ಧಾರವಾಡ| 24 ಗಂಟೆಯಾದ್ರೂ ಬೈಪಾಸ್ ರಸ್ತೆಯಲ್ಲಿ ಕಡಿಮೆಯಾಗದ ನೀರಿನ ಹರಿವು- ಪ್ರಯಾಣಿಕರ ಪರದಾಟ…!!!

Listen to this article

ಧಾರವಾಡ| 24 ಗಂಟೆಯಾದ್ರೂ ಬೈಪಾಸ್ ರಸ್ತೆಯಲ್ಲಿ ಕಡಿಮೆಯಾಗದ ನೀರಿನ ಹರಿವು- ಪ್ರಯಾಣಿಕರ ಪರದಾಟ

ಧಾರವಾಡ: ಧಾರವಾಡದಲ್ಲಿ,ಕಳೆದ ರಾತ್ರಿ ಸುರಿದ ಭಾರೀ ಮಳೆಯಿಂದ ಹಲವು ಅವಾಂತರ ಸೃಷ್ಟಿಯಾಗಿದ್ದು, ಹುಬ್ಬಳ್ಳಿ, ಧಾರವಾಡ ಬೈಪಾಸ್ ರಸ್ತೆಯಲ್ಲಿ 24 ಗಂಟೆಯಾದರೂ ನೀರಿನ ಪ್ರಮಾಣ ಕಡಿಮೆಯಾಗಲಿಲ್ಲ.
ರಸ್ತೆ ಮೇಲೆ ನೀರು ಹರಿದು ಬಂದ ಹಿನ್ನೆಲೆ ವಾಹನ ಸವಾರರು ಪರದಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ 4 ಹುಬ್ಬಳ್ಳಿ-ಧಾರವಾಡ ಯರಿಕೊಪ್ಪ ಗ್ರಾಮದ ಬಳಿಯ ಮನಸೂರ ಹಳ್ಳಕ್ಕೆ ಮಳೆಯಿಂದಾಗಿ ದೊಡ್ಡ ಪ್ರಮಾಣದಲ್ಲಿ ನೀರು ಬಂದಿದೆ.
ರಸ್ತೆ ಮೇಲೆಯೇ ನೀರು ಹರಿಯುತ್ತಿರುವ ಹಿನ್ನೆಲೆ, ರಾತ್ರಿ ಎಲ್ಲಾ ಬೈಪಾಸ್ ರಸ್ತೆ ಸ್ಥಗಿತಗೊಂಡಿತ್ತು. ಬೆಳಿಗ್ಗೆ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಲಾರಿಗಳು ಮಾತ್ರ ದಾಟಲು ಅವಕಾಶ ನೀಡಲಾಗಿದೆ. ಮತ್ತೆ ಮಳೆಯಾದರೆ ರಸ್ತೆ ಕಡಿತ ಆಗುವ ಸಾಧ್ಯತೆ ಇದೆ. ನಗರದ ಬಹುತೇಕ ನೀರು ಬೈಪಾಸ್ ರಸ್ತೆಯಿಂದ ಮನಸೂರ ಹಳ್ಳಕ್ಕೆ ಬರುತ್ತಿರುವುದರಿಂದ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ…

ವರದಿ. ಮಹಾಲಿಂಗ ಗಗ್ಗರಿ, ಬೆಳಗಾವಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend