ಹೊನ್ನಾಳಿಯಲ್ಲಿ ವಿಜ್ರಂಭಣೆಯಿಂದ 69 ನೇ ಕನ್ನಡ ರಾಜ್ಯೋತ್ಸವ
ಹೊನ್ನಾಳಿ, ಇಂದು ಹೊನ್ನಾಳಿ ಪಟ್ಟಣದ ಪುರಸಭೆ ಆವರಣದಲ್ಲಿ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ವತಿಯಿಂದ ಕನ್ನಡ ರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸದ ಉಪವಿಭಾಗಾಧಿಕಾರಿ ಅಭಿಷೇಕ್ ವಿ , ಅಂಗಡಿಗಳ ನಾಮಫಲಕಗಳು ನಮ್ಮ ಕನ್ನಡ ನಾಡಿನಲ್ಲಿ ಕನ್ನಡ ಭಾಷೆಯಲ್ಲೇ ಇರಬೇಕು ಇಲ್ಲದಿದ್ದಲ್ಲಿ ಪರವಾನಿಗೆಯನ್ನ ಕೊಡಬೇಡಿ ಎಂದು ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಪುರಸಭೆಯ ಅಧಿಕಾರಿಗಳಿಗೆ ತಿಳಿಸಿದರು
ಆಡಳಿತ ಭಾಷೆ ಕನ್ನಡದಲ್ಲಿ ಇರಬೇಕು ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುವ ಮೂಲಕ ನೆಲ ಜಲ ಭಾಷೆ ಸಾಹಿತ್ಯ ಸಂಸ್ಕೃತಿ ಬಿಂಬಿಸುವ ಕೆಲಸ ಮಾಡಲು ಸಾಧ್ಯ ಎಂದು ಹೇಳಿದರು.
ಡಾ|| ಬಸನರಾಜಪ್ಪ ಕನ್ನಡ ಭಾಷ ಶಿಕ್ಷಕರು ಉಪನ್ಯಾಸದಲ್ಲಿ ಹಲ್ಮಿಡಿ ಶಾಸನದಿಂದ
1950 ರ ಏಕೀಕರಣ ರಾಜ್ಯರಚನೆಯ ಹಾಗೂ ಮೈಸೂರು ರಾಜ್ಯ ಎಂಬ ಹೆಸರಿನಿಂದ ಕರ್ನಾಟಕ ರಾಜ್ಯ ನಾಮಕರಣವಾಗಿ 51ನೇ ವರ್ಷದ ಚರಣೆ ಹಾಗೂ ಹೊರಾಟದ ಮಾಡಿದ ಮಹನೀಯರ ಬಗ್ಗೆ ಉಪನ್ಯಾಸ ಮಾಡಿದರು
ನಂತರ ಯುವ ಶಕ್ತಿ ಒಕ್ಕೂಟದ ವತಿಯಿಂದ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣವನ್ನು ಶಾಸಕ ಶಾಂತನಗೌಡರು ಡಿ ಜಿ ನೇರವೇರಿಸಿ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಮತ್ತು ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರಿದರು
ಕನ್ನಡ ನಾಡು ನುಡಿ ಸಂಸ್ಕೃತಿ ಕಟ್ಟಿ ಬೆಳೆಸಿದ ವೀರರಿಗೆ ಮತ್ತು ನೆಲ ಜಲ ಭಾಷೆ ಸಾಹಿತ್ಯ ಸಂಸ್ಕೃತಿ ಉಳಿಸಿ ಬೆಳೆಸಲು ನಾವೇಲ್ಲರು ಕನ್ನಡವನ್ನ ಹೇಚ್ಚಗಿ ಮಾತನಾಡುವುದರ ಮುಖಾಂತರ ನಮ್ಮ ಕನ್ನಡ ಭಾಷೆಯನ್ನ ಬೆಳೆಸಬೇಕೆಂದರು ಶ್ರೀ ಭುವನೇಶ್ವರಿ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿಕೂಡುವ ಭರವಸೆ ನೀಡಿದರು , ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹಬ್ಬಗಳಗ ಕಾರ್ಯಕ್ರಮಗಳಿಗೆ ಗೈರು ಹಾಜರಾಗದ್ದಂತೆ ಅಧಿಕಾರಿಗಳಿಗೆ ಸೂಚನೆ ನೀಡಲು ತಾಲ್ಲೂಕು ಆಡಳಿತಕ್ಕೆ ತಿಳಿಸಿದರು,
ತಾಯಿ ಭುವನೇಶ್ವರಿ ದೇವಿಯ ಪೋಟೋವನ್ನು ಗಜರಾಜನ ಮೇಲೆ ಪ್ರತಿಷ್ಠಾಪಿಸಲಾಗಿತ್ತು ಪಟ್ಟಣದ ಪ್ರಮುಖ ರಾಜ ಬೀದಿಗಳಲ್ಲಿ ಮೆರವಣಿಗೆ ನಡೆಯಿತು ಇದರಲ್ಲಿ ಹೊಸಕೇರಿ ಸುರೇಶ್ ಇವರ ಕನ್ನಡ ರಥ ವಿಶೇಷವಾಗಿ ಸಾರ್ವಜನಿಕರ ಗಮನ ಸೆಳೆಯಿತು. ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ,ಶಾಲೆಯ ಮಕ್ಕಳು ,ಶಿಕ್ಷಕರು ಮತ್ತು ಡೋಳ್ಳು ಕುಣಿತ ವಿವಿಧ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು ಕನ್ನಡ ಭಾಷೆಯಲ್ಲಿ 125 ಅಂಕಗಳಿಸಿದ ತಾಲ್ಲೂಕಿನ 37 ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು…
ವರದಿ. ಯುವರಾಜ್, ಹೊನ್ನಾಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030