ಅಮ್ಮನಕೇರಿ:ಕೆರೆಗೆ ಬಾಗಿಣ ಅರ್ಪಿಸಿದ ಮುತ್ತೈದೆಯರು ಜನ ಪ್ರತಿನಿಧಿಗಳು…!!!

Listen to this article

ಅಮ್ಮನಕೇರಿ:ಕೆರೆಗೆ ಬಾಗಿಣ ಅರ್ಪಿಸಿದ ಮುತ್ತೈದೆಯರು ಜನ ಪ್ರತಿನಿಧಿಗಳು-ವಿಜಯನಗರ ಜಿಲ್ಲೆ ಕೂಡ್ಲಿಗಿ:ತಾಲೂಕಿನ ಕಕ್ಕುಪ್ಪಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ, ಅಮ್ಮನಕೇರಿ ಗ್ರಾಮದ ಕೆರೆ ಕೋಡಿ ಬಿದ್ದಿರುವ ಹಿನ್ನೆಲೆಯಲ್ಲಿ. ಗ್ರಾಮದ ಮುತ್ತೈದೆಯರು ಹಾಗೂ ಜನಪ್ರತಿನಿಧಿಗಳು ಕೆರೆಗೆ ಬಾಗೀನ ಅರ್ಪಿಸಿ ಗಂಗೆ ಪೂಜೆ ನೆರವೇರಿಸಿದ್ದಾರೆ. ಕಳೆದ ಮುವತ್ತೈದು ವರ್ಷಗಳಿಂದ ಕೆರೆ ತುಂಬಿ ಕೋಡಿ ಹರಿದಿದ್ದಿಲ್ಲ, ಈ ವರ್ಷದಲ್ಲಿ ಮಳೆ ಚೆನ್ನಾಗಿ ಬಂದಿರುವ ಹಿನ್ನಲೆಯಲ್ಲಿ. ಈ ಭಾರಿ ಸತತ ಸುರಿದ ಮಳೆಯಿಂದಾಗಿ ಕೆರೆ ತುಂಬಿ ಕೋಡಿ ಬಿದ್ದಿದ್ದು, ಗ್ರಾಮಸ್ಥರಲ್ಲಿ ಅತೀವ ಸಂತಸ ತಂದಿದ್ದು ರೈತರಲ್ಲಿ ಸಂಭ್ರಮ ಮನೆ ಮಾಡಿದೆ.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಹಾಗೂ ಹಿರಿಯ ಜಂಗಮರ ನೇತೃತ್ವದಲ್ಲಿ. ಗ್ರಾಮದ ಮುತ್ತೈದೆಯರು ಮಹಿಳೆಯರು, ಗ್ರಾಮಸ್ಥರು ಜನಪ್ರತಿನಿಧಿಗಳು. ಧಾರ್ಮಿಕ ನಿಯಮಾನುಸಾರ ಕೆರೆಗೆ ಬಾಗೀನ ಅರ್ಪಿಸಿದ್ದು, ಗಂಗೆ ಪೂಜೆ ನೆರವೇರಿಸಿ ಭಕ್ತಿ ಸಮರ್ಪಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಸಿದ್ದಯ್ಯ, ಮಡಿಕಿ ಚೌಡಪ್ಪ, ತಳವಾರ ಬಸಪ್ಪ. ಗ್ರಾಮ ಪಂಚಾಯ್ತಿ ಸದಸ್ಯರಾದ, ಶ್ರೀಮತಿ
ಎಸ್.ಸುಧಾ ಬಸವರಾಜ. ಶಿಕ್ಷಕರಾದ ಯರ್ರಿಬಸಪ್ಪ, ವೀರನಗೌಡ್ರು, ಚನ್ನಬಸವನಗೌಡ್ರು, ಹೆಚ್ಎಮ್.ಕೊಟ್ರೇಶ ಸ್ವಾಮಿ, ಬಣಕಾರ ಸಿದ್ದಪ್ಪ , ಗುರಿಕಾರ ಬಸವರಾಜ, ಕೋಡಿಹಳ್ಳಿ ಚನ್ನಬಸಪ್ಪ, ಸಿರಿಬಿ ಬಸವರಾಜ, ಕಂಪ್ಲಿ ಚನ್ನಬಸಪ್ಪ ಸೇರಿದಂತೆ. ಗ್ರಾಮದ ಮುತ್ತೈದೆಯರು, ಮಹಿಳಾ ಸಂಘಟನೆಗಳ ಪದಾಧಿಕಾರಿಗಳು. ಗ್ರಾಮದ ಹಿರಿಯರು ಹಾಗೂ ಗ್ರಾಮಸ್ಥರು ವಿವಿದ ಸಮುದಾಯಗಳ ಮುಖಂಡರು.
ಇನ್ನಿತರರು ಭಾಗವಿಸಿದ್ದರು…

ವರದಿ. ಎಂ, ಬಸವರಾಜ್, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend