ಹುಲಿಕುಂಟೆ ಗ್ರಾಮದಲ್ಲಿ ವಿಜೃಂಭಣೆಯ ವಾಲ್ಮೀಕಿ ಜಯಂತಿ ಆಚರಣೆ…!!!

Listen to this article

ಹುಲಿಕುಂಟೆ ಗ್ರಾಮದಲ್ಲಿ ವಿಜೃಂಭಣೆಯ ವಾಲ್ಮೀಕಿ ಜಯಂತಿ ಆಚರಣೆ
ಕೂಡ್ಲಿಗಿ ತಾಲೂಕು ವಿಜಯನಗರ ಜಿಲ್ಲೆ, ಹುಲಿಕುಂಟೆ ಗ್ರಾಮದಲ್ಲಿ ಸೋಮವಾರ ದಂದು ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀಮತಿ ಇಂದ್ರಮ್ಮ ಮಲಿಯಪ್ಪ, ಕೆ. ನಾಗರಾಜ್ ವಾಲ್ಮೀಕಿ ಸಂಘದ ಅಧ್ಯಕ್ಷರಾದ ಕೆ. ಬಸವರಾಜ್ ರವರು ಮಹಾ ಕವಿ ಮಹರ್ಷಿ ವಾಲ್ಮೀಕಿ ನಾಮಫಲಕಕ್ಕೆ ಪುಷ್ಪಾರ್ಜನೆ ಸಲ್ಲಿಸಿ ಉದ್ಘಾಟನೆ ನೆರವೇರಿಸಿ ಭಾರತದ ಮೊಟ್ಟ ಮೊದಲ ಮಹಾಕಾವ್ಯ ರಾಮಾಯಣವನ್ನು ರಚಿಸಿದ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ರಚಿಸಿದ ಶ್ಲೋಕಗಳು ಇಂದಿಗೂ ಪ್ರಸ್ತುತವಾಗಿದ್ದು ಕನ್ನಡಕ್ಕೆ ತುರ್ಜುಮೆ ಗೊಂಡಿವೆ ಇವರ ಆದರ್ಶ ನಮಗೆಲ್ಲ ಮಾರ್ಗದರ್ಶನ ಎಂದು ಈ ಸಂದರ್ಭದಲ್ಲಿ ಮಾತನಾಡಿದರು ಗ್ರಾಮದ ಹಿರಿಯ ಮುಖಂಡರ ಸಮ್ಮುಖದಲ್ಲಿ ವಾಲ್ಮೀಕಿ ಜಯಂತಿಯನ್ನು ಆಚರಿಸಿದರು ನಂತರ ಕೆ.ಬೋರಣ್ಣ ನವರ ಕೈ ರುಚಿಯ ಉಪಹಾರ ಮುಗಿಸಿ ನಂತರ ಡಿ.ಜೆ ಸೌಂಡಿಗೆ ವಾಲ್ಮೀಕಿ ಗೆಳೆಯರ ಬಳಗದವರು ಹಾಗೂ ಊರಿನ ಎಲ್ಲಾ ಗೆಳೆಯರ ಬಳಗದ ಯುವಕರು ಮುಖಂಡರ ಜೊತೆ ಸೇರಿ ಕುಣಿದು ಕುಪ್ಪಳಿಸಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರು, ಆರಕ್ಷಕ ಠಾಣೆ ಸಿಬ್ಬಂದಿ ಗುಡೆಕೋಟೆ,ಊರಿನ ಮುಖಂಡರು, ವಾಲ್ಮೀಕಿ ಗೆಳೆಯರ ಬಳಗದವರು,ಹಾಗೂ ಉಪಸ್ಥಿತರಿದ್ದರು…


ವರದಿ:- ಅನಿಲ್ ಕುಮಾರ್ ಹುಲಿಕುಂಟೆ.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend