ಹಾಸನಾಂಬ ದೇವಿ ದರ್ಶನ ಪಡೆದ ಕೃಷಿ ಸಚಿವರು
ಹಾಸನ : ಮೈಸೂರು ಪ್ರಾಂತ್ಯದ ಅತಂತ್ಯ ಪ್ರಸಿದ್ದವಾದ ಹಾಸನಾಂಬ ದೇವಿಯ ಆರ್ಶೀವಾದ ಪ್ರತಿಯೊಬ್ಬರಿಗೂ ಬೇಕು. ನಾಡಿಗೆ ಒಳ್ಳೆಯ ಮಳೆ ಬೆಳೆಯಾಗಿ ರೈತರಿಗೆ ನೆಮ್ಮದಿ ಸಿಗಲಿ ಎಂದು ಕೃಷಿ ಸಚಿವರಾದ ಚೆಲುವರಾಯಸ್ವಾಮಿ ತಿಳಿಸಿದ್ದಾರೆ.
ಇಂದು ಅವರು ಹಾಸನಾಂಬ ದೇವಿ ದರ್ಶನ ಪಡೆದು ನಂತರ ಮಾತನಾಡಿ ಈ ಬಾರಿ ದೇವಿ ದರ್ಶನಕ್ಕೆ ಕೇವಲ 9 ದಿನ ಮಾತ್ರ ಕಾಲಾವಕಾಶ ಇದ್ದು, ಸಾರ್ವಜನಿಕರು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದರು.
ರೈತರ ಪರವಾಗಿ ಅನೇಕ ದೇವರ ಮೊರೆ ಹೋಗಿ ಪ್ರಾರ್ಥಿಸಿ, ರೈತರಿಗೆ ಸಂಪೂರ್ಣ ಅನುಕೂಲವಾಗಲಿ ಎಂದು ಬೇಡಿಕೊಂಡಿದ್ದೇನೆ, ಈಗ ಬಂದಿರುವ ಬೆಳೆಯು ರೈತರ ಕೈ ಸೇರಿ ರೈತರು ಸಂತೋಷದಿoದ ಇರಲಿ ಎಂದರು.
ರೈತರಿಗೆ ಬಿತ್ತನೆ ಬೀಜ, ಕೃಷಿ ಯಂತ್ರೋಪಕರಣಗಳನ್ನು ರಿಯಾಯಿತಿ ದರದಲ್ಲಿ ಒದಗಿಸಲಾಗುತ್ತಿದೆ. ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು 1 ಲಕ್ಷ ರೈತರಿಗೆ ತರಬೇತಿ ನೀಡಲಾಗುತ್ತಿದೆ.ಮುಂದಿನ ವರ್ಷದಲ್ಲಿ 2 ಲಕ್ಷ ರೈತರಿಗೆ ತರಬೇತಿ ನೀಡುವ ಗುರಿ ಹೋದಲಾಗಿದೆ ಎಂದು ತಿಳಿಸಿದರು.
ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ಹಾಗೂ ಸಂರಕ್ಷಣೆಗಾಗಿ 5 ಲಕ್ಷ ಮಣ್ಣಿನ ಮಾದರಿಯನ್ನು ಪರೀಕ್ಷೆ ಮಾಡಲು ಕ್ರಮವಹಿಸಲಾಗಿದೆ. ಮಣ್ಣಿನ ಪರೀಕ್ಷೆಗೆ ಒತ್ತು ನೀಡುವಂತೆ ಜನರಿಗೆ ಮಾಹಿತಿ ನೀಡಬೇಕು ಎಂದರು.
ರೈತರಿಗಾಗಿ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರಲು ಚಿಂತಿಸಲಾಗಿದೆ ಎಂದ ಸಚಿವರು 2100 ಕೋಟಿ ರೂ. ಬೆಳೆ ವಿಮೆ ಪಾವತಿಸಲಾಗಿದೆ ಎಂದು ತಿಳಿಸಿದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030