ಸ್ಥಳೀಯತೆ, ಸ್ವಾಭಿಮಾನ ಮತ್ತು ಅಭಿವೃದ್ಧಿಗೆ ನಿಮ್ಮ ಮತ ಕೊಡಿ – ಕಾರ್ಮಿಕ ಸಚಿವ – ಶ್ರೀ ಸಂತೋಷ್ ಎಸ್.ಲಾಡ್
ಬಳ್ಳಾರಿ ಜಿಲ್ಲೆಯ 95-ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾದ ಶ್ರೀಮತಿ ಅನ್ನಪೂರ್ಣ ತುಕಾರಾಂ ರವರು ದಿ; 24-10-2024 ರಂದು ಕಾಂಗ್ರೆಸ್ ಮುಖಂಡರು ಹಾಗೂ ಸಾರ್ವಜನಿಕರ ಅಪಾರವಾದ ಬೆಂಬಲಿಗರ ಮೆರವಣಿಗೆಯೊಂದಿಗೆ ತೆರಳಿ ತಮ್ಮ ನಾಮಪತ್ರವನ್ನು ತಾಲೂಕು ಆಡಳಿತ ಕಛೇರಿಯಲ್ಲಿ ಸಲ್ಲಿಸಿದರು.
ಸಚಿವರು, ಶಾಸಕರು ಮತ್ತು ಸಂಸದರು ಕಾಂಗ್ರೆಸ್ ಪಕ್ಷದ ಜನಪರ ಯೋಜನೆಗಳನ್ನು ನೆನಪಿಸಿಕೊಳ್ಳುತ್ತಾ, ಸ್ಥಳೀಯತೆ, ಸ್ವಾಭಿಮಾನ ಮತ್ತು ಅಭಿವೃದ್ಧಿಗೆ ಸಹಕಾರ ಕೊಡುವ ನಿಟ್ಟಿನಲ್ಲಿ ಸನ್ಮಾನ್ಯರಾದ ಸಿ.ಎಂ. ಸಿದ್ದರಾಮಯ್ಯನವರನ್ನು ಪಕ್ಷದ ಅಭ್ಯರ್ಥಿ ಎಂದೂ ಭಾವಿಸಿ ತಮ್ಮ ಅಮೂಲ್ಯವಾದ ಮತವನ್ನು ಕೊಟ್ಟು ಶ್ರೀಮತಿ ಅನ್ನಪೂರ್ಣ ಅವರ ಗೆಲುವಿಗೆ ಸಹಕರಿಸಿ ಎಂದೂ ಜನರಲ್ಲಿ ಮನವಿ ಮಾಡಿದರು*. ಬಡತನ ಹೋಗಲಾಡಿಸಲು ಮಾತಿನಲ್ಲಿ ಹೇಳಿದರೇ ಸಾಲದು. ಗ್ಯಾರಂಟಿ ಯೋಜನೆಗಳು ಕೊಟ್ಟು ಸ್ವಾರ್ಥ ರಾಜಕೀಯ ಬಿಟ್ಟು ಅಸಮಾನತೆಗಾಗಿ ಪಣತೊಟ್ಟಾಗ ಮಾತ್ರ ಬಡತನ ನಿವಾರಿಸಲು ಸಾಧ್ಯ ಎಂದರು. ತಾವು ಎಲ್ಲರೂ ಭೇದ ಭಾವ ಮರೆತು ಒಗ್ಗಟ್ಟಿನಿಂದ ಸಂಡೂರು ವಿಧಾನ ಸಭಾ ಕ್ಷೇತ್ರದಲ್ಲಿ ಯಾರಿಗೂ ತೊಂದರೆಯಾಗದಂತೆ ನೋಡಿಕೊಳ್ಳಲು ಗೆಲುವುಗಾಗಿ ಸಹಕರಿಸಲು ವಿನಂತಿಸಿಕೊಂಡರು.
ಸಂಡೂರು ವಿಧಾನ ಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾದ ಶ್ರೀಮತಿ ಅನ್ನಪೂರ್ಣ ತುಕಾರಾಂ ಅವರು ಮಾತನಾಡಿ, ಸಂಡೂರು ಕ್ಷೇತ್ರದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಅಸಮಾನತೆಯನ್ನು ಹೋಗಲಾಡಿಸಲು ನನ್ನಂತಹ ಒಬ್ಬ ಮಹಿಳೆಗೆ ಟಿಕೆಟ್ ಕೊಟ್ಟಿರುವಂತದ್ದು ಒಳ್ಳೆಯ ಬೆಳವಣಿಗೆ. ಸನ್ಮಾನ್ಯರಾದ ಶ್ರೀ ಸಂತೋಷ್ ಎಸ್ ಲಾಡ್ ಅವರು ನನ್ನ ರಾಜಕೀಯ ಗುರುಗಳು ಮತ್ತು ಮಾರ್ಗದರ್ಶಕರು, ಹಾಗೂ ನಮ್ಮ ಪತಿರಾಯರಾದ ಸನ್ಮಾನ್ಯ ಈ ತುಕಾರಾಂ ಅವರು ಈ ಕ್ಷೇತ್ರದ ಜೋಡಿ ಎತ್ತುಗಳು ಮತ್ತು ಅಭಿವೃದ್ಧಿ ಹರಿಕಾರರು ಹೌದು. ಇವರ ಇಬ್ಬರ ಕನಸು ಈಡೇರಲು ತಮ್ಮ ಅಮೂಲ್ಯವಾದ ಮತವನ್ನು ಕೊಟ್ಟು ನನ್ನ ಗೆಲುವಿಗೆ ಶ್ರಮಿಸಿ ಎಂದೂ ಮತದಾರರಲ್ಲಿ ಮನವಿ ಮಾಡಿದರು. ಹಾಗೆಯೇ ಇಷ್ಟು ದೊಡ್ಡ ಸಂಖ್ಯೆಯಲ್ಲಿ ನಾನು ನಾಮಪತ್ರ ಸಲ್ಲಿಸಲು ಅಪಾರ ಪ್ರಮಾಣದಲ್ಲಿ ಸೇರಿದ ಎಲ್ಲರಿಗೆ ಧನ್ಯವಾದಗಳು ತಿಳಿಸುತ್ತೇನೆ ಎಂದರು.
ಈ ವೇಳೆ ಜಿಲ್ಲಾ ಉಸ್ತುವಾರಿ ಮತ್ತು ವಸತಿ ಸನ್ಮಾನ್ಯ ಸಚಿವರಾದ ಬಿ. ಝಡ್, ಜಮೀರ್ ಅಹ್ಮದ್ ಖಾನ್, ಸನ್ಮಾನ್ಯ ಕಾರ್ಮಿಕ ಸಚಿವರಾದ ಶ್ರೀ ಸಂತೋಷ್ ಎಸ್. ಲಾಡ್, ಎ.ಐ.ಸಿ.ಸಿ. ಕಾರ್ಯದರ್ಶಿಯ ಉಸ್ತುವಾರಿಗಳಾದ ಮಾನ್ಯ ಗೋಪಿನಾಥ್, ಅಖಂಡ ಬಳ್ಳಾರಿ ಜಿಲ್ಲೆಯ ಮಾನ್ಯ ಸಂಸದರಾದ ಈ. ತುಕಾರಾಂ, ಮಾಜಿ ಸಚಿವರಾದ ಪಿ. ಟಿ. ಪರಮೇಶ್ವರನಾಯ್ಕ್, ಬಿ. ನಾಗೇಂದ್ರ, ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ, ಸಿರುಗುಪ್ಪ ವಿಧಾನ ಸಭಾ ಕ್ಷೇತ್ರದ ಮಾನ್ಯಶಾಸಕರಾದ ಬಿ. ಎಂ. ನಾಗರಾಜ, ಮಾಜಿ ಶಾಸಕರು ಹಾಗೂ ಕೆ.ಎಂ. ಎಫ್ .ಅಧ್ಯಕ್ಷರಾದ ಭೀಮನಾಯ್ಕ್ , ಬಳ್ಳಾರಿ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶಿವಯೋಗಿ, ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶ್ರೀ ಎಂ ಗುರುಸಿದ್ದನಗೌಡ, ಜಿಲ್ಲಾ ST ಕಾಂಗ್ರೆಸ್ ಸೆಲ್ ಅಧ್ಯಕ್ಷರಾದ ಕಾವಲ್ಲಿ ಶಿವಪ್ಪನಾಯಕ, ಕಾಂಗ್ರೆಸ್ ಪಕ್ಷದ ವಿವಿಧ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು…
ವರದಿ, ಅನಿಲ್ ಕುಮಾರ್ ಹುಲಿಕುಂಟೆ,
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030