ನೋಟಿಸ್ ನೀಡುವುದು-ಒಕ್ಕಲೆಬ್ಬಿಸುವುದು ಮಾಡದಂತೆ ಅರಣ್ಯ ಇಲಾಖೆಗೆ ಸೂಚನೆ: ಮಧು ಬಂಗಾರಪ್ಪ…!!!

Listen to this article

ನೋಟಿಸ್ ನೀಡುವುದು-ಒಕ್ಕಲೆಬ್ಬಿಸುವುದು ಮಾಡದಂತೆ ಅರಣ್ಯ ಇಲಾಖೆಗೆ ಸೂಚನೆ: ಮಧು ಬಂಗಾರಪ್ಪ
ಶಿವಮೊಗ್ಗ :2015 ನೇ ಸಾಲಿನ ಒಳಗೆ 3 ಎಕರೆ ಒಳಗಿರುವ ಜಮೀನು ಸಾಗುವಳಿ ಮಾಡುತ್ತಿರುವ ರೈತರಿಗೆ ಅರಣ್ಯ ಇಲಾಖೆಯಿಂದ ಒಕ್ಕಲೆಬ್ಬಿಸುವುದು, ನೋಟಿಸ್ ನೀಡುವುದಾಗಲಿ ಮಾಡಬಾರದೆಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಸೂಚನೆ ನೀಡಿದರು.
ಇಂದು ಲೋಕೋಪಯೋಗಿ ಭವನದಲ್ಲಿ ಏರ್ಪಡಿಸಲಾಗಿದ್ದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೋರ್ಟ್ ಪ್ರಕರಣ, ಲೋಕಾಯುಕ್ತ ಪ್ರಕರಣಗಳನ್ನು ಹೊರತುಪಡಿಸಿ 3 ಎಕರೆ ಒಳಗೆ ಸಾಗುವಳಿ ಮಾಡುತ್ತಿರುವ ರೈತರಿಗೆ ಅರಣ್ಯ ಇಲಾಖೆ ನೋಟಿಸ್ ನೀಡುವಂತಿಲ್ಲ. ಸಣ್ಣ ಹಿಡುವಳಿದಾರರಿಗೆ ಯಾವುದೇ ರೀತಿಯಲ್ಲಿ ತೊಂದರೆ ಮಾಡಬಾರದು. 3 ಎಕರೆಗಿಂತ ಹೆಚ್ಚಿನ ಭೂಮಿ ಸಾಗುವಳಿ ಮಾಡುತ್ತಿದ್ದರೆ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆ ಅಧಿಕಾರಿಳಿಗೆ ಸಚಿವರು ಸೂಚಿಸಿದರು.
ಗ್ರಾಮಗಳಲ್ಲಿ ಗ್ರಾಮ ಸಭೆ ಮಾಡಿ ಸಾಗುವಳಿದಾರರು, ಅವರ ಜಮೀನಿನ ಕುರಿತು ಮಾಹಿತಿ ತೆಗೆದುಕೊಳ್ಳಬೇಕು. ಬಗರ್‌ಹುಕುಂ ಸಮಸ್ಯೆಗಳನ್ನು ನಿರ್ವಹಿಸಲು ಶೀಘ್ರದಲ್ಲೇ ಸಮಿತಿ ರಚಿಸಲಾಗುವುದು ಎಂದರು.
ಯುಜಿಡಿ ಅನುದಾನಕ್ಕೆ ಪ್ರಸ್ತಾವನೆ : ಯುಜಿಟಿ ಕಾಮಗಾರಿ ಕೈಗೊಳ್ಳಲು ಆನವಟ್ಟಿಗೆ ರೂ.138 ಕೋಟಿ ಮತ್ತು ಸೊರಬಕ್ಕೆ 180.5 ಕೋಟಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಶಿವಮೊಗ್ಗ ನಗರಕ್ಕೆ ಈಗಾಗಲೇ ರೂ.40 ಕೋಟಿ ಮಂಜೂರಾಗಿದ್ದು ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ.
ಜಿಲ್ಲೆಯ ಯಾವುದೇ ಬೃಹತ್, ಸಣ್ಣ ನೀರಾವರಿ ಕಾಮಗಾರಿಗಳು ಬಾಕಿ ಇದ್ದಲ್ಲಿ, ಅವುಗಳ ಅನುಸರಣೆ ಕೈಗೊಂಡು, ಸಮಸ್ಯೆ ಇದ್ದಲ್ಲಿ ನನ್ನ ಗಮನಕ್ಕೆ ತರಬೇಕು. ಶೀಘ್ರವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದರು.
ಟರ್ಬಿಡಿಟಿ ನೀರು ಕ್ರಮ : ಶಿವಮೊಗ್ಗ ನಗರದಲ್ಲಿ ಮಳೆ ಬಂದ ನಂತರ ಕುಡಿಯುವ ನೀರು ಕೆಂಪಾಗಿದ್ದು, ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಪ್ರಸ್ತುತ ಡ್ಯಾಂನಿoದ 35 ಕ್ಯುಸೆಕ್ಸ್ ಮತ್ತು ನದಿಯಿಂದ 10 ಕ್ಯುಸೆಕ್ಸ್ ನೀರನ್ನು ಬಿಡಲಾಗುತ್ತಿದೆ. ನದಿ ನೀರು ಕೆಂಪಾಗಿದ್ದು, ಈ 10 ಕ್ಯುಸೆಕ್ಸ್ ನೀರನ್ನೂ ಡ್ಯಾಂ ನಿಂದಲೇ ಬಿಟ್ಟರೆ ಟರ್ಬಿಡಿಟಿ ನೀರನ್ನು ನಿಯಂತ್ರಿಸಬಹುದೆoದು ಕಾರ್ಯಪಾಲಕ ಅಭಿಯಂತರರು ತಿಳಿಸಿದರು.
ಸಚಿವರು ಪ್ರತಿಕ್ರಿಯಿಸಿ, ಮಳೆಗಾಲದಲ್ಲಿ ಡ್ಯಾಂ ತುಂಬಿರುವ ಕಾರಣ 10 ಕ್ಯುಸೆಕ್ಸ್ ನೀರನ್ನು ಡ್ಯಾಂ ನಿಂದ ಬಿಡಬಹುದು. ಈ ಬಗ್ಗೆ ಕ್ರಮ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಸಭೆಯಲ್ಲಿ ವಿಧಾನ ಪರಿಷತ್ ಶಾಸಕರಾದ ಬಲ್ಕೀಶ್ ಬಾನು, ಬೃಹತ್, ಸಣ್ಣ ನೀರಾವರಿ, ಅರಣ್ಯ ಇಲಾಖೆ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಸಾಗರ ಉಪವಿಭಾಗಾಧಿಕಾರಿ ಇತರೆ ಇಲಾಖೆಗಳ ಅಧಿಕಾರಿಗಳು ಇದ್ದರು.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend