ಕೂಡ್ಲಿಗಿ ಪಟ್ಟಣ ಪಂಚಾಯಿತಿಯಲ್ಲಿ ಮಾನ್ಯ ರಾಜ್ಯ ಅಭಿಯಾನ ನಿರ್ದೇಶಕರು, ಸ್ವಚ್ಛ ಭಾರತ ಅಭಿಯಾನ…!!!

Listen to this article

ಕೂಡ್ಲಿಗಿ ವರದಿ

ಕೂಡ್ಲಿಗಿ ಪಟ್ಟಣ ಪಂಚಾಯಿತಿಯಲ್ಲಿ ಮಾನ್ಯ ರಾಜ್ಯ ಅಭಿಯಾನ ನಿರ್ದೇಶಕರು, ಸ್ವಚ್ಛ ಭಾರತ ಅಭಿಯಾನ (ನಗರ) ರವರ ಸೇಪ್ಟಿಕ್ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸುವ ಕುರಿತು ವಿಜಯನಗರ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂದಿಸಿದಂತೆ ಮಂಗಳವಾರ ದಂದು ಕೂಡ್ಲಿಗಿ ಪಟ್ಟಣ ಪಂಚಾಯತಿಯಲ್ಲಿ ಅರ್ದ ದಿನದ ಕಾರ್ಯಾಗಾರವನ್ನು ಆಯೋಜಿಸಲಾಗಿರುತ್ತದೆ.

ಒಳಚರಂಡಿ ಮತ್ತು ಸೇಪ್ಟಿಕ್ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸುವ (NSKFDC)ಮತ್ತು (IED)ಪ್ರಯುಕ್ತ ಸದರಿ ಕಾರ್ಯಾಗಾರಕ್ಕೆ ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಸಹಾಯಕ ಕಾರ್ಯಪಾಲಕ ಅಭಿಯಂತರರು (ಪರಿಸರ),ಪರಿಸರ ಅಭಿಯಂತರರುಗಳು ಮತ್ತು ಎಲ್ಲಾ ಹಿರಿಯ/ಕಿರಿಯ ಆರೋಗ್ಯ ನಿರೀಕ್ಷಕರುಗಳು ಪೌರ ಕಾರ್ಮಿಕರು ಕೂಡ್ಲಿಗಿ ಪಟ್ಟಣ ಪಂಚಾಯಿತಿ ಸಿಬ್ಬಂದಿ ವರ್ಗದವರು ಹಾಜರಿದ್ದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಕಾವಲಿ ಶಿವಪ್ಪ ನಾಯಕ ಹಾಗೂ ಪಟ್ಟಣ ಪಂಚಾಯತಿಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಯಾದ್ ಶುಕುರ್ ರವರು ಮಾತನಾಡಿ ಪೌರಕಾರ್ಮಿಕರಿಗೆ ಆಗುವಂತ ತೊಂದರೆಗಳು ಅದರಿಂದ ಮುಂಜಾಗ್ರತೆಯ ಕ್ರಮಗಳನ್ನು ಈ ಕಾರ್ಯಗಾರ ಶಿಬಿರದಲ್ಲಿ ಕಲಿಸಲಾಗುತ್ತದೆ ಈ ಕಾರ್ಯಕ್ರಮದಲ್ಲಿ ಬರುವಂತಹ ಎಲ್ಲಾ ಅಂಶಗಳನ್ನು ಕಲಿತು ಅದರ ಪ್ರಕಾರ ಕಾರ್ಯವನ್ನು ನಡೆಸಿದರೆ ಪೌರಕಾರ್ಮಿಕರಿಗೆ ಆರೋಗ್ಯದ ಹಿತ ದೃಷ್ಟಿಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ವೇದಿಕೆ ಮೇಲೆ ಪಟ್ಟಣ ಪಂಚಾಯಿತಿ ಅಧ್ಯಕ್ಷರು ಕಾವಲ್ಲಿ ಶಿವಪ್ಪ ನಾಯಕ, ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರು ಸೈಯದ್ ಶುಕುರ್, ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿಗಳು ಮುಗುಳಿ ಹಾಗೂ ಅಧಿಕಾರಿ ವರ್ಗದವರು ಭಾಗಿಯಾಗಿದ್ದರು…

ವರದಿ… ವೈ.ಮಾದೇವ್ ಕೂಡ್ಲಿಗಿ ಗ್ರಾಮಾಂತರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend