ಬಳ್ಳಾರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಈ. ತುಕಾರಾಂ ಅವರನ್ನು ಗೆಲ್ಲಿಸಬೇಕು.ಶಾಸಕ ಡಾ. ಶ್ರೀನಿವಾಸ್. ಎನ್. ಟಿ…!!!

Listen to this article

ಕ್ಷೇತ್ರದ ಜನರ ಆಶೆಯದಂತೆ ಸರ್ವ ರೀತಿ ಅಭಿವೃದ್ಧಿಗಾಗಿ ಶ್ರಮಿಸಲು ಬಳ್ಳಾರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಈ. ತುಕಾರಾಂ ಅವರನ್ನು ಗೆಲ್ಲಿಸಬೇಕು. – ಶಾಸಕ- ಡಾ. ಶ್ರೀನಿವಾಸ್. ಎನ್. ಟಿ.

ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಉಜ್ಜಿನಿ, ಪಾಲಯ್ಯನಕೋಟೆ, ಸೂಲದರಹಳ್ಳಿ, ಬಡೇಲಡಕು, ಹಾರಕಬಾವಿ, ಖಾನಹೊಸಹಳ್ಳಿ, ಜುಮ್ಮೋಬನಹಳ್ಳಿ, ಚಿರತಗುಂಡು, ಗುಡೇಕೋಟೆ ಗ್ರಾಮಗಳಲ್ಲಿ ಸನ್ಮಾನ್ಯ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರಾದ ಬಿ. ನಾಗೇಂದ್ರ ಅವರು ಹಾಗೂ ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ದಿ. 02- 05-24 ರಂದು “ ರೋಡ್ ಶೋ” ನಡೆಸುವ ಮೂಲಕ ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಸನ್ಮಾನ್ಯರಾದ ಈ. ತುಕಾರಾಂ ಅವರ ಪರ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಭರ್ಜರಿಯಾಗಿ ಮತ ಪ್ರಚಾರ ಮಾಡಿದರು. ಈ ದಿನ ಇಂತಹ ಅರ್ಥಪೂರ್ಣವಾದ ವೇದಿಕೆಯ ಸಿದ್ಧತೆಗಾಗಿ ಶಾಸಕರು ಅನುವು ಮಾಡಿಕೊಟ್ಟಿರುವುದು ಕ್ಷೇತ್ರದ ಜನರಲ್ಲಿ ಸಂಭ್ರಮವನ್ನುಂಟು ಮಾಡಿತ್ತು.

ಬಳಿಕ ಶಾಸಕರು ಮಾತನಾಡಿ, ನಮ್ಮ ನೆಚ್ಚಿನ ಮಾರ್ಗದರ್ಶಕರು ಹಾಗೂ ಸನ್ಮಾನ್ಯರಾದ ಬಿ. ನಾಗೇಂದ್ರ ಅಣ್ಣನವರನ್ನು ನಮ್ಮ ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದಲ್ಲಿ ಮತಪ್ರಚಾರಕ್ಕಾಗಿ ಕ್ಷೇತ್ರದ ಜನರ ಅಭಿಲಾಷೆಯಂತೆ ಕರೆ ತಂದು ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಸನ್ಮಾನ್ಯರಾದ ಈ. ತುಕಾರಾಂ ಅಣ್ಣನವರ ಪರವಾಗಿ ಮತ ಪ್ರಚಾರ ಮಾಡಲು ಬಹುದಿನಗಳ ಬೇಡಿಕೆಯನ್ನು ಇಡೇರಿಸಿದಂತೆ ಆಯಿತು ಎಂದೂ ಸಂತಸ ವ್ಯಕ್ತಪಡಿಸಿದರು.

ಕ್ಷೇತ್ರದ ಜನರ ಆಶೆಯದಂತೆ ಕೆಲಸ ಮಾಡಲು ಸಾಕಷ್ಟು ಸರ್ಕಾರದ ಮಟ್ಟದಲ್ಲಿ ಅನುದಾನ ಗಳನ್ನು ತಂದು ಚುನಾವಣೆಯು ಮುಗಿದ ತಕ್ಷಣ ಕೆಲಸ ಮಾಡುತ್ತೇನೆ ಎಂದೂ ತಿಳಿಸಿದರು. ನಮ್ಮ ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಜನರು ನನಗಾಗಿ ಪ್ರತಿಯೊಂದು ಸಂದರ್ಭದಲ್ಲಿ ಕೊಟ್ಟ ಸಹಕಾರ, ಪ್ರೀತಿ, ಅಭಿಮಾನವನ್ನು ಯಾವತ್ತಿಗೂ ಮರೆಯುವುದಿಲ್ಲ. ನನಗೆ ಕೊಟ್ಟ ಸಹಕಾರದಂತೆ ಮುಂದಿನ ದಿನಮಾನಗಳಲ್ಲಿ ದೆಹಲಿ ಮಟ್ಟದಲ್ಲಿ ನಮ್ಮ ಕೂಡ್ಲಿಗಿ ಕ್ಷೇತ್ರದ ಸರ್ವ ರೀತಿಯ ಅಭಿವೃದ್ಧಿಗಾಗಿ ಶಕ್ತಿ ಮೀರಿ ಶ್ರಮಿಸಲು ನಮ್ಮ ಬಳ್ಳಾರಿ ಜಿಲ್ಲೆಯ ಲೋಕಸಭಾ ಕ್ಷೇತ್ರದ ಸುಶಿಕ್ಷಿತ, ಸರಳ ಮತ್ತು ಪ್ರಬುದ್ಧ ಅಭ್ಯರ್ಥಿಯು ನಮಗೆ ಸಿಕ್ಕಿದ್ದಾರೆ. ಅಣ್ಣನವರಾದ ಈ. ತುಕಾರಾಂ ಅವರನ್ನು ಯಾವುದೇ ಬೇಧ – ಭಾವ ಮಾಡದೇ ಗೆಲ್ಲಿಸಿಕೊಂಡು ಬರುವ ಜವಬ್ದಾರಿ ನಮ್ಮ ನಿಮ್ಮ ಎಲ್ಲರೂ ಮೇಲೆ ಇದೆ ಎಂದರು. ನಮ್ಮ ಕ್ಷೇತ್ರದಲ್ಲಿ ಬಡವರು ಮತ್ತು ಕಡು ಬಡವರು ಇದ್ದಾರೆ. ನನ್ನಂತೆಯೇ ನನ್ನೊಂದಿಗೆ ಹೆಚ್ಚಿನ ಪ್ರಮಾಣದಲ್ಲಿ ಕೂಡ್ಲಿಗಿ ಕ್ಷೇತ್ರದ ಅಭಿವೃದ್ಧಿಗಾಗಿ ಕೈ ಜೋಡಿಸಲು ಜೋಡು ಎತ್ತಿನಂತೆ ಕೆಲಸ ಮಾಡಲು ಸನ್ಮಾನ್ಯರಾದ ಈ. ತುಕಾರಾಂ ಅವರ ಗೆಲುವುಗಾಗಿ ಸಹಕರಿಸಬೇಕು ಎಂದೂ ಜನರಲ್ಲಿ ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಸನ್ಮಾನ್ಯ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರಾದ ಬಿ. ನಾಗೇಂದ್ರ ಅವರು ಹಾಗೂ ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. , ಕೆ.ಪಿ.ಸಿ. ಸದಸ್ಯರಾದ ಮುರುಳಿಕೃಷ್ಣ, ಕಾಂಗ್ರೆಸ್ ಮುಖಂಡರಾದ ವೆಂಕಟೇಶ ಪ್ರಸಾದ್, ತಮ್ಮಣ್ಣ ಎನ್. ಟಿ. ನಾಗರಕಟ್ಟೆ ರಾಜಣ್ಣ, ಜಿಂಕಲ್ ನಾಗಮಣಿ, ಶ್ರೀ ಕಾವಲಿ ಶಿವಪ್ಪ ನಾಯಕ, ಜಿ. ಓಬಣ್ಣ, ಹೊಸಹಳ್ಳಿ ಬ್ಲಾಕ್ ಅಧ್ಯಕ್ಷರಾದ ಕುಮಾರ್ ಗೌಡ, ಇನ್ನೂ ಮುಂತಾದ ವಿವಿಧ ಬ್ಲಾಕ್ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು, ಉಪಸ್ಥಿತರಿದ್ದರು…

ವರದಿ. ಬಸವರಾಜ್, ಎಮ್, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend