ಮೂಕ ಪ್ರಾಣಿಗಳ ಜೀವ ರಕ್ಷಕರಾಗಿ ಕೆಲಸ ಮಾಡುವಂತೆ ಪಶು ವೈದ್ಯರಿಗೆ ಕಿವಿಮಾತು ಹೇಳಿದ ಶಾಸಕ ಡಾ. ಶ್ರೀನಿವಾಸ್ ಎನ್ ಟಿ…!!!

Listen to this article

ಮೂಕ ಪ್ರಾಣಿಗಳ ಜೀವ ರಕ್ಷಕರಾಗಿ ಕೆಲಸ ಮಾಡುವಂತೆ ಪಶು ವೈದ್ಯರಿಗೆ ಕಿವಿಮಾತು ಹೇಳಿದ ಶಾಸಕ ಡಾ. ಶ್ರೀನಿವಾಸ್ ಎನ್ ಟಿ.


ಕೂಡ್ಲಿಗಿ ಕ್ಷೇತ್ರದ ಜನಪ್ರಿಯ ಶಾಸಕರಾದ ಡಾ. ಶ್ರೀನಿವಾಸ್ ಎನ್ ಟಿ ರವರು ದಿನಾಂಕ 21.10.2024 ರಂದು ನರಸಿಂಹಗಿರಿ ಗ್ರಾಮದ ಪಶು ಆಸ್ಪತ್ರೆಯಲ್ಲಿ ಜಾನುವಾರು ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ 6ನೇ ಸುತ್ತಿನ ಕಾಲುಬಾಯಿ ರೋಗ ಲಸಿಕೆ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕಾಲುಬಾಯಿ ರೋಗ ವೈರಾಣುನಿಂದ ಬರುವ ಅಂಟು ಜಾಡ್ಯವಾಗಿರುವುದರಿಂದ ರೈತರಿಗೆ ಸಂಕಷ್ಟವನ್ನು ಉಂಟು ಮಾಡುವ ಕಾಲುಬಾಯಿ ರೋಗಕ್ಕೆ ಲಸಿಕೆ ಹಾಕುವುದೊಂದೇ ಏಕೈಕ ಮಾರ್ಗವಾಗಿದೆ. ಅದಕ್ಕಾಗಿ ಎತ್ತು, ಆಕಳು, ಎಮ್ಮೆ, ದನಕರುಗಳಿಗೆ ತಪ್ಪದೇ ಲಸಿಕೆಯನ್ನು ಹಾಕಿಸಬೇಕು ಎಂದು ರೈತರಲ್ಲಿ ಮನವಿ ಮಾಡಿದರು.

ಮುಂದುವರೆದು ಮಾತನಾಡಿ, ಪಶು ವೈದ್ಯರು ಹಾಗೂ ಸಿಬ್ಬಂದಿ ವರ್ಗದವರು ಸಮನ್ವಯತೆಯಿಂದ ಕೆಲಸ ನಿರ್ವಹಿಸಬೇಕು. ಮನುಷ್ಯ ಒಬ್ಬ ಸಂಘಜೀವಿ ಇನ್ನೊಬ್ಬರ ಬಳಿ ತನ್ನ ಸಮಸ್ಯೆ ನಿವಾರಣೆಗೆ ಉತ್ತರವನ್ನು ಹುಡುಕುತ್ತಾನೆ ಆದರೆ ಮೂಕ ಪ್ರಾಣಿಗಳು ಯಾರ ಬಳಿ ತನ್ನ ರೋಧನೆಯನ್ನು ಹೇಳಿಕೊಳ್ಳುತ್ತವೆ ಹೇಳಿ ? ಎಂದರು.ಆದ್ದರಿಂದ ಪಶುವೈದ್ಯರು ಸರಿಯಾದ ಸಮಯಕ್ಕೆ ಚಿಕಿತ್ಸೆಯನ್ನು ನೀಡುವಂತದ್ದು , ಮುಂಜಾಗ್ರತೆಯಿಂದ ಕಾಯಿಲೆಗಳಿಗೆ ಲಸಿಕೆಯನ್ನು ಹಾಕಿ ಮೂಕ ಪ್ರಾಣಿಗಳ ಜೀವ ರಕ್ಷಕರಾಗಿ ಕೆಲಸ ಮಾಡುವಂತೆ ಕಿವಿಮಾತು ಹೇಳಿದರು . ಈ ಸಂದರ್ಭದಲ್ಲಿ ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕರು & ಸಿಬ್ಬಂದಿ ವರ್ಗದವರು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು & ಸದಸ್ಯರು, ಸುತ್ತ ಮುತ್ತಲಿನ ಗ್ರಾಮದ ರೈತರು ಉಪಸ್ಥಿತರಿದ್ದರು…

ವರದಿ. ಎಂ. ಬಸವರಾಜ್ ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend