ಹಂಪಾಪಟ್ಟಣ: ಗ್ರ‍ಾ ಪಂ ಯಿಂದ ಕಾರುಣ್ಯಾಶ್ರಮಕ್ಕೆ ಆರ್ಥಿಕ ಸಹಾಯ…!!!

Listen to this article

ಹಂಪಾಪಟ್ಟಣ: ಗ್ರ‍ಾ ಪಂ ಯಿಂದ ಕಾರುಣ್ಯಾಶ್ರಮಕ್ಕೆ ಆರ್ಥಿಕ ಸಹಾಯ- ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ: ತಾಲೂಕಿನ ಹಂಪಾಪಟ್ಟಣ ಗ್ರಾಮ ಪಂಚಾಯ್ತಿ ಯಿಂದ, ಸಿಂಧನೂರಿನ ಕಾರುಣ್ಯಾಶ್ರಮಕ್ಕೆ ಆರ್ಥಿಕ ನೆರವು ನೀಡಲಾಗಿದೆ. ಹಂಪಾ ಪಟ್ಟಣ ಗ್ರ‍ಾಮ ಪಂಚಾಯ್ತಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರುಗಳು, ಪರಸ್ಪರ ಸರ್ವಾನತದಿಂದ ನಿರ್ಣಯ ಕೈಗೊಂಡು. ಸಿಂಧನೂರಿನ ಕಾರುಣ್ಯ ನೆಲೆ ವೃದ್ದಾಶ್ರಮ, ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮಕ್ಕೆ ಭೇಟಿ ನೀಡಿ ಪಂಚಾಯ್ತಿ ವತಿಯಿಂದ ಆರ್ಥೀಕ ನೆರವು ನೀಡಲಾಗಿದೆ. ಹಲವು ವರ್ಷಗಳಿಂದಲೂ ಹಂಪಾಪಟ್ಟಣದಲ್ಲಿ ವಾಸವಿದ್ದು, ನೆಲೆಕಾಣದೇ ಅನಾಥವಾಗಿದ್ದ ಪದ್ದಮ್ಮ ಎಂಬ 63 ವರ್ಷದ ಅನಾಥ ವೃದ್ದೆಯನ್ನು. ಗ್ರ‍ಾಮ ಪಂಚಾಯ್ತಿ ಜನಪ್ರತಿನಿಧಿಗಳು ಸಿಂಧನೂರಿನ ಆಶ್ರಮಕ್ಕೆ, ಕರೆದೊಯ್ಯುದು ಸೇರಿಸಿದ್ದಾರೆ. ಮತ್ತು ಪಂಚಾಯ್ತಿ ಜನಪ್ರತಿ ನಿಧಿಗಳ ಅನುದಾನದಲ್ಲಿ, ಕಾರುಣ್ಯಾಶ್ರಮಕ್ಕೆ ಧೇಣಿಗೆಯಾಗಿ 11,000 ರೂ. ಗಳ ಚೆಕ್ ವಿತರಿಸಲ‍ಾಗಿದೆ. ಗ್ರ‍ಾಮ ಪಂಚಾಯ್ತಿ ಜನ ಪ್ರತಿನಿಧಿಗಳು ಆಶ್ರಮವನ್ನು ಖುದ್ದು ಗಮನಿಸಿ, ಆಶ್ರಮದ ಸೇವೆಯನ್ನು ಪ್ರತ್ಯಕ್ಷ ಕಂಡು ಹರ್ಷ ವ್ಯಕ್ತಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಕಾರುಣ್ಯಾಶ್ರಮದ ವತಿಯಿಂದ, ಹಂಪಾಪಟ್ಟಣ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಬಿ. ನಾಗರಾಜ. ಹಂಪಾ ಪಟ್ಟಣ ಗ್ರಾಮದ ಸಮಾಜ ಸೇವಕರುಗಳಾದ, ಶಾಂತಮ್ಮ, ರಾಮಪ್ಪ, ಹುಲಿಗೆಮ್ಮ, ಭೀಮಪ್ಪ ಇವರುಗಳನ್ನು. ಆಶ್ರಮದ ವತಿಯಿಂದ ಸನ್ಮಾನಿಸಿ ಗೌರವಿಸಿ, ನೆನಪಿನ ಕಾಣಿಕೆಯನ್ನು ವಿತರಿಸಲಾಯಿತು.
ಹಂಪಾಪಟ್ಟಣ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಿ ನಾಗರಾಜ ಮಾತನಾಡಿ, ನಮ್ಮ ಹಗರಿಬೊಮ್ಮನಹಳ್ಳಿ ತಾಲೂಕಿನ ಮನೆ ಮನಸುಗಳಲ್ಲಿರುವ ಸಿಂಧನೂರಿನ ಕಾರುಣ್ಯಾಶ್ರಮವು. ಮಾನವೀಯತೆಯ ಒರತೆಯಾಗಿದೆ,ಸತ್ಯ ಸೇವೆಯ ಮೂಲಕ ಕರುನಾಡಿನ ಕರುಣಾಮಯಿ ಕಾರುಣ್ಯ ಕುಟುಂಬವಾಗಿದೆ. ಸಿಂಧನೂರಿನ ಕಾರುಣ್ಯ ಆಶ್ರಮದವರು, ನಮ್ಮೂರಿನಲ್ಲಿ ಸುಮಾರು ವರ್ಷಗಳಿಂದ ನೆಲೆಸಿದ್ದ, ಅನಾಥೆ ವೃದ್ಧೆ ಪದ್ದಮ್ಮ ರನ್ನು ತಮ್ಮ ಆಶ್ರಮಕ್ಕೆ ಕರೆತಂದು ವೃದ್ದೆಗೆ ಆಶ್ರಯ ನೀಡಿದ್ದಾರೆ.
ಹಗರಿಬೊಮ್ಮನಹಳ್ಳಿ ತಹಸೀಲ್ದಾರರಾದ ಕವಿತಾ ರವರ, ಸಲಹೆ ಸೂಚನೆಯಂತೆ, ತಾವು ಸಿಂಧನೂರಿನ ಕಾರುಣ್ಯ ಆಶ್ರಮ ಸಂಪರ್ಕಿಸಿರುವುದಾಗಿ ತಹಶಿಲ್ದಾರರಾದ ಕವಿತಾರವರನ್ನು ಸ್ಮರಿಸಿದರು. ಹಂಪಾಪಟ್ಟಣದ ರೈತಾಪಿ ವರ್ಗದಿಂದ , ಹಾಗೂ ತಾಲೂಕಿನ ಎಲ್ಲಾ ಗುರು ಹಿರಿಯರಿಂದ. ಅನಾಥರಿಗೆ ಅಶ್ರಯ ನೀಡುವ ಕಾರುಣ್ಯಾಶ್ರಮಕ್ಕೆ, ದಾಖಲು ಪ್ರಮಾಣದಲ್ಲಿ ನೆರವು ದೊರೆಯುವ ಸಾಧ್ಯತೆ ಇದೆ ಎಂದರು. ಕಾರುಣ್ಯ ಆಶ್ರಮದಲ್ಲಿ ಆಶ್ರಯ ಕಂಡುಕೊಂಡಿರುವ ಹಿರಿಯ ವೃದ್ಧರು, ಹಾಗೂ ವಯಸ್ಕರ ಬುದ್ಧಿಮಾಂದ್ಯರು. ಸ್ವಂತ ಒಂದೇ ಕುಟುಂಬದ ಸದಸ್ಯರು ಎನ್ನುವ ರೀತಿಯಲ್ಲಿ ವೃದ್ಧರು ಅನಾಥ ರಿಗೆ ಆಶ್ರಯ ನೀಡಿ, ಬದುಕು ಕಟ್ಟಿಕೊಂಡಿದ್ದಾರೆ. ನಿರಂತರ ಜಂಗಮನ ಜೋಳಿಗೆಯ ಕಾಯಕದ ಮೂಲಕ, ದಾಸೋಹಿ ಮೂರ್ತಿಯಾಗಿರುವ ಈ ಸಂಸ್ಥೆಯ ಸಂಸ್ಥಾಪಕರಾದ ವೇ.ಮೂ. ಅಮರಯ್ಯ ಸ್ವಾಮಿ ಹಿರೇಮಠ. ಅ॥ರವರಿಗೆ ನಮ್ಮೆಲ್ಲರ ಪರವಾಗಿ ಹಾಗೂ ನಮ್ಮ ವಿಜಯನಗರ ಜಿಲ್ಲೆ, ಹಗರಿಬೊಮ್ಮನಹಳ್ಳಿ ತಾಲೂಕಿನ ಜನತೆ ಹಾಗೂ ಹಂಪಾಪಟ್ಟಣದ ಗ್ರಾಮ ಪಂಚಾಯತ್ ವತಿಯಿಂದ. ಹೃದಯಪೂರ್ವಕ ಹೃತ್ಪೂರ್ವಕ ಅಭಿನಂದನೆಗಳನ್ನು, ಈ ಮೂಲಕ ಸಲ್ಲಿಸುತ್ತಿರುವುದಾಗಿ ಅವರು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಹಂಪಾಪಟ್ಟಣ ಗ್ರಾಮ ಪಂಚಾಯತ್ ಸದಸ್ಯರಾದ ಎನ್.ನಾಗರಾಜ, ಮಂಜುನಾಥ. ಗಾಳೆಪ್ಪ. ಸಿ. ಎಲ್. ಕುಮಾರ್. ಹಾಗೂ ಹಂಪಾ ಪಟ್ಟಣದ ಅನೇಕ ಹಿರಿಯರು. ಮತ್ತು ಆಶ್ರಮದ ಸಿಬ್ಬಂದಿಗಳಾದ ಡಾ.ಚನ್ನಬಸವ ಸ್ವಾಮಿ ಹಿರೇಮಠ. ಅಶೋಕ. ಸುಜಾತ ಹಿರೇಮಠ. ಶರಣಮ್ಮ. ಸಿದ್ದಯ್ಯ ಸ್ವಾಮಿ. ಮರಿಯಪ್ಪ ಅನೇಕರು ಉಪಸ್ಥಿತರಿದ್ದರು…

ವರದಿ..ವಿ.ಜಿ.ವೃಷಭೇಂದ್ರ ಕೂಡ್ಲಿಗಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend