ಅಭಿವೃದ್ಧಿ ಕಾಣದ ಮೋತಿಕಲ್ ತಾಂಡ ಶಾಸಕರ ವಿರುದ್ಧ ಗ್ರಾಮಸ್ಥರು ಆಕ್ರೋಶ…!!!

Listen to this article

ಅಭಿವೃದ್ಧಿ ಕಾಣದ ಮೋತಿಕಲ್ ತಾಂಡ ಶಾಸಕರ ವಿರುದ್ಧ ಗ್ರಾಮಸ್ಥರು ಆಕ್ರೋಶ

ಹಗರಿ ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ನೇಮಿರಾಜ್ ನಾಯಕ್ ರವರು ಅವಕಾಶ ಸಿಕ್ಕ ವೇದಿಕೆಗಳಲ್ಲಿ ತಮ್ಮ ಮಾತನ್ನು ಪ್ರಾರಂಭ ಮಾಡುವುದೇ ಕ್ಷೇತ್ರದ ಅಭಿವೃದ್ಧಿ ಎಂದು ಆದರೆ ಅವರ ತವರು ಕ್ಷೇತ್ರವಾದ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಹ್ಯಾಳ್ಯಾ ಗ್ರಾಮ ಪಂಚಾಯಿತಿಗೆ ವ್ಯಾಪ್ತಿಯ ಮೋತಿಕಲ್ ತಾಂಡದಲ್ಲಿ ಇಂದಿಗೂ ಅಭಿವೃದ್ಧಿ ಕಾಣದೇ ಜನ ಪ್ರತಿನಿಧಿಗಳಿಗೆ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಿ.ಎಚ್.ಎಂ. ಗಂಗಾಧರ ಇವರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಹಾಗೂ ಈ ಹಿಂದೆ ಇದ್ದ ಬಿಜೆಪಿ ಸರ್ಕಾರ ತಾಂಡಗಳ ಜನರು ಗೂಳೆ ಹೋಗಬಾರದು ಹೀಗೆ ಗೂಳೆ ಹೋಗುವುದರಿಂದ ಅವರ ಕುಟುಂಬಗಳಿಗೆ ನಾನಾ ರೀತಿಯ ತೊಂದರೆ ಆಗಿ ಮಕ್ಕಳ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಮಕ್ಕಳು ಅವಿದ್ಯಾವಂತ ರಾಗುತ್ತಾರೆ ಇದರಿಂದ ದೇಶದ ಸಾಕ್ಷರತೆ ಬೆಳೆವಣಿಗೆ ಕ್ಷೀಣಿಸುತ್ತದೆ ಎಂಬ ಉದ್ದೇಶದಿಂದ ನರೇಗಾ ಯೋಜನೆ ಅಡಿ 100 ದಿನ ಉದ್ಯೋಗ ಕೊಡಬೇಕು ಎಂದಿದ್ದರು. ಗ್ರಾಮ ಪಂಚಾಯಿತಿ ಅಧಿಕಾರಿಗಳು ತಾರತಮ್ಯ ನಡೆಸುತ್ತಾ ನಮಗೆ ಉದ್ಯೋಗ ನೀಡುತ್ತಿಲ್ಲ ನಮಗೆ ವಸತಿ ಉಳಿಯಲು ಈಗಿರುವ ಮನೆಗಳು ಸುರಿಯುತ್ತಿರುವ ಭಾರಿ ಮಳೆ ಗಾಳಿಗೆ ಯಾವಾಗ ಮೇಲ್ಚಾವಣೆ ಕುಸಿದು ಮರಣ ಹೊಂದುತ್ತೇವೆ ಎಂಬ ಭಯ ನಮ್ಮನ್ನು ನಿತ್ಯವೂ ಬಿಡದೇ ಕಾಡುತ್ತದೆ. ಈ ತಾರತಮ್ಯ ನೀತಿಯಿಂದ ಬೇಸತ್ತು ನಾವು ಮಂಗಳೂರಿಗೆ ಕೆಲಸಕ್ಕೆ ಹೋಗುತ್ತೇವೆ. ನಮ್ಮ ಗ್ರಾಮಕ್ಕೆ ಒಂದು ಮನೆ ಸಹ ಮಂಜೂರು ಮಾಡಿಲ್ಲ ಇತ್ತ ನರೇಗಾ ಕೂಲಿ ಕೆಲಸವೂ ಇಲ್ಲ. ಸೌಲಭ್ಯಗಳನ್ನು ವಂಚನೆಗೆ ಸಾಕ್ಷಿಯಾಗಿದೆ. ಇನ್ನೂ ತೊಂದರೆ ಕೊಡುವುದಕ್ಕಾಗಿಯೇ ಈ ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ಬಂದಿದೆಯೋ ಎನ್ನುವಂತೆ ಊರು ತುಂಬಾ ರಸ್ತೆಗಳನ್ನು ಗುಂಡಿಗಳಾಗಿ ಮಾಡಿ ಸುಮಾರು ಆರು ತಿಂಗಳಾದರೂ ಸಿ.ಸಿ ರಸ್ತೆ ರಿಪೇರಿ ಮಾಡಿಸುವ ಕೆಲಸಕ್ಕೆ ಮುಂದಾಗಿಲ್ಲ, ಇಲ್ಲಿನ ಅಧಿಕಾರಿಗಳು ಮತ್ತು ಜನನಾಯಕರು ಎಷ್ಟು ಲಂಚ ಪಡೆದವರು ಗೊತ್ತಿಲ್ಲ ಸೌಲಭ್ಯಗಳಿಂದ ವಂಚನೆ ಒಳಗಾದ ಗ್ರಾಮ ನಮ್ಮದಾಗಿದೆ.ಎಂದು ಗಂಗಮ್ಮ ರಾಜು ನಾಯಕ್ ಕೃಷ್ಣ ನಾಯಕ್ ಲಕ್ಷ್ಮೀಬಾಯಿ ಮತ್ತಿತರರು ಮಾಧ್ಯಮ ಪ್ರತಿ ನಿಧಿಗಳಿಗೆ ತಿಳಿಸಿದರು. ನಾವುಗಳು ಅಭಿವೃದ್ಧಿ ಮಾಡುವರು, ಎಂಬ ಮಹಾ ದಾಸೆಯಿಂದ ಕೆ.ನೇಮಿರಾಜ್ ನಾಯ್ಕ್ ಇವರನ್ನು ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕರನ್ನಾಗಿ ಆಯ್ಕೆ ಮಾಡಿದ್ದು ತಪ್ಪಾಗಿದೆ ಎಂಬ ಭಾವನೆ ನಮ್ಮ ಗ್ರಾಮದ ಜನರು ಮಾತನಾಡಿ ಕೊಳ್ಳುತ್ತಿದ್ದಾರೆ. ಮಾನ್ಯ ಶಾಸಕರು ನಮ್ಮ ಗ್ರಾಮದ ಕಡೆಗೆ ಗಮನಹರಿಸಿ ಜನರ ಭಾವನೆಯಲ್ಲಿರುವ ತಪ್ಪು ಅಭಿಪ್ರಾಯ ಸುಳ್ಳು ಮಾಡಬೇಕು ಎಂದು ಗ್ರಾಮದ ಸಾರ್ವಜನಿಕರು ಮನವಿ ಮಾಡಿದರು. ನಮ್ಮ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ನರೇಗಾ ಕೆಲಸ ಬೇಕಾಗಿರುವ ಸೌಲತ್ತುಗಳನ್ನು ನೀಡಬೇಕೆಂದು ಕೇಳುವುದರ ಮೂಲಕ ಆಕ್ರೋಶ ವ್ಯಕ್ತಪಡಿಸಿದರು..


ವರದಿ.. ಮ್ಯಾಗೇರಿ ಸಂತೋಷ ಹೂವಿನಹಡಗಲಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend