ಲಂಚ ಪಡೆದು ಆಶ್ರಯ ಮನೆಗಳನ್ನು ಹಂಚಿಕೆ ಮಾಡುವ “ಅಭಿವೃದ್ಧಿ ಅಧಿಕಾರಿಗಳ”ವಿರುದ್ಧ ಪ್ರತಿಭಟನೆ…!!!

Listen to this article

ಕಲ್ಬುರ್ಗಿ ಜಿಲ್ಲೆಯ ಕಲ್ಬುರ್ಗಿ ತಾಲೂಕಿನ ಫರಹತಾಬಾದ ಗ್ರಾಮದಲ್ಲಿ ಅಂಬೇಡ್ಕರ್ ವಸತಿ ಹಾಗೂ ಬಸವ ವಸತಿ ಯೋಜನೆಯ ಅಡಿಯಲ್ಲಿ ಬಂದಿರುವ ಮನೆ ಹಂಚಿಕೆಗೊಸ್ಕರ ಗ್ರಾಮ ಪಂಚಾಯತಿಯ ವತಿಯಿಂದ ದಿನಾಂಕ 10-02-2022ರಂದು ಗ್ರಾಮ ಸಭೆ ಕರೆದಿದ್ದರು ಆ ಗ್ರಾಮ ಸಭೆಯ ಪ್ರಕ್ರಿಯೆಯು ಜನ ಸಾಮಾನ್ಯರು ಆಯ್ಕೆ ಮಾಡಿ ಫಲಾನುಭವಿಗಳ ಪಟ್ಟಿ ತಯಾರು ಮಾಡಿ ಗ್ರಾಮ ಸಭೆಯಲ್ಲಿ ಪ್ರಸ್ತಾವನೆ ಮಾಡಬೇಕಾಗಿತ್ತು. ಆದರೆ ಗ್ರಾಮ ಪಂಚಾಯತಿಯ ಸದಸ್ಯರೇ ತಮಗೆ ಬೇಕಾದವರ ಹಾಗೂ ಕೆಲವರ ಹತ್ತಿರ ಲಂಚ ಪಡೆದು ಮನೆ ಹಂಚಿಕೆಯ ಪಟ್ಟಿ ಸಿದ್ದ ಮಾಡಿ ಗ್ರಾಮ ಸಭೆಯ ದಿನದಂದು ಗ್ರಾಮ ಪಂಚಾಯತಿಯ ಅಬಿವೃದ್ದಿ ಅಧಿಕಾರಿಯ ಕಡೆಯಿಂದ ಮನೆ ಹಂಚಿಕೆಯ ಫಲಾನುಭವಿಗ ಪಟ್ಟಿ ಓದಿಸಿದ್ದರು.

ಇದನ್ನು ಖಂಡಿಸಿ ಗ್ರಾಮದ ಸಾಮಾಜಿಕ ಕಾರ್ಯಕರ್ತರಾದ ಮಹಾದೇವಿ ಸಜ್ಜನ, ಗಂಗಾಧರ ಮೊಟಗಿ, ಸಲೀಂ ಕೊಳ್ಳುರು, ಮಲ್ಲಿಕಾರ್ಜುನ ಅವಂಟಗಿ ಬಸವರಾಜ ವಿಶ್ವಕರ್ಮ ಹಾಗೂ ಅನ್ಯಾಯಕ್ಕೆ ಒಳಗಾದ ಗ್ರಾಮಸ್ಥರೆಲ್ಲರೂ ಸೇರಿ ನಡೆದಂತಹ ಗ್ರಾಮ ಸಭೆ ರದ್ದು ಪಡಿಸಿ ಮತ್ತೊಮ್ಮೆ ಗ್ರಾಮ ಸಭೆ ನಡೆಸಬೇಕು ಹಾಗೆ ಪ್ರಜಾಪ್ರಭುತ್ವ ಕಗ್ಗೊಲೆ ಮಾಡಿರುವಂತಹ ಅಬಿವೃದ್ದಿ ಅಧಿಕಾರಿ ಹಾಗೂ ಗ್ರಾಮಪಂಚಾಯತಿಯ ಸದಸ್ಯರ ವಿರುದ್ಧ ಕ್ರಮ ಜರುಗಿಸಬೇಕೆಂದು ಗ್ರಾಮ ಪಂಚಾಯತಿಯ ಕಾರ್ಯದರ್ಶಿಗಳಾದ ಕಿರಣಕುಮಾರರವರಿಗೆ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕರಿಗೆ ಮನಿವಿ ಪತ್ರ ಸಲ್ಲಿಸಿ ನಾಲ್ಕು ತಿಂಗಳಾದರೂ ಯಾವುದೇ ರೀತಿಯಲ್ಲಿ ಪ್ರಜಾಪ್ರಭುತ್ವ, ಸಂವಿಧಾನ ಕಗ್ಗೊಲೆ ಮಾಡಿರುವಂತಹ ಅಬಿವೃದ್ದಿ ಅಧಿಕಾರಿ ಹಾಗೂ ಗ್ರಾಮ ಪಂಚಾಯತಿ ಸದಸ್ಯರ ವಿರುದ್ದ ಯಾವುದೇ ಕ್ರಮ ಜರುಗಿಸಿಲ್ಲ. ಇದನ್ನು ಖಂಡಿಸಿ ಮುಂದಿನ ದಿನಗಳಲ್ಲಿ ಕರ್ನಾಟಕ ಮಾಹಿತಿ ಹಕ್ಕು ಹಾಗೂ ಸಾಮಾಜಿಕ ಕಾರ್ಯಕರ್ತರ ವೇದಿಕೆ ಹಾಗೂ ಪ್ರಗತಿಪರ ಮಹಿಳೆಯರ ಸಂಘದ ಹಾಗೂ ಗ್ರಾಮಸ್ಥರೆಲ್ಲರು ಸೇರಿ ಜಿಲ್ಲಾ ಪಂಚಾಯತಿ ಎದುರುಗಡೆ ದರಣಿ ಸತ್ಯಾಗ್ರಹ ಹಮ್ಮಿಕೊಳ್ಳುತ್ತೆವೆ ಎಂದರು…

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend