ವಿನಾಯಕ ಯುವಕ ರೈತ ಸಂಘದ 43 ನೇ ವರ್ಷದ ಕನ್ನಡ ರಾಜ್ಯೋತ್ಸವವನ್ನು ಕಳೆದ ವರ್ಷ ಭೀಕರ ಬರಗಾಲ ಆದ ಪ್ರಯುಕ್ತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹೊಳಲ್ಕೆರೆ ಪಟ್ಟಣ ಶಾಖೆ ವತಿಯಿಂದ ಸರಳವಾಗಿ ಗಣಪತಿ ದೇವಾಲಯದ ಮುಂಭಾಗ ಶ್ರೀ ತಾಯಿ ಭುವನೇಶ್ವರಿಗೆ ಪುಷ್ಪ ಅರ್ಪಿಸುವ ಮೂಲಕ ಮಹಾ ಮಂಗಳಾರತಿ ಮಾಡಲಾಯಿತು ನಂತರ ಪಟ್ಟಣದ ಹಿರಿಯ ರೈತರಾದ ಸೈಯದ್ ಸನಾಉಲ್ಲಾ, ದೇವೇಂದ್ರಪ್ಪವರು ಧ್ವಜಾರೋಹಣ ನೆರವೇರಿಸಿದರು ಎಲ್ಲರೂ ನಾಡ ಗೀತೆಯನ್ನು ಹಾಡಲಾಯಿತು ಧ್ವಜಾರೋಹಣ ನೆರವೇರಿಸಿ ವಕೀಲರಾದ ವೇದಮೂರ್ತಿ ರವರು ಕನ್ನಡ ಶಾಲೆಗಳಲ್ಲಿ ರಾಜ್ಯೋತ್ಸವ ಆಚರಣೆ ಮಾಡುವ ಮೂಲಕ ರಾಜ್ಯಾಭಿಮಾನ ಮೂಡಿಸುವುದು ಪಟ್ಟಣ ಶಾಖೆಯ ರೈತಸಂಘ ಸಾಕಷ್ಟು ರೈತ ಪರ ಕೆಲಸ ಮಾಡುತ್ತಾ ಬಂದಿದೆ ಸಣ್ಣ ನೀರಾವರಿ ಇಲಾಖೆಯಲ್ಲಿ ಪ್ರತೀ ವರ್ಷ ನೂರಾರು ಕೋಟಿ ಅನುಧಾನ ಕೆರೆಗಳ ಅಭಿವೃದ್ಧಿಗೆ ಬರುತ್ತದೆ ಅದು ಸದುಪಯೋಗ ಆಗಬೇಕು ರೈತ ಸಂಘದ ಪದಾಧಿಕರಿಗಳು ಕೆರೆ ಕೋಡಿ,ಚೆಕ್ ಡ್ಯಾಂ ಗಳ ವಿರುದ್ಧ ಸಾಕಷ್ಟು ಹೋರಾಟ ಮಾಡುತ್ತಾ ಬಂದಿದೆ ಎಂದರು ಸೈಯದ್ ಸನಾಉಲ್ಲಾರವರು ರೈತರೆಲ್ಲ ಒಗ್ಗೂಡಿ ಸಾಸ್ವೆ ಹಳ್ಳಿ ಏತ ನೀರಾವರಿಯನ್ನ ಪಟ್ಟಣದ ಹಿರೇಕೆರೆಗೆ ತರಲು ಸಿರಿಗೆರೆ ಶಿವಾಚಾರ್ಯ ಸ್ವಾಮೀಜಿ ಹತ್ತಿರ ಹೋಗೋಣ ಎಂದರು ಭಾಗವಯಿಸಿದ್ದ ಎಲ್ಲರಿಗೂ ಸಿಹಿ ಹಂಚಲಾಯಿತು ರೈತ ಸಂಘದ ಪಟ್ಟಣ ಶಾಖೆಯ ಅಧ್ಯಕ್ಷ ಸಿದ್ದರಾಮಪ್ಪ, ಪ್ರಧಾನ ಕಾರ್ಯದರ್ಶಿ ಕೆ,ಎನ್,ಅಜಯ್,ತಾಲೂಕು ಅಧ್ಯಕ್ಷ ಬಿ,ಎಸ್,ರಂಗಸ್ವಾಮಿ,ವಿನಾಯಕ ಯುವಕ ರೈತ ಸಂಘದ ಮಾಜಿ ಅಧ್ಯಕ್ಷರುಗಳಾದ ಕೆ,ಆರ್,ರಾಜಪ್ಪ,ವಕೀಲರಾದ ಬಿ,ಎನ್, ಪ್ರಶಾಂತ್, ಹೆಚ್,ಕೆ,ಲೋಕೇಶ್, ಉಪಾಧ್ಯಕ್ಷ ಕೆ,ಆರ್,ಶಿವಕುಮಾರ್,ಪುರಸಭಾ ಸದಸ್ಯರಾದ ಡಿ, ಎಸ್,ವಿಜಯ್, ಪಟ್ಟಣ ಶಾಖೆಯ ಲೋಕಪ್ಪ,ಶ್ರೀಧರ್,ರವಿಕುಮಾರ್,ವಿಶ್ವ,ಮಂಜುನಾಥ್ ಹದಡಿ, ಲೋಕಪ್ಪ, ದುಕ್ಕಡ್ಲೆ ಸೋಮಣ್ಣ,ಕುಮಾರಚರ್ ಪಟ್ಟಣದ ರೈತರೆಲ್ಲ ಪಾಲ್ಗೊಂಡಿದ್ದರು,.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030