ರಾಜ್ಯ ಮಟ್ಟದ ಉತ್ಸವದಲ್ಲಿ ರಾಯಚೂರು ಜಿಲ್ಲೆಯ ವಿದ್ಯಾರ್ಥಿಗಳ ಉತ್ತಮ ಪ್ರದರ್ಶನ…!!!

Listen to this article

ರಾಜ್ಯ ಮಟ್ಟದ ಉತ್ಸವದಲ್ಲಿ ರಾಯಚೂರು ಜಿಲ್ಲೆಯ ವಿದ್ಯಾರ್ಥಿಗಳ ಉತ್ತಮ ಪ್ರದರ್ಶನ

ಚಿಕ್ಕಮಗಳೂರಿನಲ್ಲಿ ನಡೆದ 44ನೇ ರಾಜ್ಯಮಟ್ಟದ ಕಬ್ ಮತ್ತು ಬುಲ್ ಬುಲ್ ಉತ್ಸವ ಅಕ್ಟೋಬರ್ 5 ರಿಂದ 9 ರ 2024 ರ ವರೆಗೆ ಜರುಗಿತು .ಬಿ.ಜಿ.ಎಸ್. ಮಂಜುನಾಥೇಶ್ವರ ಶಾಲಾ ಆವರಣದಲ್ಲಿ ಹೌಸಿಂಗ್ ಬೋರ್ಡ್ ಚಿಕ್ಕಮಗಳೂರು ನಲ್ಲಿ ಸಮಾರೋಪ ಸಮಾರಂಭ ನಡೆಯಿತು. ಸಮಾರಂಭದಲ್ಲಿ ಕಬ್ ಮತ್ತು ಬುಲ್ ಬುಲ್ ಉತ್ಸವದಲ್ಲಿ ಕ್ರಿಯಾಶೀಲತೆಯಿಂದ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದ ಜಿಲ್ಲೆಗಳಿಗೆ ಸ್ಮರಣಿಕೆ ಹಾಗೂ ಪ್ರಮಾಣಪತ್ರಗಳನ್ನು ನೀಡಲಾಯಿತು. ರಾಯಚೂರು ಜಿಲ್ಲೆಯ ವಿದ್ಯಾರ್ಥಿಗಳ ಉತ್ತಮ ಪ್ರದರ್ಶನ ಹಾಗೂ ಕ್ರಿಯಾಶೀಲತೆಯ ಚಟುವಟಿಕೆಗಳಿಗೆ ಜಿಲ್ಲಾ ಸಂಸ್ಥೆಗೆ ಸ್ಮರಣಿಕೆ ಹಾಗೂ ಪ್ರಮಾಣ ಪತ್ರಗಳನ್ನು ನೀಡಲಾಯಿತು.

ಎಚ್ .ಡಿ. ತಮ್ಮಯ್ಯ ಶಾಸಕರು ವಿಧಾನಸಭಾ ಕ್ಷೇತ್ರ ಚಿಕ್ಕಮಗಳೂರು
ಅವರು ಸ್ಮರಣಿಕೆ ಹಾಗೂ ಪ್ರಮಾಣ ಪತ್ರವನ್ನು ವಿತರಿಸಿದರು.ಕಬ್ ಮಾಸ್ಟರ್ ಶಂಕರ ದೇವರು ಹಿರೇಮಠ ಅವರು ಸ್ವೀಕರಿಸಿದರು. ಸಮಾರಂಭದಲ್ಲಿ ಬಿ. ಎಲ್. ಶಂಕರ್ ಅಧ್ಯಕ್ಷರು ಕರ್ನಾಟಕ ರಾಜ್ಯ ಚಿತ್ರಕಲಾ ಪರಿಷತ್, ಎಂ.ಎನ್. ಮಹೇಶ್ ಅಧ್ಯಕ್ಷರು ರಾಜ್ಯ ಪರಿಸರ ಮೌಲ್ಯಮಾಪನ ಸಮಿತಿ, ಎಂ ‌.ಎನ್. ಷಡಕ್ಷರಿ ಜಿಲ್ಲಾ ಮುಖ್ಯ ಆಯುಕ್ತರು ಭಾರತ್ ಸೌತ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ ಚಿಕ್ಕಮಗಳೂರು ಅವರು ಉಪಸ್ಥಿತರಿದ್ದರು .

ಸಾಂಸ್ಕೃತಿಕ ಮೇಳ ,ಪಥಸಂಚಲನ, ಮಕ್ಕಳ ಕಲರವ,ಸಾಹಸಮ ಕ್ರೀಡಾ ಚಟುವಟಿಕೆ ,ಕರಕುಶಲ ಪ್ರತಿಭಾ ಪ್ರದರ್ಶನ ,ರಸಪ್ರಶ್ನೆ ಕಾರ್ಯಕ್ರಮದಲ್ಲಿ ಕ್ರಿಯಾಶೀಲತೆಯಿಂದ ಭಾಗವಹಿಸಿ ಉತ್ತಮವಾದ ಪ್ರದರ್ಶನವನ್ನು ರಾಯಚೂರು ಜಿಲ್ಲೆಯ ವಿದ್ಯಾರ್ಥಿಗಳು ನೀಡಿದರು. ರಾಯಚೂರು ಜಿಲ್ಲೆಯ ವಿದ್ಯಾರ್ಥಿಗಳು ನೀಡಿದ ಪ್ರದರ್ಶನವನ್ನು ಅತಿಥಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

44ನೇ ರಾಜ್ಯಮಟ್ಟದ ಕಬ್ ಮತ್ತು ಬುಲ್ ಬುಲ್ ಉತ್ಸವದಲ್ಲಿ ರಾಯಚೂರು ಜಿಲ್ಲೆಯ ಏಳು ಜನ ಕಬ್ ವಿದ್ಯಾರ್ಥಿಗಳು ಮತ್ತು ಎಂಟು ಜನ ಬುಲ್ ಬುಲ್ ವಿದ್ಯಾರ್ಥಿಗಳು ಸೇರಿದಂತೆ 15ವಿಧ್ಯಾಥಿ೯ಗಳು ಭಾಗವಹಿಸಿದ್ದರು . ರಾಯಚೂರು ಜಿಲ್ಲೆಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ದುಗ್ಗಮ್ಮನಗುಂಡ ತಾ ಸಿಂಧನೂರು ಶಾಲೆಯ ಶಂಕರ ದೇವರು ಹಿರೇಮಠ ಕಬ್ ಮಾಸ್ಟರ್, ಬಯ್ಯಾಪುರ ಮಹಾಂತಮ್ಮ ಲಿಂಗನಗೌಡ ಪ್ರಾಥಮಿಕ ಶಾಲೆ ಮಸ್ಕಿ ಸಂತೋಷ ನಾಯಕ ಕಬ್ ಮಾಸ್ಟರ್ ಹಾಗೂ ಲಯನ್ಸ್ ಪ್ರಾಥಮಿಕ ಶಾಲೆ ಮಸ್ಕಿ ದೇವಮ್ಮ ಪ್ಲಾಕ್ ಲೀಡರ್ ಅವರು ಭಾಗವಹಿಸಿದ್ದರು.

ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತರಾದ ಬಸವರಾಜ್ ಭೋರಡ್ಡಿ ಅಭಿನಂದಿಸಿದ್ದಾರೆ.ಜಿಲ್ಲಾ ಸಂಸ್ಥೆ ಕಾರ್ಯದರ್ಶಿ ಬಸವರಾಜ ಗದುಗಿನ,ಸ್ಥಳೀಯ ಸಂಸ್ಥೆ ಸಿಂಧನೂರು ಅಧ್ಯಕ್ಷರಾದ ಎಸ್ . ಶರಣೇಗೌಡ ,ಕಾರ್ಯದರ್ಶಿಗಳಾದ ಭೀರಪ್ಪ ಶಂಭೋಜಿ , ಜಿಲ್ಲಾ ಎಸ್‌.ವಿ.ಜಿ ಮಹಮದ್ ಶರ್ಪು ಅವರು ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.

ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಸಂಸ್ಥೆ ಆಯೋಜಿಸಿರುವ 44ನೇ ಕಬ್ -ಬುಲ್ ಬುಲ್ ಉತ್ಸವದಲ್ಲಿ ಉತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿಗಳಿಗೆ ಸಿಂಧನೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಾಜೀದಾ ಮಜೀದ್, ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಸಲಿಂಗಪ್ಪ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಸಾಬಣ್ಣ ವಗ್ಗರ, ದೇವಿ ಕ್ಯಾಂಪ್ ವಲಯದ ಸಂಪನ್ಮೂಲ ವ್ಯಕ್ತಿ ಗಿರೀಶ್ ವಿ, ಎಸ್. ಡಿ .ಎಂ. ಸಿ. ಅಧ್ಯಕ್ಷರಾದ ಗುಡದಪ್ಪ, ಮಾಜಿ SDMC ಅಧ್ಯಕ್ಷರಾದ ಲಕ್ಷ್ಮಣ, ಸದಸ್ಯರಾದ ರೇಣುಕಾ ಹಾಗೂ ಅಂಗನವಾಡಿ ಶಿಕ್ಷಕಿ ಭಾಗ್ಯಶ್ರೀ, ಶಿಕ್ಷಕರಾದ ಪ್ರದೀಪ್ ಕುಮಾರ್ , ಗ್ರಾಮದ ಗ್ರಾಮಸ್ಥರು ಹಾಗೂ ಪಾಲಕರು ಅವರು ವಿದ್ಯಾರ್ಥಿಗಳ ಸಾಧನೆಯನ್ನು ಅಭಿನಂದಿಸಿದ್ದಾರೆ…

ವರದಿ. ಲಿಂಗರಾಜ್ ತಡಕಲ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend