ಹುಲಿಕುಂಟೆ: ಅಡವಿ ಆಂಜನೇಯಸ್ವಾಮಿಗೆ ಪರುವು ಕಾರ್ಯಕ್ರಮ…!!!

Listen to this article

ಹುಲಿಕುಂಟೆ: ಅಡವಿ ಆಂಜನೇಯಸ್ವಾಮಿಗೆ ಪರುವು ಕಾರ್ಯಕ್ರಮ
ಗುಡೇಕೋಟೆ:- ಹೋಬಳಿ ವ್ಯಾಪ್ತಿಯಲ್ಲಿ ಬರುವ ಹುಲಿಕುಂಟೆ ಅರಣ್ಯ ಪ್ರದೇಶದಲ್ಲಿರುವ ರಾಮನ ಬಂಟ ಅಡವಿ ಆಂಜನೇಯ ಸ್ವಾಮಿಗೆ ಪ್ರತಿ ವರ್ಷದಂತೆ ಈ ವರ್ಷವೂ ಶ್ರಾವಣದ ಶನಿವಾರದಂದು ಪರುವು ಕಾರ್ಯಕ್ರಮ ಮಾಡಲಾಗಿದ್ದು ಹುಲಿಕುಂಟೆಯ ಅರಣ್ಯ ಭಾಗದಲ್ಲಿರುವ ಆಂಜನೇಯ ಸ್ವಾಮಿ, ಪರುವು ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯ ಭಕ್ತಾದಿಗಳು ಆಗಮಿಸಿದ್ದು ಸ್ವಾಮಿಯನ್ನು ಭಕ್ತಿಯಿಂದ ನೆನೆದು ಪೂಜ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸ್ವಾಮಿಯ ಪ್ರಸಾದ ಸ್ವೀಕರಿಸಿ ಭಕ್ತಿಯಿಂದ ಮೆರೆದರು ಹುಲಿಕುಂಟೆ ಗ್ರಾಮದ ಭಕ್ತಾದಿಗಳು ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಮಹಿಳೆಯರು ಮಕ್ಕಳು ಸ್ವಾಮಿಯ ಶನಿವಾರದ ಪರುವು ಕಾರ್ಯಕ್ರಮದಲ್ಲಿ ಭಾಗವಹಿಸಿ ಭಕ್ತಿ ಮೆರೆದರು ಹಿಂದೂ ಧರ್ಮದಲ್ಲಿ ದಾನಕ್ಕೆ ಬಲು ಮಹತ್ವ ಅನ್ನದಾನ ಶ್ರೇಷ್ಠದಾನ ಎಂಬ ಮಾತು ಕೂಡ ನಮ್ಮಲ್ಲಿವೆ ಅಂದರೆ ಪ್ರತಿಯೊಬ್ಬರು ಅವರವರ ಯಥಾ ಶಕ್ತಿ ದಾನ ಧರ್ಮಾದಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು ಎನ್ನುತ್ತವೆ ನಮ್ಮ ಪ್ರಮುಖ ಗ್ರಂಥಗಳು ಹೀಗೆ ನಿಸ್ವಾರ್ಥವಾಗಿ ಶ್ರದ್ಧೆಯಿಂದ ಮಾಡುವ ಕಾರ್ಯಗಳಿಗೆ ಸದಾ ದೇವರ ಆಶೀರ್ವಾದ ಇರುತ್ತದೆ ಎಂಬುದು ನಂಬಿಕೆಯಾಗಿದೆ
ಪಾವನ ಪುತ್ರ ಹನುಮಂತನ ಪೂಜೆಗೆ ನಮ್ಮಲ್ಲಿ ಬಲು ಮಹತ್ವವಿದೆ ಸಂಕಟವಿಮೋಚನ ಎಂದೆ ಆಂಜನೇಯ ಸ್ವಾಮಿಗೆ ಹೆಸರು, ಶ್ರೀರಾಮ ಭಕ್ತ ಹನುಮಂತ ದೇವರನ್ನು ಭಕ್ತಿಯಿಂದ ಪೂಜಿಸಿದರೆ ಎಲ್ಲಾ ಕಷ್ಟಗಳು ಪರಿಹಾರವಾಗುತ್ತವೆ ಎಂಬುದು ಆಸ್ತಿಕರ ಬಲವಾದ ನಂಬಿಕೆ. ವಾರದ ಪ್ರತಿದಿನ ಒಂದೊಂದು ದೇವರನ್ನು ಪೂಜಿಸುತ್ತಾ ಭಕ್ತರು ಮಾನಸಿಕ ನೆಮ್ಮದಿ ಕಾಣುತ್ತಾರೆ ಅಂತೆಯೇ ಮಂಗಳವಾರ ಮತ್ತು ಶನಿವಾರ ಹನುಮಂತ ದೇವರಿಗೆ ಮೀಸಲು ಈ ದಿನ
ಆಂಜನೇಯ ಸ್ವಾಮಿಯನ್ನು ಏಕ ಚಿತ್ತದಿಂದ ಪೂಜಿಸಿದರೆ ಬಂದಂತ ಕಷ್ಟಗಳು ಮತ್ತು ಬರುವಂತ ಕಷ್ಟಗಳು ದೂರವಾಗುತ್ತವೆ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಯಾಗುತ್ತದೆ ಎಂಬುದು ಹುಲಿಕುಂಟೆ ಗ್ರಾಮದ ಭಕ್ತಾದಿಗಳ ನಂಬಿಕೆ ಆಂಜನೇಯ ಸ್ವಾಮಿಯ ಆಶೀರ್ವಾದವಿದ್ದರೆ ಶನಿ ದೇವರಿಗೆ ಸಂಬಂಧಿಸಿದ ಎಲ್ಲ ತೊಂದರೆಗಳು ದೂರವಾಗುತ್ತವೆ ಎಂಬುದು ಆಸ್ತಿಕರ ನಂಬಿಕೆ.
ಈ ಸಂದರ್ಭದಲ್ಲಿ ಹುಲಿಕುಂಟೆಯ ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀಮತಿ ಇಂದ್ರಮ್ಮಮಲಿಯಪ್ಪ,ಕೆ.ನಾಗರಾಜ್,ಕೆ.ಬಸವರಾಜ್.ವಾಸಂತಗೌಡ್ರು, ಪ್ರಸನ್ನ ಕುಮಾರ್, ತುಮಲೇಶ್, ಹುಚ್ಚೆಂಗೆಪ್ಪ, ಮಹಾಂತೇಶ್,ಆರ್. ಅಂಜಿನಪ್ಪ, ಆಟೋ ತಿಪ್ಪೇಸ್ವಾಮಿ, ಪರಶುರಾಮ,ಕೆಇಬಿ ಮಾರಣ್ಣ, ಬೋರಣ್ಣ, ಬಡ್ಡಿ ರಾಮಣ್ಣ, ರುದ್ರಮುನಿ, ತಿಪ್ಪೇಸ್ವಾಮಿ, ಪಂಚರ್ ಶಾಪ್ ನಾಗರಾಜ್, ಡ್ರೈವರ್ ಕೃಷ್ಣಪ್ಪ,ಅರ್.ಮಹೇಶ್, ಮಹಾಬಲೇಶ್, ಓಬಣ್ಣ ನರಸಿಂಹನಗಿರಿ, ಸುರೇಶ್ ಹಾಗೂ ಊರಿನ ಹಿರಿಯರು ಮುಖಂಡರು, ಯುವಕರು ಹಾಗೂ ಭಕ್ತಾದಿಗಳು ಇದ್ದರು..

ವರದಿ. ಶಿವಕುಮಾರ್, ಎಚ್, ಗುಡೇಕೋಟೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend