ಕೂಡ್ಲಿಗಿ ತಾಲೂಕು ಹುಲಿಕೆರೆ ಕೆರೆಗೆ ಹರಿದ ನೀರು ಸಾರ್ವಜನಿಕ ರಲ್ಲಿ ಸಂತಸದ ಹೊನಲು…!!!

Listen to this article

ಹಿಂದಿನ ವರ್ಷ ಇಡೀ ಕೂಡ್ಲಿಗಿ ತಾಲೂಕು ಬರಗಾಲದಿಂದ ತತ್ತರಿಸಿದ್ದು ಬಹುತೇಕ ಕೆರೆಗಳು ಒಣಗಿ ನೀರಿಲ್ಲದೆ ಬರೆದಾಗಿದ್ದವು ಈ ಬಾರಿ ಬಹುಬೇಗ ಮಳೆರಾಯನ ಕೃಪೆ ತೋರಿದ್ದು ಹುಲಿಕೇರಿ ಕೆರೆಗೆ ನೀರು ಬಂದಿದ್ದು ರೈತರಲ್ಲಿ ಅತೀವ ಸಂತೋಷವನ್ನುಂಟು ಮಾಡಿದೆ ಸುಮಾರು ಹತ್ತು ಹದಿನೈದು ವರ್ಷಗಳಿಂದ ನೀರಿಲ್ಲದೆ ಮನೆಗೆ ಹೋಗಿದ್ದ ಕೆರೆಗೆ ಈ ಬಾರಿ ನೀರು ಬಂದಿದ್ದು ತುಂಬಾ ಸಂತೋಷದಾಯಕ ಎಂದು ರೈತರು ಮಾತನಾಡಿಕೊಳ್ಳುತ್ತಿದ್ದಾರೆ ಹುಲಿಕೆರೆ ಕೆರೆಗೆ ನೀರು ಬಂದರೆ ಸುತ್ತ ಮುತ್ತಲಿನ ಬೋರ್ವೆಲ್ಗಳು ಕೂಡ ರೀಚಾರ್ಜ್ ಆಗಿ ನೀರಾವರಿಗೆ ಅನುಕೂಲವಾಗುತ್ತದೆ ಹುಲಿಕೆರೆ ಸುತ್ತಮುತ್ತಲ ರೈತರು ಮಳೆಗಾಗಿ ಪ್ರಾರ್ಥಿಸುತ್ತಾ ಕೆರೆ ತುಂಬಲಿ ಎಂದು ಅನೇಕ ದಿನಗಳಿಂದ ಕಾತರದಿಂದ ಕಾಯುತ್ತಿದ್ದರು.

ಬೋರ್ವೆಲ್ ಗಳೆಲ್ಲ ನೀರಿಲ್ಲದೆ ಅನೇಕ ಬರುವುದಿಲ್ಲಗಳು ನಿಂತು ಹೋಗಿದ್ದು ಕೆರೆಗೆ ನೀರು ಬರುವುದನ್ನೇ ಕಾಯುತ್ತಿದ್ದ ರೈತರಿಗೆ ಹರ್ಷವನ್ನುಂಟು ಮಾಡಿದೆ ಆ ಒಂದು ಸಂತೋಷಕ್ಕಾಗಿ ರೈತ ಮತ್ತು ರೈತ ಮಹಿಳೆಯರು ಕೆರೆಗೆ ಗಂಗೆ ಪೂಜೆ ಮಾಡುವುದರ ಮುಖಾಂತರ ಬಾಗಿಲವನ್ನು ಅರ್ಪಿಸುವುದರ ಜೊತೆಗೆ ಇನ್ನೂ ಬೇಗ ಕೆರೆ ತುಂಬಲಿ ಎಂದು ಗಂಗಮ್ಮನಲ್ಲಿ ಪ್ರಾರ್ಥಿಸಿದರು. ಊರಿನ ಮುಖಂಡರು ಮಹಿಳೆಯರು ಯುವಕರು ಸೇರಿದಂತೆ ಅನೇಕ ಸಾರ್ವಜನಿಕರು ಭಾಗಿಯಾಗಿದ್ದರು ಮತ್ತು ಕಳೆದ ಬಾರಿ ಕೆರೆಗೆ ನೀರು ತುಂಬಿಸುವ ಯೋಜನೆ ಜಾರಿಯಾಗಿದ್ದು ನಮ್ಮಈಗಿನ ಶಾಸಕರು ಕೂಡ ಅತ್ಯಂತ ಕಾಳಜಿ ವಹಿಸಿ ಕೆರೆಗೆ ನೀರು ತಂದು ಇಡೀ ಕೂಡ್ಲಿಗಿ ತಾಲೂಕನ್ನು ಹಿಂದುಳಿದ ತಾಲೂಕ್ ಎಂಬ ಹಣೆಪಟ್ಟಿ ಕಳುಚು ತ್ತಾರೆ ಎಂದು ಆಶಯ ವ್ಯಕ್ತ ಪಡಿಸುತ್ತಾ ಸುಮಾರು ಹತ್ತಾರು ವರ್ಷ ನಿರಾವಾರಿ ಗಾಗಿ ಹೋರಾಟ ದಲ್ಲಿ ನಿರತರಾಗಿದ್ದವರನ್ನು ಕೂಡ ಸ್ಮರಿಸುತ್ತಿರುವುದು ಹೋರಾಟ ಗಾರರಿಗೂ ಕೂಡ ಅತೀವ ಸಂತಸ ತಂದಿದೆ ಎನ್ನುತ್ತಾರೆ ಆದಷ್ಟು ಬೇಗ ಎಲ್ಲಾ ಕೆರೆಗೆ ನೀರು ಬರಲಿ ಎಂದು ಕಾಯುತ್ತಿದ್ದಾರೆ ಕೂಡ್ಲಿಗಿ ಜನತೆ…

ವರದಿ. ಎಂ. ಬಸವರಾಜ್, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend