ಜಾನಪದ ಕಲಾವಿದರನ್ನು ಎಲೆ ಮರಿಕಾಯಿಯಂತೆ ಉಳಿಸಿ ಬೆಳೆಸುವಲ್ಲಿ ಕನ್ನಡ ಜಾನಪದ ಪರಿಷತ್ತಿನ ಉದ್ದೇಶ…!!!

Listen to this article

ಎಲೆ ಮರಿಕಾಯಿಯಂತೆ ಜಾನಪದ ಕಲಾವಿದರನ್ನು ಉಳಿಸಿ ಬೆಳೆಸುವಲ್ಲಿ ಕನ್ನಡ ಜಾನಪದ ಪರಿಷತ್ತಿನ ಉದ್ದೇಶ:- ಶಿಕ್ಷಣಾಧಿಕಾರಿ ಶ್ರೀನಿವಾಸ್
ಬುಡಕಟ್ಟು ಹಾಗೂ ನಾಡಿನ ಜನಪದ ಕಲೆ ಸಂಸ್ಕೃತಿಯನ್ನು ಮತ್ತು ಎಲೆ ಮರಿ ಕಾಯಿಯಂತಿರುವ ಜಾನಪದ ಕಲಾವಿದರನ್ನು ಉಳಿಸಿ ಬೆಳೆಸಲು ಸ್ಥಾಪನೆಯಾದ ಸಂಸ್ಥೆಯೇ ಕನ್ನಡ ಜಾನಪದ ಪರಿಷತ್ತು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಚ್ ಶ್ರೀನಿವಾಸ್ ತಿಳಿಸಿದರು.
ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಭವನದಲ್ಲಿ ಕನ್ನಡ ಜಾನಪದ ಪರಿಷತ್ತಿನ ನೂತನ ಅಧ್ಯಕ್ಷರಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯದ ಎಲ್ಲಾ ಜಿಲ್ಲಾ ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಕಾಜಪ ಘಟಕಗಳನ್ನು ಸ್ಥಾಪಿಸಿ ಜಾನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡಬೇಕು ಕಲಾವಿದರಿಗೆ ಸರ್ಕಾರ ಮಹಾಶಾಸನ, ಹೆಚ್ಚಿಸಿ ಆರೋಗ್ಯ ವಿಮೆಯಂತ ರನ್ನ ಕಲ್ಪಿಸುವ ನಿಟ್ಟಿನಲ್ಲಿ ಕಲಾವಿದರಿಗೆ ಕಲೆಯನ್ನ ಮುಂದುವರೆಸಲು ಆಸಕ್ತಿ ಹೆಚ್ಚುವಂತೆ ಮಾಡುವುದು ಎಂದು ತಿಳಿಸಿದರು.
ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯದ ಡಾ. ಸುಮಿತ್ರಕ್ಕನವರು ಮಾತನಾಡುತ್ತಾ ಪಾಶ್ಚ್ಯಾತ್ಯ ಸಂಸ್ಕೃತಿಯ ಪ್ರಭಾವದಿಂದ ಭಾರತದ ಜಾನಪದ ಸಂಸ್ಕೃತಿ ವಿರೂಪ ಗೊಳ್ಳುತ್ತಿದೆ ವಿಶ್ವಕ್ಕೆ ಮಾದರಿಯಾದ ಜಾನಪದ ಸಂಸ್ಕೃತಿ ಉಳಿಸಿ ಬೆಳೆಸಬೇಕಾಗಿದೆ ಎಂದು ತಿಳಿಸಿದರು.
ಎಂ ಎಂ ಸರ್ಕಾರಿ ಪದವ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಅಶೋಕ್ ರವರು ಮಾತನಾಡುತ್ತಾ ಜಾನಪದ ಸಂಸ್ಕೃತಿ ಅತ್ಯಂತ ಶ್ರೀಮಂತ ಸಂಸ್ಕೃತಿ ಉದಾತ ಬದುಕು ಕಟ್ಟಿಕೊಡುವುದರಲ್ಲಿ ಜಾನಪದ ನಿಜಾರ್ಥ ಅಡಗಿದೆ ಸಂಸ್ಕೃತಿಯ ಮಹತ್ವವನ್ನು ಅರಿತುಕೊಳ್ಳುವುದು ಇಂದಿನ ಯುವ ಜನರ ಮೇಲೆ ನಿಂತಿದೆ ಎಂದು ನುಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎನ್ ಶಿವಮೂರ್ತಿ ಅವರು ಮಾತನಾಡುತ್ತಾ ತಲೆಮಾರಿನಿಂದ ತಲೆಮಾರಿಗೆ ಜಾನಪದ ಕಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಹಾಗೂ ಜನಪದ ಕಲೆ ಒಂದು ಜನಾಂಗದ ಕಲೆ ಎಲ್ಲಾ ಕಲೆಗಳ ತಾಯಿ ಬೇರು ಇದು ಗ್ರಾಮೀಣ ಭಾಗದ ಬುಡಕಟ್ಟು ಸಮುದಾಯದ ಜನರ ಜನಪದ ದಾಖಲೀಕರಣ ಮೂಲಕ ಬದುಕನ್ನ ಕಟ್ಟಿಕೊಡುವಲೂ ಮುಂದಿನ ಜನಾಂಗಕ್ಕೆ ಕೂಡಿಡುವುದು ಆಯಾ ಬುಡಕಟ್ಟುಗಳ ಸಮುದಾಯಗಳ ಮೂಲ ತಿಳಿಯಲು ಸಹಕಾರಿ ಜಾನಪದ ಕಲೆ ಮೂಲೆಗುಂಪಾದರೆ, ಮಾನವ ಜನಾಂಗವೇ ಮುಕಾದಂತೆ ತಿಳಿಸಿದರು.
ತಾಲೂಕ ಘಟಕದ ಅಧ್ಯಕ್ಷರಾದ ರಾ ಸು ತಿಮ್ಮಯ್ಯನವರು ಅವರ ಘಟಕದ ಪದಾಧಿಕಾರಿಗಳಿಗೆ ಕನ್ನಡ ಜಾನಪದ ಪರಿಷತ್ತಿನ ಡಾ.ಜನಪದ ಎಸ್ ಬಾಲಾಜಿ, ಹಾಗೂ ಜಿಲ್ಲಾಧ್ಯಕ್ಷರಾದ ಬಾ,ಮೈಲಾರಪ್ಪ ಪದಗ್ರಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ತೇಕಲವಟ್ಟಿ ಗ್ರಾಮದ ಹಿರಿಯ ಸಾಹಿತಿಗಳಾದ ಎಸ್,ಸಿ.ಅಜ್ಜಪ್ಪನವರು ತಾವೆ ಬರೆದ ಶ್ರೀ ಕ್ಷೇತ್ರ ಕೂಡ್ಲಹಳ್ಳಿ ಶ್ರೀ ಪಾತಲಿಂಗೇಶ್ವರ ಸ್ವಾಮಿ ಮಹಾತ್ಮೆ ಗದ್ಯಕಾವ್ಯ -ಯಕ್ಷಗಾನ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.
ಹಿರಿಯ ಜಾನಪದ ಕಲಾವಿದರನ್ನು ಕಲಾವಿದರಾದ ಗೌಡಿಯಲ್ಲಿ ಜಿ ಟಿ ರಾಘವೇಂದ್ರ, ರಾಮಗಿರಿ ಟಿ, ಮಲ್ಲೇಶಪ್ಪ, ಗೌಡಿಹಳ್ಳಿ ಎಸ್ ರಂಗಪ್ಪ ಇವರನ್ನು ಸನ್ಮಾನಿಸಲಾಯಿತು,
ಈ ಸಂದರ್ಭದಲ್ಲಿ ತರಳಬಾಳ ನೌಕರ ಸಂಘದ ಅಧ್ಯಕ್ಷರಾದ ಎ ದೇವರಾಜಯ್ಯ, ಬಿ ಆರ್ ಸಿ ಸುರೇಂದ್ರನಾಥ್ ,ಸರ್ಕಾರಿ ನೌಕರ ಸಂಘದ ಎ,ಜಯಪ್ಪ ಖಜಾಂಚಿ ಆರ್ ಅಣ್ಣಪ್ಪ, ಸೈಯದ್ ಆರೋನ್, ಸೋಮಶೇಖರ್, ಮುಖ್ಯ ಶಿಕ್ಷಕರಾದ ಏ, ಪರಮೇಶ್ವರಪ್ಪ. ಬಿ ಸುರೇಂದ್ರ ನಾಯಕ್, ಎನ್ ತಿಪ್ಪೇಸ್ವಾಮಿ, ಗುರುಸ್ವಾಮಿ,ಸಿ,ಡಿ ಗೀತಾ,ಟಿ ಮಲ್ಲೇಶಪ್ಪ,ಲತಾ. ರುದ್ರ ಸ್ವಾಮಿ.ಟಿ ಯು,ಜಯಪ್ಪ ಜೆ ಮಮತಾ, ಇಂದಿರಾ, ಜಿ ದೇವರಾಜ್. ಜಿ ಎನ್ ಹಾಲಸ್ವಾಮಿ. ಗೌಡಿಹಳ್ಳಿ ಕೃಷ್ಣಮೂರ್ತಿ, ಬಿ.ಜೆ ಹಳ್ಳಿ ವೆಂಕಟೇಶ್.ಅವಿನಹಟ್ಟಿ ಸುರೇಶ್ ಮುಂತಾದವರು ಉಪಸಿತರಿದ್ದರು..

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend