ಕುಮತಿ ಗ್ರಾಮದ ದುಃಖದಲ್ಲಿರುವ ಕುಟುಂಬಕ್ಕೆ ಸಾಂತ್ವನ ತಿಳಿಸಿ, ಪರಿಹಾರ ನೀಡಿದ ವಸತಿ ಸಚಿವ -ಬಿ.ಝಡ್. ಜಮೀರ್ ಅಹಮದ್ ಖಾನ್…!!!

Listen to this article

ಕುಮತಿ ಗ್ರಾಮದ ದುಃಖದಲ್ಲಿರುವ ಕುಟುಂಬಕ್ಕೆ ಸಾಂತ್ವನ ತಿಳಿಸಿ, ಪರಿಹಾರ ನೀಡಿದ ವಸತಿ ಸಚಿವ -ಬಿ.ಝಡ್. ಜಮೀರ್ ಅಹಮದ್ ಖಾನ್…

ಕೂಡ್ಲಿಗಿ ಕ್ಷೇತ್ರದ ಕುಮತಿ ಗ್ರಾಮದ ಹರಿಜನ ಜಯಣ್ಣನವರ ಪುತ್ರರಾದ ಗುರು (13), ವಿನಯ್ ಕುಮಾರ್ (11) ಹಾಗೂ ಸೋಮಣ್ಣನವರ ಮಗನಾದ ಸಾಗರ್ (14) ಅವರು ಜೆನಿಗಿ ಹಳ್ಳದಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಸುದ್ದಿ ತಿಳಿದ ನಂತರ ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್.‌ಟಿ. ಅವರು ದಿ; 08-10-2024 ರ ಸಂಜೆ 7.30 ಕ್ಕೆ ಆ ಗ್ರಾಮದ ಕುಟುಂಬಕ್ಕೆ ಭೇಟಿ ನೀಡಿ ಮೃತ ದೇಹಗಳನ್ನು ಪರಿಶೀಲಿಸಿ ವೈದ್ಯರನ್ನು ಕರೆಸಿ ಮರಣೋತ್ತರ ವರದಿ ಸಿದ್ದಪಡಿಸಲು ಸೂಚಿಸಿದರು. ಹಾಗೆಯೇ ಕುಟುಂಬಕ್ಕೆ ಸಾಂತ್ವನ ಹೇಳಿ ವೈಯಕ್ತಿಕವಾಗಿ ನೆರವು ನೀಡಿ ಧೈರ್ಯ ತುಂಬಿದರು. ಶಾಸಕರು, ಆ ದಿನ ಕ್ಷೇತ್ರದ ಕೆರೆಗಳಿಗೆ ಬಾಗಿನ ಅರ್ಪಿಸಿದ ಸಂದರ್ಭದಲ್ಲಿ ಮಕ್ಕಳು ಮತ್ತು ಜನರ ಕುರಿತು ಜಾಗ್ರತೆ ವಹಿಸಬೇಕು ಅನ್ನುವಷ್ಟರಲ್ಲಿ ಇಂತಹ ದುರ್ಗಘನೆ ನಡೆದಿರುವುದು ನೋವಿನ ಸಂಗತಿ ಎಂದರು.

ಆ ದಿನವೇ, ವಿಜಯ ನಗರ ಜಿಲ್ಲೆಯ ಉಸ್ತುವಾರಿ ಸಚಿವರಾದ ಸನ್ಮಾನ್ಯರಾದ ಬಿ. ಝಡ್. ಜಮೀರ್ ಅಹಮದ್ ಖಾನ್ ಅವರನ್ನು ತಡರಾತ್ರಿಯಲ್ಲಿ ಭೇಟಿ ಮಾಡಿ ದುಃಖಕರ ಸಂಗತಿಯನ್ನು ಶಾಸಕರು ತಿಳಿಸಿದ ತಕ್ಷಣ ಸಚಿವರು ನೊಂದುಕೊಂಡರು. ನಾವು ದುಃಖದಲ್ಲಿರುವ ಕುಟುಂಬವನ್ನು ಭೇಟಿ ಮಾಡೋಣ ಎಂದೂ ಸಚಿವರು ಹೇಳಿದರು.

ಹಾಗೆಯೇ ನಿನ್ನೇ ದಿನ ದಿ; 09-10-2024 ರಂದು ಬೆಂಗಳೂರಿನ ವಿಧಾನ ಸೌಧದಲ್ಲಿ *ಕರ್ನಾಟಕ ಘನ ಸರ್ಕಾರದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ನವರನ್ನು ಮಾನ್ಯ ಶಾಸಕರು ಭೇಟಿ ಮಾಡಿ ಘಟನೆ ಕುರಿತು ವಿವರಿಸಿ ಸರ್ಕಾರದಿಂದ ಬರುವ ಪರಿಹಾರಕ್ಕಾಗಿ ಮನವಿ ಮಾಡಿಕೊಂಡರು.

ಸನ್ಮಾನ್ಯ ಮುಖ್ಯ ಮಂತ್ರಿಗಳ ಆದೇಶದಂತೆ ಮಾನ್ಯ ಶಾಸಕರು, ಜಿಲ್ಲಾ, ತಾಲೂಕು ವಿವಿಧ ಇಲಾಖೆಯ ಅಧಿಕಾರಿಗಳು, ಕೂಡ್ಲಿಗಿ ಪಟ್ಟಣ ಪಂಚಾಯತಿ ಅಧ್ಯಕ್ಷರು, ಸರ್ವ ಸದಸ್ಯರು, ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು, ವಿವಿಧ ಸಂಘಟನೆಯಕಾರರ ಜೊತೆಗೆ ಸೇರಿ ದಿ; 10-10-2024 ರಂದು ವಿಜಯ ನಗರ ಜಿಲ್ಲೆಯ ಉಸ್ತುವಾರಿ ಹಾಗೂ ವಸತಿ ಸಚಿವರಾದ ಸನ್ಮಾನ್ಯ ಬಿ.ಝಡ್. ಜಮೀರ್ ಅಹಮದ್ ಖಾನ್ ಅವರು ದುಃಖದಲ್ಲಿರುವ ಕುಟುಂಬವನ್ನು ಭೇಟಿ ಮಾಡಿ ವೈಯಕ್ತಿಕವಾಗಿ ಧನ ಸಹಾಯ ಮಾಡಿ ಧೈರ್ಯ ತುಂಬಿದರು. ಹಾಗೆಯೇ ಸರ್ಕಾರದಿಂದ ಬರುವ ವಸತಿ ವ್ಯವಸ್ಥೆಯನ್ನು ಒದಗಿಸಿಕೊಡುವುದಾಗಿ ತಿಳಿಸಿದರು*. ‌

ಒಟ್ಟಿನಲ್ಲಿ, *ಈ ದಿನ ದುಃಖದಲ್ಲಿರುವ ಕುಟುಂಬಕ್ಕೆ ಸಾಂತ್ವನ ತುಂಬುವ ಜೊತೆಗೆ ವಲಸೆ ಕ್ರಾಸ್ ನಲ್ಲಿ ಕ್ಷೇತ್ರದ ವಿವಿಧ ಭಾಗಗಳಲ್ಲಿನ ತೊಂದರೆಯಲ್ಲಿರುವ, ನೋವಿನಲ್ಲಿರುವ, ಕಷ್ಟದಲ್ಲಿರುವ ಹಾಗೂ ಅಂಗವಿಕಲರಿಗೆ ಶಾಸಕರು ಸಚಿವರ ಮೂಲಕ ಧನಸಹಾಯ ಮಾಡಿಸಿ ಮಾನವೀಯತೆ ಮೆರೆದರು.

ಈ ಸಂದರ್ಭದಲ್ಲಿ ವಿಜಯ ನಗರ ಜಿಲ್ಲಾಧಿಕಾರಿಗಳಾದ ಎಂ. ಎಸ್. ದಿವಾಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿಬಾಬು, ತಹಶೀಲ್ದಾರರಾದ ಎಂ.ರೇಣುಕಾ, ಉಪ ತಹಶೀಲ್ದಾರರಾದ ನೇತ್ರಾವತಿ, ಕೊಟ್ಟೂರಿನ ಸಬ್ ಇನ್ಸ್ ಪೆಕ್ಟರ್ ಗೀತಾಂಜಲಿ ಸಿಂಧೆ ಹಾಗೂ ವೃತ್ತ ನಿರೀಕ್ಷಕ ಟಿ.ವೆಂಕಟಸ್ವಾಮಿ, ಕೂಡ್ಲಿಗಿ ಡಿ.ವೈ. ಎಸ್.ಪಿ.ಮಹೇಶಪ್ಪ ಮಲ್ಲಾಪುರ, ಖಾನಹೊಸಹಳ್ಳಿ ಸಬ್ ಇನ್ಸ್ ಪೆಕ್ಟರ್ ಸಿದ್ಧರಾಮ ಬಿದರಾಣಿ, ಕೂಡ್ಲಿಗಿ ಪ. ಪಂ. ಅಧ್ಯಕ್ಷರಾದ ಕಾವಲ್ಲಿ ಶಿವಪ್ಪ ನಾಯಕ, ಪ. ಪಂ.ಉಪ ಅಧ್ಯಕ್ಷರಾದ ಲೀಲಾವತಿ ಕೆ. ಪ್ರಭಾಕರ್, ಸರ್ವ ಸದಸ್ಯರು,
ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಎಂ. ಗುರುಸಿದ್ಧನ ಗೌಡ, ಮಾಜಿ.‌ ಜಿ.‌ ಪಂ. ಸದಸ್ಯರಾದ ನರಸಿಂಹಗಿರಿ ಎಸ್. ವೆಂಕಟೇಶ, ಕಾನಾಮಡುಗು ಶಶಿಧರಸ್ವಾಮಿ, ಜುಮ್ಮೋಬನಹಳ್ಳಿ ಗ್ರಾ. ಅ.‌ ಸಾಕಮ್ಮ ಓಬಣ್ಣ, ಹೂಡೇಂ ಗ್ರಾ. ಪಂ.‌ ಅ.‌ ರಾಮಚಂದ್ರ, ಪೂಜಾರಹಳ್ಳಿ ಗ್ರಾ. ಪಂ‌. ಅ. ವೆಂಕಟೇಶ ನಾಯಕ್, ಜಿ. ಓಬಣ್ಣ, ಬೋಸಣ್ಣ, ಬುಡ್ಡಾರೆಡ್ಡಿ, ಪಾಪನಾಯಕ, ಹೊನ್ನೂರಪ್ಪ, ಸೂರ್ಯಪ್ರಕಾಶ, ಮಹಾಂತೇಶ, ರಾಘು, ದಾಸಣ್ಣ, ಇ.ಓ.ಬಸಣ್ಣ, ಬೋಸೆ ಪಾಪಣ್ಣ, ಸುರೇಶ, ಓಬಣ್ಣ, ದಲಿತ ಮುಖಂಡರಾದ ಗಂಗಾಧರ, ದುರಗಪ್ಪ, ದುರಪ್ಪ, ಊರಿನ ಹಿರಿಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು…

ವರದಿ. ಎಂ. ಬಸವರಾಜ್, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend