ಮಾನ ಮರ್ಯಾದೆ ಇದ್ರೆ ಒಳ ಮೀಸಲಾತಿ ಜಾರಿಗೆ ಅಡ್ಡಿಯಾಗದಂತೆ ವರ್ತಿಸಿ:ಕರ್ನಾಟಕ ರಾಜ್ಯ ಡಾಕ್ಟರ್ ಬಾಬು ಜಗಜೀವನ್ ರಾಮ್ ಯುವಜನ ಜಾಗೃತಿ ವೇದಿಕೆ ಸಂಡೂರು ಸಮಿತಿಯ ತಾಲೂಕ ಅಧ್ಯಕ್ಷರು. ಕಾಶಪ್ಪ ಆಕ್ರೋಶ…!!!

Listen to this article

ಒಳಮೀಸಲಾತಿ ಕುರಿತು ಆಗಸ್ಟ್ ಒಂದನೇ‌ ತಾರೀಕು ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಮರುಪರಿಶೀಲಿಸುವಂತೆ ಸಲ್ಲಿಕೆಯಾಗಿದ್ದ ಎಲ್ಲ ಅರ್ಜಿಗಳು ಇಂದು ಸುಪ್ರೀಂಕೋರ್ಟಿನಲ್ಲಿ ವಜಾಗೊಂಡಿವೆ. ಇದು ಒಳಮೀಸಲಾತಿ ಜಾರಿಗಾಗಿ ನಡೆಸುತ್ತಿರುವ ಹೋರಾಟಕ್ಕೆ ಮತ್ತಷ್ಟು ನೈತಿಕ ಸ್ಥೈರ್ಯವನ್ನು ತಂದುಕೊಟ್ಟಿದೆ.

ಸುಪ್ರೀಂಕೋರ್ಟ್ ತೀರ್ಪಿನಿಂದಾಗಿ ದಲಿತರಲ್ಲಿನ‌ ಒಗ್ಗಟ್ಟನ್ನು ಒಡೆಯುತ್ತದೆ, ಮೀಸಲಾತಿಯನ್ನು ಅಂತ್ಯಗೊಳಿಸುತ್ತದೆ ಎನ್ನುವ ಕ್ಷುಲ್ಲಕ ಕಾರಣಗಳನ್ನು ನೀಡಿ ಒಳಮೀಸಲಾತಿಗೆ ವಿರೋಧ ವ್ಯಕ್ತ ಪಡಿಸಿದ ಮಾಯಾವತಿ, ಪ್ರಕಾಶ್ ಅಂಬೇಡ್ಕರ್, ಚಂದ್ರಶೇಖರ ಆಜಾದ್, ಚಿರಾಗ್ ಪಾಸ್ವಾನ್, ತೋಳ್ ತಿರುಮಾವಳನ್‌ರಂತಹ ‘ದಲಿತ ನಾಯಕತ್ವ’ ನೈತಿಕವಾಗಿ ಸೋಲು ಕಂಡಿದೆ.

ಈವತ್ತಿನವರೆಗೂ ದಲಿತ ಚಳುವಳಿ ಮತ್ತು ದಲಿತ ರಾಜಕಾರಣವನ್ನು ಮುನ್ನಡೆಸುವ ‘ನಾಯಕತ್ವ’ ದಲಿತರೊಳಗೆ ಹೆಚ್ಚು ಅವಕಾಶ ಪಡೆದು ಬಲಿಷ್ಠರಾಗಿರುವ ಚಮ್ಮಾರ್, ಮಹಾರ್, ಮಾಲ, ಹೊಲೆಯ, ಪರಯ್ಯಾ ಸೇರಿದಂತೆ ‘ಬಲಗೈ’ ಸಮುದಾಯಗಳಲ್ಲೆ ಹೆಚ್ಚು ಇದೆ. ಈ ದಲಿತರೊಳಗೆ ಬಲಿತ ಸಮುದಾಯದ ನಾಯಕರು ಸುಪ್ರಿಂಕೋರ್ಟ್ ತೀರ್ಪನ್ನು ವಿರೋಧಿಸಿ ‘ಭಾರತ್ ಬಂದ್’ ನಡೆಸಿ ತಮ್ಮ ನಿಜವಾದ ಬಣ್ಣ ಬಯಲು ಮಾಡಿಕೊಂಡಿದ್ದರು. ಯಾವಾಗ ತಾವು ಗಳಿಸಿದ್ದ ಒಟ್ಟು ದಲಿತ ಸಮುದಾಯದ ನಾಯಕತ್ವದ ಜವಾಬ್ದಾರಿ ಮರೆತು ತಮ್ಮ ತಮ್ಮ ಜಾತಿಗಳ ಹಿತಾಸಕ್ತಿ ಕಾಪಾಡುವುದಕ್ಕೆ ಮುಂದಾದರೋ ಆಗಲೇ ಇವರೆಲ್ಲ ನೈತಿಕವಾಗಿ ಪತನಗೊಂಡಿದ್ದಾರೆ.

ಈಗ ಮಾನ ಮರ್ಯಾದೆ ಇದ್ದರೆ ಒಳಮೀಸಲಾತಿ ಜಾರಿಗೆ ಅಡ್ಡಿಯಾಗದಂತೆ ವರ್ತಿಸಬೇಕು. ಇಲ್ಲ ತಮ್ಮ ತಮ್ಮ ಜಾತಿ ಸಂಘಟನೆ ಮಾಡಿಕೊಂಡು ಬಾಬಾಸಾಹೇಬರ ಹೆಸರು‌ ಹೇಳುವುದನ್ನು ನಿಲ್ಲಿಸಬೇಕು.ಒಳಮೀಸಲಾತಿಸಾಮಾಜಿಕನ್ಯಾಯ…

ವರದಿ. ಕಾಶೆಪ್ಪ ಸಂಡೂರು ಗ್ರಾಮಾಂತರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend