ಪೂಜಾರಹಳ್ಳಿ:ಬೀದಿ ನಾಯಿಗಳ ದಾಳಿಗೆ ಆರು ಕುರಿಗಳು ಬಲಿ, ಕ್ರಮ ಜರುಗಿಸದ ಗ್ರಾಪಂಗೆ ಗ್ರಾಮಸ್ಥರಿಂದ ಛೀ..ಮಾರಿ…!!!

Listen to this article

ಪೂಜಾರಹಳ್ಳಿ:ಬೀದಿ ನಾಯಿಗಳ ದಾಳಿಗೆ ಆರು ಕುರಿಗಳು ಬಲಿ, ಕ್ರಮ ಜರುಗಿಸದ ಗ್ರಾಪಂಗೆ ಗ್ರಾಮಸ್ಥರಿಂದ ಛೀ..ಮಾರಿ-ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಪೂಜಾರಹಳ್ಳಿ ಗ್ರಾಮದಲ್ಲಿ, ಬೀದಿ ಬಿಡಾಡಿ ನಾಯಿಗಳ ಹಾವಳಿ ಮಿತಿ ಮೀರಿದೆ. ಸಂಬಂಧಿಸಿದಂತೆ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು, ಅಗತ್ಯ ಕ್ರಮ ಜರುಗಿಸುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಕ್ಟೋಬರ್ 8ರಂದು ರಾತ್ರಿ ಬೀದಿ ಬಿಡಾಡಿ ನಾಯಿಗಳ ದಾಳಿಗೆ, ಗ್ರಾಮದ ನಾಗರಾಜ ಎಂಬುವರಿಗೆ ಸೇರಿದ ಆರು ಕುರಿಗಳು ಸಾವನ್ನಪ್ಪಿವೆ ಎಂದು ಗ್ರಾಮದ ಹಿರಿಯರು ದೂರಿದ್ದಾರೆ.
ಮನೆಯಂಗಳದಲ್ಲಿ ಕೊಟ್ಟಗಿಯಲ್ಲಿ ಕಣದಲ್ಲಿ ಹಾಗೂ ದೊಡ್ಡಿಯಲ್ಲಿ ಕಟ್ಟಿರುವ ಕುರಿಗಳನ್ನು, ದನ ಕರುಗಳನ್ನು ಬೀದಿ ಬಿಡಾಡಿ ನಾಯಿಗಳು ಕಚ್ಚಿ ತಿಂದೆವೆ. ಸಾಕಷ್ಟು ದನ ಕರು ಕುರಿಗಳ ಮೇಲೆ ಎರಗಿ, ಮಾರಣಾಂತಿ ದಾಳಿ ನಡೆಸುತ್ತಿವೆ. ಕೆಲವೊಮ್ಮೆ ಮಕ್ಕಳ ಮೇಲೆ ದಾಳಿ ನಡೆಸಲೂ ಬಹುದಾಗಿದೆ, ಈ ಕಾರಣಕ್ಕೆ ಗ್ರಾಮಸ್ಥರು ನಿತ್ಯ ಆತಂಕದಿಂದ ಬದುಕುವ ದುಸ್ಥಿತಿ ಎದುರಾಗಿದೆ ಎಂದು ಗ್ರಾಮದ ಹಿರಿಯರು ಹೇಳಿಕೆ ಕೊಟ್ಟಿದ್ದಾರೆ.
ಹಲವು ತಿಂಗಳುಗಳಿಂದ ಗ್ರಾಮದಲ್ಲಿ ಬೀದಿ ಬಿಡಾಡಿ ನಾಯಿಗಳ ಹಾವಳಿ ಮಿತಿಮೀರಿದ್ದು, ಸಂಬಂಧಿಸಿದಂತೆ ಸಾಕಷ್ಟು ಬಾರಿ ಗ್ರಾಮ ಪಂಚಾಯ್ತಿ ಅಧಿಕಾರಿಗೆ ಕ್ರಮಕ್ಕಾಗಿ ಒತ್ತಾಯಿಸಲಾಗಿದೆ. ಸಂಬಂಧಿಸಿದಂತೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಶೀಘ್ರವೇ ಅಗತ್ಯ ಕ್ರಮ ಜರುಗಿಸಬೇಕಿದೆ, ನಿರ್ಲಕ್ಷ್ಯ ತೋರಿದ್ದಲ್ಲಿ ಮುಂದಿನ ದಿನಗಳಲ್ಲಿ ಜರುಗಬಹುದಾದ ಅನಾಹುತಗಳಿಗೆ ಅವರೇ ನೇರ ಹೊಣೆ ಹೊರಬೇಕಿದೆ ಎಂದು ಅವರು ಎಚ್ಚರಿಸಿದ್ದಾರೆ. ಬೀದಿ ಬಿಡಾಡಿ ನಾಯಿಗಳ ಹಾವಳಿಗೆ ಸತ್ತ ಕುರಿಗಳಿಂದಾಗಿ ನಷ್ಟವಾಗಿದೆ, ಗ್ರಾಪಂ ನಾಗರಾಜರವರಿಗೆ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಈ ಮೂಲಕ ಆಗ್ರಹಿಸಿದ್ದಾರೆ. ಮತ್ತು ಈ ವರೆಗೆ ಗ್ರಾಮದಲ್ಲಿ ಹಾಗೂ ಗ್ರಾ ಪಂ ವ್ಯಾಪ್ತಿಯಲ್ಲಿ, ಇಲ್ಲಿಯವರೆಗೆ ಜರುಗಿರುವ ಹಾಗೂ ಮುಂದೆ ಜರುಗುವ. ಇಂತಹ ಘಟನೆಗಳಿಗೆ ಅಧಿಕಾರಿಯೇ ನೇರ ಹೊಣೆ ಹೊರಬೇಕಿದೆ, ನಷ್ಟ ಅನುಭವಿಸಿದವರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ…

ವರದಿ…ವಿ.ಜಿ.ವೃಷಭೇಂದ್ರ ಕೂಡ್ಲಿಗಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend