ಕರ್ನಾಟಕ ಅಭಿವೃದ್ಧಿ ಮಾದರಿ ನೆನಪಿಸಿದ ಶಾಸಕ – ಡಾ. ಶ್ರೀನಿವಾಸ್. ಎನ್. ಟಿ…
ವಿಜಯ ನಗರ ಜಿಲ್ಲೆ ಕೂಡ್ಲಿಗಿ…
ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ತಾಲೂಕಿನ ಆಡಳಿತವತಿಯಿಂದ ದಿ; ೦೧-೧೧-೨೦೨೪ ರಂದು ೬೯ ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಮಹಾದೇವ ಮೈಲಾರ ಕ್ರೀಡಾಂಗಣದಲ್ಲಿ ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ತಾಯಿ ಶ್ರೀ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಪಟ್ಟಣದ ಪ್ರಮುಖ ಬೀದಿಗಳ ಕನ್ನಡಮ್ಮನ ಮೆರವಣಿಗೆಯಲ್ಲಿ ಸಾಗುತ್ತಾ ಕರ್ನಾಟಕದ ಹಲವು ವೈವಿಧ್ಯತೆಗಳನ್ನು ಪ್ರತಿಬಿಂಬಿಸುವ ನಿಟ್ಟಿನಲ್ಲಿ ಶಾಲಾ ಮಕ್ಕಳು ವಿವಿಧ ವೇಷ ಭೂಷಣಗಳನ್ನು ತೊಟ್ಟು ಕನ್ನಡದ ಹಬ್ಬದ ವಾತಾವರಣಕ್ಕೆ ಸಾಕ್ಷಿಯಾದರು.
ಕನ್ನಡ ನೆಲ, ಜಲ, ಭಾಷೆ ಮತ್ತು ಸಂಸ್ಕೃತಿಯ ದೇಶ ಅಭಿಮಾನವನ್ನು ಪ್ರಸಾರ ಮಾಡಲು ಅದರ ಹಿರಿಮೆಯನ್ನು ಹೆಮ್ಮೆಯಿಂದ ನೆನಪಿಸಿಕೊಳ್ಳಲು ಶ್ರೀ ಚಂದ್ರಶೇಖರ ಆಜಾದ್ ರಂಗಮಂದಿರದ ಸಭೆಯಲ್ಲಿ ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ದೀಪ ಬೆಳಗಿಸುವ ಮೂಲಕ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾ ನಮನ ಸಲ್ಲಿಸಿದರು.ಶಾಸಕರು, ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಇಡೀ ದೇಶದಲ್ಲಿ ಗುಜರಾತ್ ರಾಜ್ಯವನ್ನು ಆರ್ಥಿಕ ಅಭಿವೃದ್ಧಿಯಲ್ಲಿ ಹಿಂದಿಕ್ಕಿದ್ದೂ, ನಮ್ಮ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದೆ ಎಂದೂ ಹೇಳಿದರು. ಇನ್ನೂ ಕೆಲವೇ ದಿನಗಳಲ್ಲಿ ನಮ್ಮ ಕ್ಷೇತ್ರದ 74 ಕೆರೆಗಳಿಗೆ ನೀರು ತುಂಬಿಸಲು ಲೋಕಾರ್ಪಣೆ ಮಾಡಲಿದ್ದೇವೆ ಎಂದರು. ಆ ಮೂಲಕ ಶಾಶ್ವತವಾಗಿ ಇಲ್ಲಿನ ರೈತರ ಬದುಕಿನಲ್ಲಿ ಸಮಾಜಿಕ ಬದಲಾವಣೆಯ ಸುಧಾರಣೆಗಳನ್ನು ತರಲು ಸಾಧ್ಯ ಎಂದೂ ಹೇಳಿದರು.
ಇದೇ ಸಂದರ್ಭದಲ್ಲಿ ವಿವಿಧ ಇಲಾಖೆಯಿಂದ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಲ್ಯಾಪ್ಟಾಪ್ ಹಾಗೂ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಿದರು.
ಓಬಳಶೆಟ್ಟಿಹಳ್ಳಿಯ 14ಸಾವಿರ ಹೆರಿಗೆಯನ್ನು ಮಾಡಿಸಿದ ಸೂಲಗಿತ್ತಿ ಈರಮ್ಮ, ರಂಗಭೂಮಿ ಪ್ರತಿಭೆ ಹರವದಿ ಈರಣ್ಣ, ಸೋಬಾನೆ ಹಾಡುಗಾರ್ತಿ ಮತ್ತು ಸಂಗಡಿಗರು, ವಿದ್ಯಾರ್ಥಿನಿ ಬೃಂದಾ, ಇನ್ನೂ ಮುಂತಾದವರನ್ನು ಶಾಸಕರು ಸನ್ಮಾನಿಸಿ ಅಭಿನಂಧನೆಗಳು ತಿಳಿಸಿದರು. ಇನ್ನೂ ಮುಂದಿನ ದಿನಗಳಲ್ಲಿ ಕನ್ನಡ ಭಾಷೆ ಶ್ರೀಮಂತವಾಗಿ ಬೆಳೆಯಲಿ ಎಂದೂ ಶುಭಾ ಹಾರೈಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರರಾದ ಎಂ. ರೇಣುಕಾ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಪದ್ಮನಾಭ ಕರಣಂ, ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ನರಸಪ್ಪ, ಪೊಲೀಸ್ ಉಪ ಅಧೀಕ್ಷರಾದ ಶ್ರೀ, ಸುರೇಶ್ ತಳವಾರ್ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳಾದ ಶ್ರೀ ಎಂ. ಕೆ. ಮುಗಳಿ,ತಾಹ ಆಂಗ್ಲ ಮಾಧ್ಯಮ ಶಾಲೆ ಮೊಹಮದ್ ಫೈಸಲ್.ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಶ್ರೀ ಕಾವಲ್ಲಿ ಶಿವಪ್ಪನಾಯಕ, ಉಪಾಧ್ಯಕ್ಷರಾದ ಲೀಲಾವತಿ ಕೆ. ಪ್ರಭಾಕರ, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಸಯ್ಯದ್ ಶೂಕರ್, ಆಂಜನೇಯ ಕೆ ಜಿ ಎಸ್ ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ಯೋಜನೆ . , ಕನ್ನಡ ಪರ ಸಂಘಟನೆಕಾರರು, ಸಮಸ್ತ ಕನ್ನಡಿಗರು, ಗಣ್ಯಮಾನ್ಯರು, ನಾಗರೀಕರು, ಸಾಹಿತಿಗಳು, ರೈತರು, ಮಹಿಳೆಯರು, ಶಿಕ್ಷಕರು, ವಿದ್ಯಾರ್ಥಿಗಳು, ಯುವಕರು, ಮುಖಂಡರು, ಕಾರ್ಯಕರ್ತರು, ಉಪಸ್ಥಿತರಿದ್ದರು…
ವರದಿ. ಬಸವರಾಜ್, ಎಂ, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030