ಒಪೆಕ್ ಹಾಗೂ ರಿಮ್ಸ್ ಆಸ್ಪತ್ರೆಗಳ ಆವರಣದಲ್ಲಿ ವೃಕ್ಷ ಸಂಕುಲಕ್ಕೆ ಕೊಡಲಿ ಪೆಟ್ಟು…
ರಾಯಚೂರು,
ನಗರದ ರಿಮ್ಸ್ ಹಾಗೂ ಒಪೇಕ್ ಆಸ್ಪತ್ರೆಗಳ ಆವರಣದಲ್ಲಿ ಬೃಹತ್ ಮರಗಳನ್ನು ಅರಣ್ಯ ಇಲಾಖೆಯ ಪರವಾನಿಗೆ ಪಡೆಯದೆ ಆಸ್ಪತ್ರೆಯ ಆಡಳಿತ ವರ್ಗವು ಕಡಿದು ಮಾರಾಟ ಮಾಡಿದೆ ಎಂಬ ಆರೋಪವು ಕೇಳಿ ಬರುತ್ತಿದೆ.
ದಿ.8.12.2023 ರಿಂದ 2024 ಸೆಪ್ಟೆಂಬರ್ ವರೆಗೆ ರಿಮ್ಸ್ ಹಾಗೂ ಒಪೆಕ್ ಆಸ್ಪತ್ರೆಗಳ ಆವರಣದಲ್ಲಿ ಬೆಳೆದು ನಿಂತಿದ್ದ ಹಸಿರು ಮರಗಳನ್ನು ಕಡಿದು ಹಾಕಿದ್ದಾರೆ ಇದಕ್ಕೆ ಸಂಬಂಧಿಸಿದಂತೆ ದಿ.1.7.24 ರಂದು ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆ ಹಾಗೂ ಅರಣ್ಯ ಇಲಾಖೆಗೆ ದೂರು ನೀಡಿದ್ದರು ಇನ್ನುವರೆಗೂ ಯಾವುದೇ ಕ್ರಮ ತೆಗೆದುಕೊಂಡಿರುವುದಿಲ್ಲ.
ನಂತರ 26.9.2024 ರಂದು ಪುನಃ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಗೆ ದೂರು ನೀಡಿ ಕರ್ನಾಟಕ ಅರಣ್ಯ ಕಾಯ್ದೆ ಕಲಂ ನಂಬರ್ 3 1960. ಕಲಂ ನಂಬರ್ 51959 ಪ್ರಾಣಿ ಸಂರಕ್ಷಣೆ ನಾಶವಾಗಿರುವ ಹಸಿರು ಮರಗಳು ಮತ್ತು ವನ್ಯ ಪ್ರಾಣಿಗಳಿಗೆ ನ್ಯಾಯ ಒದಗಿಸಬೇಕೆಂದು ಹಾಗೂ ರಿಮ್ಸ್ ಡೀನ ಡಾ. ರಮೇಶ್ ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ವೆಂಕಟೇಶ್ವರಲು ಒತ್ತಾಯಿಸಿದ್ದಾರೆ ಈ ವಿಷಯಕ್ಕೆ ಸಂಬಂಧಿಸಿದಂತೆ ಅರಣ್ಯ ಸಚಿವರ ಗಮನಕ್ಕೂ ತಂದಿದ್ದಾರೆ…
ವರದಿ. ನಾಗರಾಜ್, ವಿ, ರಾಯಚೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030