ರೈತರ ಅಭಿವೃದ್ಧಿಗೆ ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಿ ಡಾ.ಓಂಕಾರಪ್ಪ…!!!

Listen to this article

ರೈತ ಉತ್ಪಾದಕರ ಸಂಸ್ಥೆಗಳ ಕಾರ್ಯ ದಕ್ಷತೆ ಹೆಚ್ಚಿಸಲು ಸಾಮಥ್ರ್ಯ ಅಭಿವೃದ್ದಿ ತರಬೇತಿಯಲ್ಲಿ ಕೆವಿಕೆ ಕೀಟಶಾಸ್ತ್ರಜ್ಞರಾದ ಡಾ.ಓಂಕಾರಪ್ಪ
ರೈತರ ಅಭಿವೃದ್ಧಿಗೆ ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಿ
ಚಿತ್ರದುರ್ಗ:ರೈತ ಉತ್ಪಾದಕರ ಸಂಸ್ಥೆಗಳು ರೈತರ ಅಭಿವೃದ್ದಿಗೆ ಸೇವ ಮನೋಭಾವನೆ, ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯಿಂದ ಕೆಲಸ ನಿರ್ವಹಿಸಬೇಕು ಎಂದು ಕೃಷಿ ವಿಜ್ಞಾನ ಕೇಂದ್ರದ ಕೀಟಶಾಸ್ತ್ರಜ್ಞರಾದ ಡಾ. ಓಂಕಾರಪ್ಪ ಹೇಳಿದರು.
ಹಿರಿಯೂರು ತಾಲ್ಲೂಕು ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಮಂಗಳವಾರ ಚಿತ್ರದುರ್ಗ ಜಿಲ್ಲೆಯ ವಿವಿಧ ಯೋಜನೆಗಳಡಿ ರಚಿತ ರೈತ ಉತ್ಪಾದಕರ ಸಂಸ್ಥೆಗಳ ಅಧ್ಯಕ್ಷರು, ಸಿಇಓ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಿಗೆ ಕಾರ್ಯ ದಕ್ಷತೆ ಹೆಚ್ಚಿಸಲು ಒಂದು ದಿನದ ಸಾಮಥ್ರ್ಯ ಅಭಿವೃದ್ದಿ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಿರಿಯೂರು ತಾಲ್ಲೂಕು ಬಬ್ಬೂರು ಫಾರಂನಲ್ಲಿ 2024ರ ನವೆಂಬರ್ ತಿಂಗಳ 9ನೇ ತಾರೀಕಿನಂದು ನಡೆಯುವ ಕೃಷಿ ಮೇಳಕ್ಕೆ ತಮ್ಮ ಎಲ್ಲಾ ಸದಸ್ಯರೊಂದಿಗೆ ಬಂದು ಕೃಷಿ ವಸ್ತು ಪ್ರದರ್ಶನ ಮತ್ತು ತಾಂತ್ರಿಕ ಕಾರ್ಯಗಾರದ ಸದುಪಯೋಗ ಪಡೆದುಕೊಳ್ಳಲು ಕೋರಿದರು.
ನಬಾರ್ಡ ಸಂಸ್ಥೆಯ ಜಿಲ್ಲಾ ಅಭಿವೃದ್ದಿ ವ್ಯವಸ್ಥಾಪಕರಾದ ಕವಿತಾ ಮಾತನಾಡಿ, ರೈತ ಉತ್ಪಾದಕರ ಸಂಸ್ಥೆಗಳು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಿದರೆ, ರೈತರಿಗೆ ಕೇತ್ರ ಮಟ್ಟದಲ್ಲಿ ಕೃಷಿ ಪರಿಕರಗಳನ್ನು ಸಮಯಕ್ಕೆ ಸರಿಯಾಗಿ ತಲುಪಿಸುವುದರಿಂದ ರೈತರಿಗೆ ಸಮಯದ ಉಳಿತಾಯ ಹಾಗೂ ಸಾಗಣಿಕೆ ವೆಚ್ಚ ಕಡಿಮೆಯಾಗುವುದು ಎಂದರು.
ಚಳ್ಳಕೆರೆ ಉಪ ವಿಭಾಗದ ಉಪ ಕೃಷಿ ನಿರ್ದೇಶಕ ಡಾ. ಬಿಎನ್ ಪ್ರಭಾಕರ್ ಮಾತನಾಡಿ, ರೈತರ ಅಭಿವೃದ್ದಿಗೆ ರೈತ ಉತ್ಪಾದಕರ ಸಂಸ್ಥೆಗಳ ಪಾತ್ರ ಬಹಳ ಪ್ರಾಮುಖ್ಯತೆಯನ್ನು ವಹಿಸಿದ್ದು, ಸದರಿ ಸಂಸ್ಥೆಗಳು ತಮ್ಮ ಶೇರುದಾರ ರೈತರಿಗೆ ಗುಣಮಟ್ಟದ ಕೃಷಿ ಪರಿಕರಗಳು ಒದಗಿಸಲು, ಬೆಳೆದ ಬೆಳೆಯನ್ನು ಖರೀದಿಸಲು ಮತ್ತು ಸಂಸ್ಕರಿಸಿ ಮೌಲ್ಯವರ್ಧನೆ ಮಾಡಿ ಉತ್ತಮ ಸೇವೆಯನ್ನು ಒದಗಿಸಲು ರೈತ ಉತ್ಪಾದಕರ ಸಂಸ್ಥೆಗಳ ಅಧ್ಯಕ್ಷರು, ಸಿಇಓ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಸೇವಾ ಮನೋಭಾವನೆಯಿಂದ ಕೆಲಸ ನಿರ್ವಹಿಸಬೇಕು. ಸದರಿ ಸಂಸ್ಥೆಗಳ ಕಾರ್ಯ ದಕ್ಷತೆ ಹೆಚ್ಚಿಸಲು ಇಂದಿನ ತರಬೇತಿಯ ಸದುಪಯೋಗ ಪಡೆದು ಕೊಳ್ಳಲು ಮನವಿ ಮಾಡಿದರು.
ಚಿತ್ರದುರ್ಗ ಉಪ ವಿಭಾಗದ ಉಪ ಕೃಷಿ ನಿರ್ದೇಶಕ ಕೆ.ಎಸ್.ಶಿವಕುಮಾರ್ ಮಾತನಾಡಿ, ರೈತ ಉತ್ಪಾದಕರ ಸಂಸ್ಥೆಗಳು ಸ್ವಾವಲಂಬನೆಯಿಂದ ಪ್ರಗತಿ ಸಾಧಿಸಲು ಇಂದಿನ ಸಾಮಥ್ರ್ಯ ಅಭಿವೃದ್ದಿಯ ತರಬೇತಿಯ ತಾಂತ್ರಿಕ ಮಾಹಿತಿ ಮತ್ತು ಯಶಸ್ವಿಯಾದ ರೈತ ಉತ್ಪಾದಕರ ಸಂಸ್ಥೆಗಳ ಅಳವಡಿಸಿದ ಅನುಭವಗಳ ಮಾಹಿತಿಯ ಅವಶ್ಯಕತೆಯನ್ನು ಮನದಟ್ಟು ಮಾಡಿದರು.
ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ್ ಮಾತನಾಡಿ, ವಿವಿಧ ತೋಟಗಾರಿಕೆ, ನಬಾರ್ಡ್ ಸಂಸ್ಥೆ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ಜಲಾನಯನ ಅಭಿವೃದ್ಧಿ ಯೋಜನೆ, ರಿವಾರ್ಡ ಯೋಜನೆಯಡಿ ರಚಿತ ರೈತ ಉತ್ಪಾದಕರ ಸಂಸ್ಥೆಗಳು ಸರ್ಕಾರದ ಯೋಜನೆಗಳನ್ನು ರೈತರಿಗೆ ತಲುಪಿಸುವಲ್ಲಿ, ರೈತರಿಗೆ ಗುಣಮಟ್ಟದ ಕೃಷಿ ಪರಿಕರಗಳ ಲಭ್ಯತೆ, ವ್ಯವಸ್ಥಿತ ಮಾರುಕಟ್ಟೆ ಕಲ್ಪಿಸುವುದು, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮಾಡಿ ಆರೋಗ್ಯಕರ ವಿಷಮುಕ್ತ ಸಮಾಜದ ನಿರ್ಮಾಣ ಮತ್ತು ಪರಿಸರ ಸಂರಕ್ಷಣೆ ಮಾಡುವಲ್ಲಿ ಸಹಕಾರಿಯಾಗಬೇಕು ಎಂದದರು.
ಕಾರ್ಯಕ್ರಮದಲ್ಲಿ ಕೆಇಎಫ್‍ಎ ಅಧ್ಯಕ್ಷ ಅರುಣ್ ಕುಮಾರ್, ಸಹಾಯಕ ಕೃಷಿ ನಿರ್ದೇಶಕ ಜಾರಿದಾಳ ಸಂಕಳ ಮಲ್ಲನಗೌಡ, ಇಕಾವೂ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ತಿಪ್ಪೇಸ್ವಾಮಿ, ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಮುಖ್ಯಸ್ಥ ಆರ್.ರಜನೀಕಾಂತ್ ಸೇರಿದಂತೆ ಆಸಕ್ತ 65 ಜನ ವಿವಿಧ ರೈತ ಉತ್ಪಾದಕರ ಸಂಸ್ಥೆಗಳ ಅಧ್ಯಕ್ಷರು, ಸಿಇಓ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಭಾಗವಹಿಸಿದ್ದರು…

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend