ಸನ್ ರೈಸ್ ಕಾಲೇಜ್ ನಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನ…!!!

Listen to this article

ಸನ್ ರೈಸ್ ಕಾಲೇಜ್ ನಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನ

. ಸಿಂಧನೂರು 10:- ತಾಲೂಕ ಕಾನೂನು ಸೇವಾ ಸಮಿತಿ ಸಿಂಧನೂರು, ತಾಲೂಕು ಆರೋಗ್ಯ ಇಲಾಖೆ, ಸನ್ ರೈಸ್ ಗ್ರೂಪ್ ಆಫ್ ಇನ್ಸಿಟ್ಯೂಶನ್ಸ ಡಿ-ಫಾಮರ್ಸಿ, ನರ್ಸಿಂಗ್, ಪ್ಯಾರಾಮೆಡಿಕಲ್‌ ಕಾಲೇಜು ಸಿಂಧನೂರು. ತಾಲೂಕು ನ್ಯಾಯವಾದಿಗಳ ಸಂಘ ಸಿಂಧನೂರು.
ಇವರ ಸಂಯುಕ್ತಾಶ್ರಯದಲ್ಲಿ ”ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಹಾಗೂ ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆಯ, ಹಾಗೂ ಬಾಲ್ಯ ವಿವಾಹ ಮತ್ತು ಬಾಲ್ಯ ವಿವಾಹ ಮುಕ್ತ ಕನಾರ್ಟಕ ಅಭಿಯಾನ ಬಗ್ಗೆ ”
“ಕಾನೂನು ಅರಿವು ನೆರವು ಕಾರ್ಯಕ್ರಮ” ವನ್ನು ಶ್ರೀ ಅಚ್ಚಪ್ಪ ದೊಡ್ಡ ಬಸವರಾಜ್ ಅಪರ ಸಿವಿಲ್ ನ್ಯಾಯಾಧೀಶರು ಜಿ.ಎಂ.ಎಫ್‌.ಸಿ ಸಿಂಧನೂರ ಹಾಗೂ ಅಥಿತಿಗಳು ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟನೆ ಮಾಡಿದರು.

ನಂತರ ಆಚಪ್ಪ ದೊಡ್ಡಬಸವರಾಜ ಅಪಾರ ಸಿವಿಲ್ ನ್ಯಾಯಾಧೀಶರು, ಮತ್ತು ಸದಸ್ಯ ಕಾರ್ಯದರ್ಶಿಗಳು ತಾಲೂಕು ಕಾನೂನು ಸೇವಾ ಸಮಿತಿ,ಸಿಂಧನೂರು ಇವರು ಮಾತನಾಡಿ ಸಮಾಜದ ಸಮಸ್ಯೆಗಳನ್ನು ಎದುರಿಸುವಲ್ಲಿ ಮಾನಸಿಕ ಆರೋಗ್ಯ ಮಹತ್ವವನ್ನು ಪಡೆದುಕೊಳ್ಳುತ್ತದೆ ಜೀವನದ ಏಳು ಬೀಳುಗಳಲ್ಲಿ ಕುಗ್ಗದೆ ಖಿನ್ನತೆಗೆ ಒಳಗಾಗದೆ ಜೀವಿಸುವ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕೆಂದು ಕರೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶರಣಬಸವ ಉಮಲುಟಿ ವಕೀಲರು
ಖಾಜಿ ಮಲ್ಲಿಕ್ ವಕೀಲರು,
. ಸನ್ ರೈಸ್ ಸಂಸ್ಥೆಯ ಕಾರ್ಯದರ್ಶಿಯಾದ ಇರ್ಷಾದ್ ಆಸಿಫ್, ಪ್ರಾಚಾರ್ಯರಾದ ಲಾಜರ ಸಿರಿಲ್,ವಾಸೀಮ್ ಹುಸೇನ,ಚಕ್ರವರ್ತಿ, ಡಿ,
ಕಾರ್ಯಕ್ರಮದ ಉಪನ್ಯಾಸಕರಾಗಿ ಆಗಮಿಸಿದ ಸನ್ಮಾನ್ಯ ಶ್ರೀಮತಿ ಗೀತಾ ಹಿರೇಮಠ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು ಸಿಂಧನೂರು …ಸನ್ ರೈಸ್ ಸಂಸ್ಥೆಯ ಉಪನ್ಯಾಸಕರಾದ ಬಸವಲಿಂಗ ಡಿ ,ಅಶುಪಾಷಾ ,ರಾಜೇಶ್, ಭಾಗ್ಯಶ್ರೀ, ಶೋಭಾ, ಸಂತೋಷಿ, ಸಾಗರ್, ಯಾಸೀನ್, ನಿರ್ಮಲ, ಅಖಿಲಾ, ಲಿಸಿ ಜಾನ್, ಮನೋಹರ್ ಬಡಿಗೇರ್ ಮೈಲಾಪುರ್, ಸೈಯದ್ ಮೂಸಾ ,ಪುಟ್ಟರಾಜು, ಮನೋಹರಿ, ಶರಣಮ್ಮ, ನಾಗರತ್ನ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು…

ವರದಿ. ಲಿಂಗರಾಜು ತಡಕಲ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend