ಸ್ನೇಹಿತರ ಬಳಗ ಕೂಡ್ಲಿಗಿ ಅನ್ನುವ ಸಮಾಜ ಸೇವೆಯ ಪ್ರಾರಂಭವಾದ ಇಂದಿಗೆ ಏಳು ವರ್ಷ…!!!

Listen to this article

24.12.2018 ರಿಂದ ಸ್ನೇಹಿತರ ಬಳಗ ಕೂಡ್ಲಿಗಿ ಅನ್ನುವ ಸಮಾಜ ಸೇವೆಯ ಪ್ರಾರಂಭವಾದ ಇಂದಿಗೆ ಏಳು ವರ್ಷ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ನಾನು ನನ್ನ ಜೀವನ ಶೈಲಿ ಬದಲಾವಣೆಗೆ ಕಾರಣ
ಒಂದು ದಿನ ನಮ್ಮ ವೈದ್ಯರ ತಂಡದೊಂದಿಗೆ ನಮ್ಮ ಊರಿನಿಂದ 3 ಕಿಲೋಮೀಟರ್ ದೂರದಲ್ಲಿರುವ ಒಂದು ಹಟ್ಟಿಗೆ ನನ್ನ ಪ್ರಯಾಣ ಆಯಿತು ಅಲ್ಲಿ ಹಣವಿಲ್ಲ ಎನ್ನುವ ಕಾರಣಕ್ಕೆ ಕಣ್ಣು ಕಳೆದುಕೊಂಡ ಮಧ್ಯ ವಯಸ್ಸಿನ ವ್ಯಕ್ತಿಯನ್ನು ನೋಡಿ ನನ್ನ ಮನ ತನ್ಮಯ ಗೊಂಡಿತು ಅಂದು ನಾನು ಅಲ್ಲಾಹ ನನಗೆ ಶಕ್ತಿ ನೀಡಲಿ ಅಂದುಕೊಂಡೆ ಅದರಂತೆ ನಿಸ್ಸಹಾಯಕರನ್ನು ಗುರುತಿಸಿ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸಾ ಶಿಬಿರ ಗಳನ್ನು ಏರ್ಪಡಿಸುತ್ತಾ ಬಂದಿರುತ್ತೇನೆ ಇಂದಿಗೆ 5.9.2024.ಏಳು ವರ್ಷಗಳ ಆನಂದದ ಜೀವನ ಸುಮಾರು 4500ಜನರಿಗೆ ಉಚಿತ ಯಶಸ್ವಿ ಕಣ್ಣಿನ ಶಸ್ತ್ರ ಚಿಕಿತ್ಸೆ ನಡೆಸುತ್ತಿದ್ದೇನೆ ಹಾಗೆಯೇ ಕರೋನಾ ಸಂದರ್ಭದಲ್ಲಿ ಸರಕಾರಿ ಆಸ್ಪತ್ರೆಗೆ ಆಕ್ಸಿಜನ್ ಕ್ಲೋಮಿಟರ್ ಕೊಡುವುದರ ಮೂಲಕ ಹಾಗೂ ರೋಗಿಗಳಿಗೆ ಪೌಷ್ಟಿಕಆಹಾರ ಹಾಗೆಯೇ ಕೊರೋನಾ ವಾರಿಯರ್ಸ್ ಆಗಿ ನಾನು.ನನ್ನ ತಂಡದಿಂದ ಸುಮಾರು 10 ವಾರ್ಡಗಳಿಗೆ ಸ್ಯಾಚುಲೇಶನ್ ಪರೀಕ್ಷೆ. ತಾಲೂಕು ದಂಡಾಧಿಕಾರಿಗಳ .ಆದೇಶದ ಮೇರೆಗೆ ಸೇವೆಯನ್ನು ಸಲ್ಲಿಸುತ್ತೇವೆ ಡಿಪ್ಲೋಮಾ ವಿದ್ಯಾರ್ಥಿಗಳಿಗೆ ನನ್ನ ಅಳಿಲು ಸೇವೆ ಮತ್ತು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಜೀವನ ಚರಿತ್ರೆ ಮತ್ತು ಸವಿಧಾನದ ಅರಿವು ಮತ್ತು ರಸಪ್ರಶ್ನೆ ಸ್ಪರ್ಧೆ ಮಾಡಿಸುತ್ತಾ ಬಂದಿರುತ್ತೇನೆ ಅನೇಕ ವಿದ್ಯಾರ್ಥಿಗಳಿಗೆ ಪ್ರೆರೆಪಣೆ ನೀಡುವುದರ ಮೂಲಕ ಪ್ರವಾದಿ ಮಹಮ್ಮದ್ (ಸ್ವ.ರೂ ಸ್ವ ಲಿಂ) ಸಂದೇಶದಂತೆ ತಂದೆಯ ಬೆವರು. ಕುಟುಂಬದ ಆಸರೆ, ತಾಯಿಯ ಕಾಲು ಅಡಿಯಲ್ಲಿ ಸ್ವರ್ಗ ಇದೆ .ಎಂದು ಕಲಿಸಿದ ಮಹಾ ಗುರು. ನಾನು ಇಷ್ಟಪಡುವ ಪ್ರವಾದಿ ಮಹಮ್ಮದ್ (ಸ್ವ ರೂ ಸ್ವ ಲಿಂ). ತಂದೆ ತಾಯಿ ಗಳಿಗೆ ಗೌರವ, ದೇಶದ ರಕ್ಷಣೆ, ನೆಲ ಜಲದ ಮಹತ್ವವನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡುವ ಪ್ರಯತ್ನದ ಮಾತುಗಳನ್ನು ನುಡಿಯುತ್ತಾ ಮುಂದಿನ ದಿನಗಳಲ್ಲಿ ನನ್ನ ಹೆಜ್ಜೆ. ಐಎಎಸ್ ಐಪಿಎಸ್ ಕೋಚಿಂಗ್ ಸೆಂಟರ್ ತೆಗೆಯುವ ಮಹಾದಾಸೆ ಹಾಗೂ ವಿದ್ಯಾರ್ಥಿಗಳಿಗೆ ವಕೀಲರನ್ನಾಗಿ ಮಾಡುವ ದೊಡ್ಡ ಹಂಬಲ.ಸ್ವಾಮಿ ವಿವೇಕಾನಂದರವರು ಹೇಳಿದಂತೆ ಜಗತ್ತನ್ನು ಬೆಳಗುವ ಸೂರ್ಯವಾಗದಿದ್ದರೂ ನನ್ನ ಅಕ್ಕ ಪಕ್ಕದ ಸಮಾಜ ನನ್ನ ಮನೆಯಂತಿದ್ದು ಅದನ್ನು ಬೆಳಗುವ ಚಿಕ್ಕ ದೀಪವಾಗುವ ಪ್ರಯತ್ನ ಪಡುತ್ತಿದ್ದೇನೆ ಸಮಾಜಕ್ಕೆ ಅಳಿಲು ಸೇವೆಯನ್ನು ಸಲ್ಲಿಸುತ್ತಿದ್ದು ನನ್ನ ಉದ್ದೇಶ ಸಮಾಜ ಸೇವೆಯಿಂದಲೇ ಆತ್ಮ ತೃಪ್ತಿ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆ ಶಿಬಿರ ಮಾಡುವುದಕ್ಕೆ ಕಾರಣ
ಗಾಂಧೀಜಿ ಮದರ್ ತೆರೇಸಾ ರವರ ತತ್ವ ಆದರ್ಶ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಸಮಾಜ ಸೇವೆಯಲ್ಲಿ ಆತ್ಮತೃಪ್ತಿಪಡಲು ಪ್ರಯತ್ನಿಸುತ್ತಿದ್ದೇನೆಸ್ನೇಹಿತರ ಬಳಗ ಅಧ್ಯಕ್ಷರು ಬಿ.ಅಬ್ದುಲ್ ರಹಮಾನ್…

ವರದಿ, ಎಂ, ಬಸವರಾಜ್, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend