ತರಬೇತಿ ಕೇಂದ್ರಕ್ಕೆ ಡಿ.ಸಿ.ಭೇಟಿ, ತರಬೇತಿ ಕಾರ್ಯ ವೀಕ್ಷಣೆ…!!!

Listen to this article

ಪೊಲಿಂಗ್ ಸಿಬ್ಬಂದಿಗೆ ಎರಡನೇ ಹಂತದ ತರಬೇತಿ:
ಆಯ್ದ ತರಬೇತಿ ಕೇಂದ್ರಕ್ಕೆ ಡಿ.ಸಿ.ಭೇಟಿ, ತರಬೇತಿ ಕಾರ್ಯ ವೀಕ್ಷಣೆ
ಕಲಬುರಗಿ: ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತಗಟ್ಟೆ ಅಧಿಕಾರಿ-ಸಿಬ್ಬಂದಿಗಳಿಗೆ ಬುಧವಾರ ವಿಧಾನಸಭಾ ಕ್ಷೇತ್ರವಾರು ಎಲ್ಲೆಡೆ ಎರಡನೇ ಹಂತದ ತರಬೇತಿ ಕಾರ್ಯ ನಡೆದಿದ್ದು, ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಆಯ್ದ ತರಬೇತಿ ಕೇಂದ್ರಗಳಿಗೆ ಭೇಟಿ ನೀಡಿ ತರಬೇತಿ ಕಾರ್ಯ ವೀಕ್ಷಿಸಿದರು.

ಗುಲಬರ್ಗಾ ಗ್ರಾಮೀಣ ಕ್ಷೇತ್ರದ ಕಲಬುರಗಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಗುಲಬರ್ಗಾ ಉತ್ತರ ಕ್ಷೇತ್ರದ ಅಪ್ಪಾ ಕಿಡ್ಸ್ ವಲ್ರ್ಡ್ ತರಬೇತಿ ಕೇಂದ್ರಕ್ಕೆ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ಅವರೊಂದಿಗೆ ಡಿ.ಸಿ. ಭೇಟಿ ನೀಡಿದರು.

ಮತದಾನ ದಿನದಂದು ಭಾರತ ಚುನಾವಣಾ ಆಯೋಗ ನೀಡಿರುವಎಲ್ಲಾ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಯಾವುದೇ ಲೋಪಕ್ಕೆ ಇಲ್ಲಿ ಅವಕಾಶ ನೀಡಬಾರದು. ಯಾವುದೇ ವಿಷಯದ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದಿದ್ದಲ್ಲಿ ಅಥವಾ ಏನೇ ಸಂಶಯಗಳಿದಲ್ಲಿ ಇಂದಿಲ್ಲಿ ನೀಡಲಾಗುತ್ತಿರುವ ಹ್ಯಾಂಡ್ಸ್ ಆನ್ ಟ್ರೇನಿಂಗ್‍ನಲ್ಲಿ ತಜ್ಞರಿಂದ ಅದನ್ನು ನಿವಾರಿಸಿಕೊಳ್ಳಬೇಕೆಂದು ಪೊಲಿಂಗ್ ಸಿಬ್ಬಂದಿಗೆ ಡಿ.ಸಿ ಸೂಚಿಸಿದರು.

ತರಬೇತಿ ಕಾರ್ಯ ಯಶಸ್ವಿ: ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಆಯಾ ಸಹಾಯಕ ಚುನಾವಣಾಧಿಕಾರಿಗಳ ನೇತೃತ್ವದಲ್ಲಿ ಪಿ.ಆರ್.ಓ, ಎ.ಪಿ.ಆರ್.ಓ ಸಿಬ್ಬಂದಿಗಳಿಗೆ ಮತದಾನ ದಿನದಂದು ಕಾರ್ಯನಿರ್ವಹಣೆ ಕುರಿತು ಎರಡನೇ ಹಂತದ ತರಬೇತಿ ಕಾರ್ಯ ಯಶಸ್ವಿಯಾಗಿ ಮುಗಿದಿದೆ ಎಂದು ಬಿ.ಫೌಜಿಯಾ ತರನ್ನುಮ್ ತಿಳಿಸಿದರು.

ಇನ್ನು ಚುನಾವಣಾ ಸಿಬ್ಬಂದಿ ವಿಧಾನಸಭಾ ಕ್ಷೇತ್ರದಿಂದ ಇತರೆ ವಿಧಾನಸಭಾ ಕ್ಷೇತ್ರಗಳಿಗೆ ತೆರಳಿ ಮತ್ತೆ ವಾಪಸ್ ಬರಲು ಜಿಲ್ಲೆಯ ಪ್ರತಿಯೊಂದು ಕ್ಷೇತ್ರದಿಂದ ಉಚಿತ ಬಸ್ ವ್ಯವಸ್ಥೆ ಮಾಡಲಾಗಿತ್ತು…

ವರದಿ. ಮಹಾಲಿಂಗ ಗಗ್ಗರಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend