ದತ್ತಿ ಉಪನ್ಯಾಸ ವಚನ ಗಾಯನ ಕಾರ್ಯಕ್ರಮ ನಮ್ಮ ಬದುಕಿನಲ್ಲಿ ಶರಣರ ಆಶಯ ಅಳವಡಿಕೆ ಅತ್ಯವಶ್ಯ…!!!

Listen to this article

ದತ್ತಿ ಉಪನ್ಯಾಸ ವಚನ ಗಾಯನ ಕಾರ್ಯಕ್ರಮ
ನಮ್ಮ ಬದುಕಿನಲ್ಲಿ ಶರಣರ ಆಶಯ ಅಳವಡಿಕೆ ಅತ್ಯವಶ್ಯ

12ನೇ ಶತಮಾನದ ಶರಣ ಶರಣೆಯರ ಜೀವನ ಮತ್ತು ಸಾಗಿದ ಮಾರ್ಗ ರಚಿಸಿದ ಸಾಹಿತ್ಯ ಅದರ್ಶಮಯ .ಯುವ ಸಮುದಾಯ ಶರಣರ ಆದರ್ಶವನ್ನು ಪಾಲಿಸಿದರೆ ಸಮಾಜ ಸುಂದರವಾಗುವುದೆಂದು ಕಾರ್ಯಕ್ರಮದ ಉದ್ಘಾಟಿಸಿ ಶರಣ ಸಾಹಿತ್ಯ ಪರಿಷತ್ತಿನ ವಿಜಯನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಸಾಹಿತಿಯನ್ನು ರವಿಕುಮಾರ್ ಮಾತನಾಡಿ 12ನೇ ಶತಮಾನದಲ್ಲಿ ದಯವೇ ಧರ್ಮದ ಮೂಲವಯ್ಯ ಎಂದು ಶರಣರು ಸಾರಿದ್ದಾರೆ. ಇತ್ತೀಚಿನ ವಾತಾವರಣ ನೋಡುತ್ತಿದ್ದರೆ ಭಯವೇ ಧರ್ಮದ ಮೂಲವಯ್ಯ ಎನ್ನುವಂತಾಗಿ ರುವುದು ನೋವಿನ ಸಂಗತಿಯಾಗಿದೆ. ಶರಣ ಸಾಹಿತ್ಯ ಪರಿಷತ್ತು ಸ್ಥಾಪಿಸಿದ ಸುತ್ತೂರಿನ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರ ಜನ್ಮದಿನದ ನಿಮಿತ್ತ ಸಂಸ್ಥಾಪನ ದಿನವನ್ನಾಗಿ ಎಲ್ಲೆಡೆ ಆಚರಿಸಲಾಗುತ್ತಿದೆ ಎಂದು ತಿಳಿಸಿದರರು.
ವಿಶ್ವದಲ್ಲೇ ಶ್ರೇಷ್ಠ ಧರ್ಮ ಶರಣ ಧರ್ಮ .ಶ್ರೇಷ್ಠ ಸಾಹಿತ್ಯ .ವಚನ ಸಾಹಿತ್ಯಕ್ಕೆ
ಬೌದ್ದ ಧರ್ಮಕ್ಕೆ ದೊರೆತ ರಾಜಾ ಶ್ರಯ ವಿಶ್ವ ವ್ಯಾಪ್ತಿಯನ್ನು ,ಶರಣ ಧರ್ಮಕ್ಕೆ ದೊರೆತ್ತಿದ್ದರೆ ವಿಶ್ವ ಮಾನ್ಯತೆಯನ್ನು
ಪಡೆಯುತ್ತಿತ್ತು ನುಡಿದರು .ಹೊಸಹಳ್ಳಿ ಪಟ್ಟಣದಲ್ಲಿ ನಡೆದ ಬಾಲಕಿಯರ ಪ್ರೌಢ ಶಾಲೆಯಲ್ಲಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಆಯೋಜಿಸಿದ ಹುಲಿಕೆರೆ ಶ್ರೀಮತಿ ವಿಶಾಲಾಕ್ಷಮ್ಮ ಮತ್ತು ಷಡಕ್ಷರಿ ಎಂ ದತ್ತಿ ಉಪನ್ಯಾಸ ಕಾರ್ಯಕ್ರಮ ಕುರಿತು ವಚನ ಸಾಹಿತ್ಯದಲ್ಲಿ ವೈಚಾರಿಕತೆ / ಸಾವಯವ ಕೃಷಿ ಜಾಗೃತಿ ಕುರಿತು ನಿವೃತ್ತಿ ಉಪನ್ಯಾಸಕರಾದ ವಸಂತ್ ಸಜ್ಜನ್ ಮಾತನಾಡಿ 12ನೇ ಶತಮಾನದ ಬಸವಣ್ಣನವರ ಕಾಯಕ ದಾಸೋಹ ತತ್ವಕ್ಕೆ ಮಾರುಹೋಗಿ ಅಫ್ಘಾನಿಸ್ತಾನದಿಂದ ಬೋoತಾದೇವಿ ನಾನಾ ಭಾಗದಿಂದ ಕಲ್ಯಾಣಕ್ಕೆ ಆಗಮಿಸಿದ್ದರು. ಬಸವಣ್ಣನವರ ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಿ ಸಮ ಸಮಾಜ ನಿರ್ಮಾಣ ಮಾಡುವ ಉದ್ದೇಶದಿಂದ ಕಲ್ಯಾಣದಲ್ಲಿ ಎಲ್ಲರೊಳಗೊಂಡ ಶರಣರ ಕೂಟವನ್ನು ರಚಿಸಿ ಸಮಾಜದ ಅಭ್ಯುದಯಕ್ಕೆ ಶ್ರಮಿಸಿದವರು ಎಂದು ಹೇಳಿದರು.
ವೈಚಾರಿಕ ಚಿಂತನೆಯ ವಚನಗಳಿಂದ ಸಮಾಜದಲ್ಲಿ ಬೇರುಬಿಟ್ಟ ಜಾತಿ ತಾರತಮ್ಯದ ವಿರುದ್ಧ ಹೋರಾಡಿದವರು ಎಂದು ತಿಳಿಸಿದರು.
ಶರಣ ಸಾಹಿತ್ಯ ಸರಳ ಅತೀ ಸುಭಲ ಎಂದು ಭಾವಿಸಿದರು. ಅಥೈಯಿಸುವುದು ಬಹು ಕಠೀಣ, ಮಾರ್ಮಿಕವಾದ ವಿಶ್ವವ್ಯಾಪ್ತಿಯನ್ನು ಪಡೆದ ಅನುಭವಸಾರ ವಚನ ಸಾಹಿತ್ಯದಲ್ಲಿದೆ ಎಂದು ಕವಿ ಯು,ಜಗನ್ನಾಥ ನುಡಿದರು.

ಗಣ್ಯರಿಂದ ಜಗಜೋತ್ಸಿ ಬಸವೇಶ್ವರರ ಮತ್ತು ಲಿಂ|| ಪರಮಪೂಜ್ಯ ಜಗದ್ಗುರು ಡಾ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮೂಲಕ ಕಾರ್ಯಕ್ರಮ ಉದ್ಟಾಟಿಸಲಾಯಿತು
ಅಧ್ಯಕ್ಷತೆ ವಹಿಸಿದರು ಸಾ. ಮ. ಸಂಗಮೇಶ್ವರಯ್ಯ ಅಧ್ಯಕ್ಷರು ಶರಣ ಸಾಹಿತ್ಯ ಪರಿಷತ್ ತಾಲೂಕ ಘಟಕ ಕಾರ್ಯಕ್ರಮದಲ್ಲಿ . ತಾಲೂಕು ಶರಣ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಕೆ ಎಸ್ ವೀರೇಶ್ , ಶರಣ ಸಾಹಿತ್ಯ ಪರಿಷತ್ ತಾಲೂಕು ಕದಳಿ ಘಟಕದ ಅಧ್ಯಕ್ಷರಾದ ತಿಪ್ಪೀರಮ್ಮ ಸಕಲಪುರ ದ ಹಟ್ಟಿ, ಬಾಲಕಿಯರ ಪ್ರೌಢಶಾಲೆಯ ಮತ್ತು ಸಿಬ್ಬಂದಿ ವರ್ಗ ವಿದ್ಯಾರ್ಥಿ ವಿದ್ಯಾರ್ಥಿನಿಯರು ಇತರರು ಉಪಸ್ಥಿತರಿದ್ದರು…

ವರದಿ. ಎಂ. ಬಸವರಾಜ್. ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend