ರೈತರ ಹಿತ ಕಾಯಲು ತುಂಗಭದ್ರ ಅಣೆಕಟ್ಟಿನ 19 ನೇ ಗೇಟ್ ಚೈನ್ ಮತ್ತು ಪ್ಲೇಟ್ ಅನ್ನು ಅತಿ ಬೇಗ ನಿರ್ಮಿಸಲಾಗುವುದು.‌ – ಸಿ. ಎಂ. ಸಿದ್ದರಾಮಯ್ಯ…!!!

Listen to this article

ರೈತರ ಹಿತ ಕಾಯಲು ತುಂಗಭದ್ರ ಅಣೆಕಟ್ಟಿನ 19 ನೇ ಗೇಟ್ ಚೈನ್ ಮತ್ತು ಪ್ಲೇಟ್ ಅನ್ನು ಅತಿ ಬೇಗ ನಿರ್ಮಿಸಲಾಗುವುದು.‌ – ಸಿ. ಎಂ. ಸಿದ್ದರಾಮಯ್ಯ.

ಕರ್ನಾಟಕ ಘನ ಸರ್ಕಾರದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ವಿಜಯನಗರ ಜಿಲ್ಲೆಯ ತುಂಗಭದ್ರಾ ಜಲಾಶಯಕ್ಕೆ ದಿ. 13-08-24 ರಂದು ಖುದ್ದಾಗಿ ಭೇಟಿ ನೀಡಿ 19 ಕ್ರಸ್ಟ್ ಗೇಟ್ ಚೈನ್ ಮತ್ತು ಪ್ಲೇಟ್ ನೀರಿನಲ್ಲಿ ಕೊಚ್ಚಿಹೋಗಿರುವುದನ್ನು ಅತಿ ಬಹುಬೇಗ ಸಿದ್ದಪಡಿಸಲಾಗುವುದು ಎಂದರು. ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ರೈತರ ಹಿತ ಕಾಯುವ ದೃಷ್ಟಿಯಿಂದ ನಾರಾಯಣ ಎಂಜಿನಿಯರಿಂಗ್, ಹಿಂದುಸ್ತಾನಿ ಎಂಜಿನಿಯರಿಂಗ್ ಹಾಗೂ ಜಿಂದಾಲ್ ಎಂಜಿನಿಯರಿಂಗ್ ಗಳ ನೇತೃತ್ವದಲ್ಲಿ ಚೈನ್ ಮತ್ತು ಪ್ಲೇಟ್ ಅನ್ನು ಮತ್ತೇ ಈ ಭಾಗದ ರೈತರ ಎರಡನೇಯ ಬೆಳೆಗಳ ಅನುಕೂಲಕ್ಕಾಗಿ ನಿರ್ಮಿಸಲಾಗುವುದು ಎಂದರು.

ತುಂಗಭದ್ರಾ ಅಣೆಕಟ್ಟು ಅನ್ನು 1948 ರಲ್ಲಿ ನಿರ್ಮಿಸಿರುವುದರಿಂದ 70 ವರ್ಷಕ್ಕಿಂತ ಹೆಚ್ಚು ವಯಸ್ಸು ಆಗಿರುವುದರಿಂದ ಚೈನ್ ಮತ್ತು ಪ್ಲೇಟ್ ಹಳೆಯದಾಗಿರುವುದರಿಂದ ಈ ಘಟನೆಗೆ ಸರ್ಕಾರವನ್ನಾಗಲಿ ಅಥವಾ ಅಧಿಕಾರಿಗಳನ್ನಾಗಲಿ ಹೊಣೆಗಾರರನ್ನಾಗಿ ಮಾಡಲು ಬರುವುದಿಲ್ಲ ಎಂದೂ ಹೇಳಿದರು.‌ ಈ ವೇಳೆ ಸಂಸದರು, ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಹಾಗೂ ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಮಾನ್ಯಶಾಸಕರಾದ ಡಾ. ಶ್ರೀನಿವಾಸ್ ಎನ್. ಟಿ. ಅವರು, ವಿಜಯ ನಗರ ಜಿಲ್ಲಾ ಘಟಕದ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಸಿರಾಜ್ ಶೇಖ್, ಆಂಧ್ರಪ್ರದೇಶದ ಮಾನ್ಯಶಾಸಕರು, ಜಿಲ್ಲಾ ಅಧಿಕಾರಿಗಳು, ರೈತ ಸಂಘಟನೆಯ ಮುಖಂಡರು, ಮುಖಂಡರು ಮತ್ತು ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು. ‌..

ವರದಿ. ಎಮ್. ಬಸವರಾಜ್, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend