ಆರಂಭದಲ್ಲಿಯೇ ರಕ್ತದೊತ್ತಡ, ಸಕ್ಕರೆ ಕಾಯಿಲೆ ನಿಯಂತ್ರಿಸಬೇಕು: ಡಿಹೆಚ್‌ಓ ಡಾ.ಯಲ್ಲಾ ರಮೇಶಬಾಬು…!!!

Listen to this article

ಆರಂಭದಲ್ಲಿಯೇ ರಕ್ತದೊತ್ತಡ, ಸಕ್ಕರೆ ಕಾಯಿಲೆ ನಿಯಂತ್ರಿಸಬೇಕು: ಡಿಹೆಚ್‌ಓ ಡಾ.ಯಲ್ಲಾ ರಮೇಶಬಾಬು

ಬಳ್ಳಾರಿ,:ಜೀವನ ಶೈಲಿಯ ರೋಗಗಳಾದ ರಕ್ತದೊತ್ತಡ, ಸಕ್ಕರೆ ಕಾಯಿಲೆಯನ್ನು ಒಮ್ಮೆ ಗುರುತಿಸಿದ ನಂತರ ವೈದ್ಯರ ಸಲಹೆ ಮೇರೆಗೆ ನಿಯಮಿತವಾಗಿ ಔಷಧಿ ಸೇವಿಸುವ ಮೂಲಕ ಸದೃಢ ಆರೋಗ್ಯ ತಮ್ಮದಾಗಿಸಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶಬಾಬು ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಘಟಕ ಇವರ ಆಶ್ರಯದಲ್ಲಿ ತೋರಣಗಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಆಯೋಜಿಸಿದ್ದ ಆಯುಷ್ಮಾನ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.
ತಜ್ಞವೈದ್ಯರಿಂದ ಒಂದು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಾಗೂ ಉಳಿದ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಪ್ರತಿ ಮಂಗಳವಾರದAದು ಸ್ಥಳೀಯ ವೈದ್ಯರಿಂದ ತಪಾಸಣೆ ಮಾಡುವ ಕಾರ್ಯ ಕೈಗೊಳ್ಳಲಾಗುತ್ತಿದ್ದು, ಇದರ ಸದುಪಯೋಗ ಪಡೆಯಬೇಕು ಎಂದು ತಿಳಿಸಿದರು.
ಪ್ರಸ್ತುತ ಆಸ್ಪತ್ರೆಗಳಿಗೆ ತಪಾಸಣೆಗೆ ಆಗಮಿಸುವ ಪ್ರತಿಯೊಬ್ಬರಿಗೂ ಔಷದೋಪಚಾರದ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಲು 10-15 ಜನರ ಗುಂಪು ಮಾಡಿ ಜೀವನ ಶೈಲಿಯ ಬದಲಾವಣೆಯ ಕುರಿತು ಆಪ್ತಸಮಾಲೋಚನೆ ನೀಡಲಾಗುತ್ತದೆ ಎಂದರು.


ಜಿಲ್ಲಾ ಮಾನಸಿಕ ಕಾರ್ಯಕ್ರಮಾಧಿಕಾರಿ ಡಾ.ವಿರೇಂದ್ರಕುಮಾರ ಅವರು ಮಾತನಾಡಿ, ಹಲವು ವರ್ಷಗಳಿಂದ ಇರುವ ನರ ಮತ್ತು ಚರ್ಮದ ಖಾಯಿಲೆಯಾಗಿರುವ ಕುಷ್ಠರೋಗವನ್ನು ಆರಂಭದಲ್ಲಿ ಗುರ್ತಿಸಿ ಚಿಕಿತ್ಸೆ ನೀಡಲಾಗುತ್ತಿದೆ, ಸ್ಪರ್ಶಜ್ಞಾನವಿಲ್ಲದ ತಿಳಿಬಿಳಿ ತಾಮ್ರವರ್ಣದ ಮಚ್ಚೆಗಳಿದ್ದಲ್ಲಿ ತಪ್ಪದೇ ಪರೀಕ್ಷೆ ಮಾಡಿಸಬೇಕು. ಮಾನಸಿಕ ಆರೋಗ್ಯಕ್ಕಾಗಿ ಉಚಿತ ಸಹಾಯವಾಣಿ 14416 ಟೆಲಿಮನಸ್‌ಗೆ ಕರೆ ಮಾಡಿ ಸದುಪಯೋಗ ಪಡೆಯಬೇಕು ಎಂದರು.
ತಪಾಸಣೆ ಶಿಬಿರದಲ್ಲಿ ವಿಮ್ಸ್ನಿಂದ ಆಗಮಿಸಿದ ಎಲುಬು ಕೀಲು, ಸರ್ಜರಿ, ಚರ್ಮರೋಗ ತಜ್ಞವೈದ್ಯರಾದ ಡಾ.ರಘುವೀರ, ಡಾ.ಪ್ರಜ್ವಲ್, ಡಾ.ಅತೀರಾ ಹಾಗೂ ಡಾ.ಮಣಿಕಂಠ, ಡಾ.ಶ್ರಾವಣಿ, ಡಾ.ಆರುಂಧತಿ ಅವರ ತಂಡವು ಸೇರಿ 153 ಜನರ ಆರೋಗ್ಯ ತಪಾಸಣೆ ಮಾಡಿದರು.
ಕಾರ್ಯಕ್ರಮದಲ್ಲಿ ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಗೋಪಾಲರಾವ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ, ಕಚೇರಿ ಅಧೀಕ್ಷಕ ಹರ್ಷ, ಆರೋಗ್ಯ ನೀರಿಕ್ಷಣಾಧಿಕಾರಿ ಶಕೀಲ್ ಅಹಮ್ಮದ್, ಫಾರ್ಮಸಿಷ್ಟ್ ಮಂಜುನಾಥ, ಕ್ಷಕಿರಣ ತಂತ್ರಜ್ಞರಾದ ಅಶ್ವಿನಿ, ಎನ್‌ಸಿಡಿ ಸಲಹೆಗಾರ ವೆಂಕಪ್ಪ, ಪ್ರಯೋಗಾಲಯ ತಂತ್ರಜ್ಞ ಇಮ್ರಾನ್, ಬಸವರಾಜ್, ಆರೋಗ್ಯ ಮಿತ್ರ ವಿಜಯಭಾಸ್ಕರ್, ಶೂಶ್ರುಷಣಾಧಿಕಾರಿ ಮಾರೇಶ, ರೇಷ್ಮಾ ಸೇರಿದಂತೆ ಸಾರ್ವಜನಿಕರು ಹಾಗೂ ಇತರರು ಉಪಸ್ಥಿತರಿದ್ದರು.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend