ಐಪಿಎಸ್ ಸೇವಾದಳ ವಿದ್ಯಾರ್ಥಿಗಳು ಸೇವೆ ಶ್ಲಾಘನೀಯ ಟ್ರಾಪಿಕ್ ಪಿಎಸ್ಐ ವೆಂಕಟೇಶ್ ಚವಾಣ್…!!!

Listen to this article

ಅಮರಶ್ರೀ ಆಲದ ಮರದ ಆವರಣವನ್ನು ಸ್ವಚ್ಚಗೊಳಿಸಿ ಸಸಿಗಳನ್ನು ನೆಟ್ಟ ಐಪಿಎಸ್ ಸೇವಾದಳ ವಿದ್ಯಾರ್ಥಿಗಳು ಸೇವೆ ಶ್ಲಾಘನೀಯ ಟ್ರಾಪಿಕ್ ಪಿಎಸ್ಐ ವೆಂಕಟೇಶ್ ಚವಾಣ್

ಸಿಂಧನೂರು:ಸರಕಾರಿ ಪ್ರೌಢ ಶಾಲೆ ಗುಂಜಳ್ಳಿಯ ಐಪಿಎಸ್ ಸೇವಾದಳ ತಂಡದ ವಿದ್ಯಾರ್ಥಿಗಳಿಂದ ಸಿಂಧನೂರು ನಗರದ ಪಿಡಬ್ಲ್ಯೂಡಿ ಕ್ಯಾಂಪಿನಲ್ಲಿರುವ ವನಸಿರಿ ಫೌಂಡೇಶನ್ ವತಿಯಿಂದ ಮರುಜೀವ ಪಡೆದ ಅಮರಶ್ರೀ ಆಲದ ಮರದ ಆವರಣವನ್ನು ಸ್ವಚ್ಚಗೊಳಿಸಿ, ಸಸಿಗಳನ್ನು ನೆಟ್ಟು ಪರಿಸರ ಜಾಗೃತಿ ಕಾರ್ಯಕ್ರಮ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಟ್ರಾಫಿಕ್ ಪಿ ಎಸ್ ಐ ವೆಂಕಟೇಶ್ ಚೌವ್ಹಾಣ್ ಅವರು ಮಾತನಾಡಿ,ಹಸಿರಿಕರಣ ಎಂದರೆ ಅಮರೇಗೌಡ ಮಲ್ಲಾಪುರ ಎನ್ನುವಷ್ಟರ ಮಟ್ಟಿಗೆ ನಮ್ಮ ಭಾಗದಲ್ಲಿ ಪರಿಸರ ಸೇವೆಯಲ್ಲಿರುವ ವನಸಿರಿ ಫೌಂಡೇಶನ್ ಕಾರ್ಯ ನಮ್ಮ ನಿಮಗೆಲ್ಲ ಮಾದರಿಯಾದದ್ದು, ಇದೇ ರೀತಿ ಸೇವಾಮನೋಭಾವ ರೂಢಿಸಿಕೊಂಡು ಐಪಿಎಸ್ ಸೇವಾದಳದ ಮೂಲಕ ಸಮಾಜಸೇವೆಯಲ್ಲಿ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಈ ಸಮಯದಲ್ಲಿ ಜೀವ ಸ್ಪಂದನ ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ಅವಿನಾಶ ದೇಶಪಾಂಡೆ ಮಾತನಾಡಿ, ಐಪಿಎಸ್ ತಂಡದ ವಿದ್ಯಾರ್ಥಿಗಳು ಬೆಳಿಗ್ಗೆಯಿಂದ ಪರಿಸರ ಜಾಗೃತಿ ಕಾರ್ಯಕ್ರಮದ ಮೂಲಕ ಸ್ವಚ್ಚತೆ ಮಾಡಿ, ಸಸಿ ನೆಡುವ ಕಾರ್ಯ ಮಾಡಿ ಇತರರಿಗೆ ಮಾದರಿ ಎನ್ನುವಂತೆ ಸೇವೆ ಸಲ್ಲಿಸಿದ್ದಾರೆ ಎಂದರು.

ಐಪಿಎಸ್ ಸೇವಾದಳ ಸಂಚಾಲಕ ಬಸವರಾಜ ಶಿಕ್ಷಕರು ಮಾತನಾಡಿದ ನಮ್ಮ ಐಪಿಎಸ್ ತಂಡದ ಇಂದು ಹಸಿರು ಹಬ್ಬದ ಹೆಸರಲ್ಲಿ ಸೇವೆ ಸಲ್ಲಿಸಿದೆ. ಇನ್ನಷ್ಟು ವಿದ್ಯಾರ್ಥಿಗಳು ನಮ್ಮ ತಂಡದ ಸೇರಲು ಉತ್ಸಾಹದಲ್ಲಿರುವುದು ನಮ್ಮ ಸೇವೆಗೆ ಶಕ್ತಿ ನೀಡಿದಂತಾಗಿದೆ. ನಮ್ಮ ಇಂದಿನ ಹಸಿರು ಹಬ್ಬದ ಸೇವಾ ಕಾರ್ಯಕ್ಕೆ ಅವಕಾಶ ಮಾಡಿಕೊಟ್ಟ ವನಸಿರಿ ಫೌಂಡೇಶನ್ ಗೆ ಧನ್ಯವಾದಗಳು ಎಂದರು.

ನಂತರ ಸೇವಾನಿರತ ಐಪಿಎಸ್ ತಂಡದ ವಿದ್ಯಾರ್ಥಿಗಳಿಗೆ ವನಸಿರಿ ಫೌಂಡೇಶನ್ ವತಿಯಿಂದ ಪರಿಸರ ರಕ್ಷಕ ಪ್ರಮಾಣ ಪತ್ರ ವಿತರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಐಪಿಎಸ್ ಸೇವಾದಳ ತಂಡದ ಸಂಚಾಲಕರಾದ ಬಸವರಾಜ ಶಿಕ್ಷಕರು, ಜೀವ ಸ್ಪಂದನ ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ಅವಿನಾಶ ದೇಶಪಾಂಡೆ, ಕಾರುಣ್ಯ ವೃದ್ಧಾಶ್ರಮದ ಆಡಳಿತಾಧಿಕಾರಿ ಚನ್ನಬಸವ ಸ್ವಾಮಿ ಹಿರೇಮಠ, ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪುರ, ವನಸಿರಿ ರಂಜಾನ್ ಸಾಬ್, ಸದಸ್ಯರಾದ ಮುದಿಯಪ್ಪ ಹೊಸಳ್ಳಿ ಕ್ಯಾಂಪಿ ಸೇರಿದಂತೆ ವಿದ್ಯಾರ್ಥಿಗಳಿದ್ದರು…

ವರದಿ. ಲಿಂಗರಾಜ್, ತಡಕಲ್, ಮಾನವಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend