ಆವರಣ ಬಯಲು ರಂಗಮAದಿರದಲ್ಲಿ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ವಿಭಾಗದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ವಿಎಸ್‌ಕೆಯು ಪ್ರೊ ಕಬಡ್ಡಿ ಸೀಸನ್-1 ಕಾರ್ಯಕ್ರಮ ಉದ್ಘಾಟಿಸಿ ಚಾಲನೆ ನೀಡಿದರು.
ವಿವಿಯ ವಿದ್ಯಾರ್ಥಿಗಳು ರಾಷ್ಟçಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಬೇಕು. ವಿವಿಯ ಕ್ರೀಡಾ ವಿದ್ಯಾರ್ಥಿಗಳಿಗೆ ಅಗತ್ಯವಾದ ಎಲ್ಲ ಸೌಲಭ್ಯವನ್ನು ಒದಗಿಸಲಾಗುವುದು. ಮುಂಬರುವ ದಿನಗಳಲ್ಲಿ ವಿವಿಯ ಎಲ್ಲ ವಿಭಾಗಗಳ ವಿದ್ಯಾರ್ಥಿಗಳಿಗಾಗಿ ಕ್ರೀಡಾಕೂಟವನ್ನು ಆಯೋಜಿಸಲಾಗುವುದು ಎಂದು ಹೇಳಿದರು.
ವಿಶ್ವವಿದ್ಯಾಲಯದ ಕುಲಸಚಿವರಾದ ಎಸ್.ಎನ್ ರುದ್ರೇಶ್ ಅವರು ಮಾತನಾಡಿ, ವಿವಿಯ ಮುಖ್ಯ ಆವರಣ ಹಾಗೂ ಸ್ನಾತಕೋತ್ತರ ಕೇಂದ್ರ ನಂದಿಹಳ್ಳಿಯಲ್ಲಿ ಕ್ರೀಡೆಗಳನ್ನು ಉತ್ತೇಜಿಸಲು ವಿವಿಯಿಂದ ಅಗತ್ಯ ಸೌಲಭ್ಯವನ್ನು ಒದಗಿಸುವುದಾಗಿ ಹೇಳಿದರು.
ಕಬಡ್ಡಿ ಪಂದ್ಯಾವಳಿಯ ನಿರ್ಣಾಯಕಾರಾಗಿ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಗಳಾದ ಶೇಕ್ಷಾವಲಿ, ವೀರನಗೌಡ, ವೀರಾಂಜನೇಯ ಹಾಗೂ ಪಂಪನಗೌಡ ಇದ್ದರು. ಕೂಡ್ಲಿಗಿಯ ಅಮೀತ್ ಪಂದ್ಯದ ಕಾಮೆಂಟರಿ ಮಾಡಿದರು. ಪ್ರಥಮ ಆವೃತ್ತಿಯ ಪ್ರೊ-ಕಬಡ್ಡಿ ಸೀಸನ್‌ನಲ್ಲಿ ಒಟ್ಟು ಐದು ತಂಡಗಳು ಭಾಗವಹಿದ್ದವು.
ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ಶಶಿಧರ ಕೆಲ್ಲೂರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಭಾಗದ ಅತಿಥಿ ಉಪನ್ಯಾಸಕರಾದ ರಾಜೇಶ್ ಸಿ. ನಿರೂಪಿಸಿದರು. ರಮೇಶ್ ಕೆ.ಡಿ ವಂದಿಸಿದರು. ಯೋಗ ಅಧ್ಯಯನ ವಿಭಾಗದ ಅತಿಥಿ ಉಪನ್ಯಾಸಕರಾದ ಮಹೇಶಬಾಬು, ಸಂಶೋಧನಾ ವಿದ್ಯಾರ್ಥಿಗಳು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು…

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend