ಕೂಡ್ಲಿಗಿ:ಆಶಾ ಕಾರ್ಯಕರ್ತೆಯರಿಂದ ಆರೋಗ್ಯ ಜಾಗೃತಿ…!!!

Listen to this article

ಕೂಡ್ಲಿಗಿ:ಆಶಾ ಕಾರ್ಯಕರ್ತೆಯರಿಂದ ಆರೋಗ್ಯ ಜಾಗೃತಿ-ವಿಜಯನಗರ ಜಿಲ್ಲೆ ಕೂಡ್ಲಿಗಿ:ಪಟ್ಟಣದಲ್ಲಿ ಆರೋಗ್ಯ ಇಲಾಖಾ ಸಿಬ್ಬಂದಿಯಿಂದ, ಆರೋಗ್ಯ ಜಾಗ್ರತೆ ಅಭಿಯಾನ ಜರುಗಿತು. ಆಶಾ ಕಾರ್ಯಕರ್ತೆಯರು, ಹಾಗೂ ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ತೆರಳಿ ಆರೋಗ್ಯ ತಪಾಸಣೆ ಮಾಡಿದರು. ಮತ್ತು ವೈಯಕ್ತಿಕ ಸ್ವಚ್ಚತೆ ಮನೆಯ ಒಳಗೆ ಹೊರಗಡೆ ಸುತ್ತ ಮುತ್ತ ಹಾಗೂ ನೆರ ಹೊರೆಯಲ್ಲೆಡೆಯಲ್ಲಿ, ಪರಿಸರದಲ್ಲಿ ನೈರ್ಮಲ್ಯತೆ ಕಾಪಾಡಿಕೊಳ್ಳುವುದರ ಕುರಿತು ಅರಿವು ಮೂಡಿಸಿದರು. ಮಾನಸಿಕ ಧೈಹಿಕ ನ್ಯೂನತೆ ಯಾವುದೇ ರೀತಿಯಲ್ಲಿ ಅನಾರೋಗ್ಯಕ್ಕೆ ತುತ್ತಾದವರಿದ್ದಲ್ಲಿ, ವಾಂತಿ ಬೇದಿ ಪ್ರಕರಣ, ಡ್ಯಂಗ್ಯೂ ಮಲೇರಿಯಾ ಟೈಫಾಯ್ಡ್ ಜ್ವರಗಳಂತಹ ಅನಾರೋಗ್ಯಗಳಿಂದ ಬಳಲು ತಿದ್ದಾರೆಯೆ ಎಂದು ವಿಚಾರಿಸಿದರು. ಅಂತಹ ರೋಗ ಲಕ್ಷಣಗಳು ಕಂಡುಬಂದಲ್ಲಿ ಹಾಗೂ ಭಾದೆ ಪಡುತ್ತಿದ್ದವರ ಕುರಿತು ಮಾಹಿತಿ ಪಡೆದರು. ಪಟ್ಟಣದ ನಿಯೋಜಿತ ವಲಯದಲ್ಲಿನ ಮನೆ ಮನೆಗಳಿಗೆ ತೆರಳಿ, ಕುಟುಂಬದ ಪ್ರತಿಯೊಬ್ಬರ ಆರೋಗ್ಯ ಕುರಿತು ಯೋಗ ಕ್ಷೇಮ ವಿಚಾರಿಸಿ ಅಗತ್ಯ ಮಾಹಿತಿ ಸಂಗ್ರಹಿಸಿದರು. ಅಂತಯೇ ಪಟ್ಟಣದ ಶ್ರೀಕೊತ್ತಲಾಂಜನೇಯ ದೇವಸ್ಥಾನ, ಹಾಗೂ ಗ್ರಾಮದೇವತೆ ಶ್ರೀಊರಮ್ಮ ದೇವಿ ದೇವಸ್ಥಾನದ ಸುತ್ತ ಮುತ್ತ. ಕೂಡ್ಲಿಗಿ ಪಟ್ಟಣದ 10ನೇ ವಾರ್ಡ್ ನಲ್ಲಿ ಆಶಾ ಕಾರ್ಯಕರ್ತೆ ಮಂಗಳಗೌರಿ ರವರು, ಮನೆ ಮನೆಗೆ ತೆರಳಿ ಆರೋಗ್ಯ ವಿಚಾರಿಸಿದರು. ಕುಟುಂಬದ ಪ್ರತಿ ಸದಸ್ಯರ ಕುರಿತು ಮಾಹಿತಿ ಸಂಗ್ರಹಿಸಿದರು, ಅರೋಗ್ಯ ಜಾಗ್ರತೆ ಕುರಿತು ಮಾಹಿತಿ ನೀಡಿ ವೈಯ್ಯಕ್ತಿಕ ಸ್ವಚ್ಛತೆ ಹೊಂದುವ ಬಗ್ಗೆ. ಮತ್ತು ಮನೆ ಒಳ ಹೊರಗೂ ಸ್ವಚ್ಚತೆ ನಿರ್ವಹಿಸುವಂತೆ ತಿಳಿಸಿದರು, ಪರಿಸರದಲ್ಲಿ ನೈರ್ಮಲ್ಯತೆ ಕಾಪಾಡಿಕೊಳ್ಳುವಂತೆ ಪ್ರತಿಯೊಬ್ಬ ನಾಗರೀಕರಲ್ಲಿ ಜಾಗ್ರತೆ ಮೂಡಿಸಿದರು…

ವರದಿ,ವಿ.ಜಿ.ವೃಷಭೇಂದ್ರ ಕೂಡ್ಲಿಗಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend