ಹುಲಿಕುಂಟೆ ಗ್ರಾಮದಲ್ಲಿ ನವರಾತ್ರಿ ಎರಡನೇ ದಿನ ಬ್ರಹ್ಮ ಚಾರಿಣಿ ಆರಾಧನೆ…!!!

Listen to this article

ಹುಲಿಕುಂಟೆ ಗ್ರಾಮದಲ್ಲಿ ನವರಾತ್ರಿ ಎರಡನೇ ದಿನ ಬ್ರಹ್ಮ ಚಾರಿಣಿ ಆರಾಧನೆ
ಕೂಡ್ಲಿಗಿ ತಾಲೂಕು ವಿಜಯನಗರ ಜಿಲ್ಲೆ, ಹುಲಿಕುಂಟೆ ಗ್ರಾಮದಲ್ಲಿ ನವರಾತ್ರಿ ಅಂಗವಾಗಿ ಶ್ರೀ ಮಾರಮ್ಮ ದೇವಿಗೆ ಅರಿಶಿನ ಕುಂಕುಮ ಅಲಂಕಾರ ಭಕ್ತರ ಕಣ್ಮನ ಸೆಳೆಯಲಾಯಿತು
ನವರಾತ್ರಿಯ 9 ದಿನಗಳ ಕಾಲ ದುರ್ಗಾದೇವಿಯ ಒಂಬತ್ತು ಅವತಾರಗಳನ್ನು ಪೂಜಿಸಲಾಗುವುದು ಎರಡನೇ ದಿನದಂದು ದುರ್ಗಾದೇವಿಯ ಬ್ರಹ್ಮಾಚಾರಿ ಅವತಾರವನ್ನು ಪೂಜಿಸುವುದು ಸುಧೀರ್ಘವಾದ ಪೂಜೆಯ ಮೂಲಕ ದುರ್ಗಾದೇವಿಯ ಬ್ರಹ್ಮಚಾರಿ ಅವತಾರವನ್ನು ಭಕ್ತರು ಪೂಜಿಸಿ ಆಕೆ ಅನುಗ್ರಹಕ್ಕೆ ಪಾತ್ರರಾಗುತ್ತಾರೆ
*ಬ್ರಹ್ಮಚಾರಿ ಕಥೆ* ದೇವಿಯು ಕುಶ್ಮಂದ ಅವತಾರವನ್ನು ಪಡೆದ ಬಳಿಕ ಬ್ರಹ್ಮ ಚಾರಿಣಿ ಯಾದರು ಈಶ್ವರ ದೇವನನ್ನು ವಿರೋಧಿಸುತ್ತಿದ್ದ ದಕ್ಷ ಪ್ರಜಾಪತಿಯ ಮನೆಯಲ್ಲಿ ಪಾರ್ವತಿಯು ಜನಿಸುವರು ಈ ಅವತಾರವನ್ನು ಬ್ರಹ್ಮ ಚಾರಿಣಿಯೆಂದು ಪೂಜಿಸಲಾಗುವುದು ಮುಂದಿನ ಜನ್ಮದಲ್ಲಿ ತನಗೆ ಒಳ್ಳೆಯ ತಂದೆ ಮತ್ತು ಶಿವನನ್ನು ಆರಾಧಿಸುವವರು ಆಕೆ ಪಾದಯಾತ್ರೆ ಮಾಡಿದ ಬಳಿಕ ಸಾವಿರಾರು ವರ್ಷಗಳ ಕಾಲ ಶಿವನನ್ನು ಮದುವೆಯಾಗಬೇಕೆಂದು ತಪಸ್ಸು ಮಾಡುವರು ಆಕೆ ಹೂಗಳು ಹಾಗೂ ಹಣ್ಣುಗಳನ್ನು ಮಾತ್ರ ಸೇವನೆ ಮಾಡುತ್ತಿದ್ದಳು ಅಂತಿಮವಾಗಿ ಅದನ್ನು ತ್ಯಜಿಸಿ ಕೇವಲ ಗಾಳಿಯನ್ನು ಉಸಿರಾಡಿ ಬದುಕುತ್ತಿದ್ದಳು ಇದರಿಂದಾಗಿ ಬ್ರಹ್ಮಚಾರಿಣಿ ಯನ್ನ ಅಪರ್ಣ ಎಂದು ಕರೆಯಲಾಗುತ್ತದೆ.
ಬ್ರಹ್ಮಚಾರಿಣಿ ದೇವಿಯ ಮಹತ್ವ
ಬ್ರಹ್ಮಾ ಚಾರಿಣಿ ದೇವಿಯು ಮಂಗಳ ಗ್ರಹದ ಅಧಿಪತಿ ಎಂದು ಹೇಳಲಾಗುತ್ತದೆ ಆಕೆಯು ಎಲ್ಲಾ ಅದೃಷ್ಟವನ್ನು ನೀಡುವವಳು ಮತ್ತು ಭಕ್ತರ ಮಾನಸಿಕ ಶೋಭೆ ನಿವಾರಣೆ ಮಾಡಿ ಅವರ ದುಃಖ ನಿವಾರಿಸುವಳು ಮಂಗಳ ದೋಷ ಮತ್ತು ಜಾತಕದಲ್ಲಿ ಮಂಗಳ ಗ್ರಹವೂ ಕೆಟ್ಟ ಸ್ಥಾನದಲ್ಲಿ ಇದ್ದರೆ ಬ್ರಹ್ಮ ಚಾರಿಣಿಯನ್ನು ಪೂಜಿಸಬೇಕು
ಪಾರ್ವತಿಯು ಈ ಅವತಾರದಲ್ಲಿ ಬಲಗೈಯಲ್ಲಿ ಜಪಮಾಲೆ ಮತ್ತು ಎಡಗೈಯಲ್ಲಿ ಕಮಂಡಲವನ್ನು ಹಿಡಿದಿರುತ್ತಾಳೆ. ಬ್ರಹ್ಮಚಾರಿ ದೇವಿಯನ್ನು ವಿಶೇಷವಾಗಿ ಮಲ್ಲಿಗೆ ಹೂವಿನಿಂದ ಅಲಂಕರಿಸಿ ಪೂಜಿಸಲಾಗುತ್ತದೆ. ಹುಲಿಕುಂಟೆ ಗ್ರಾಮದ ಭಕ್ತಾದಿಗಳು ಶ್ರೀ ಮಾರಮ್ಮ ದೇವಿಗೆ ಅರಿಶಿನ ಕುಂಕುಮದ ಅಲಂಕಾರದಿಂದ ಭಕ್ತರ ಕಣ್ಮನ ಸೆಳೆಯಿತು..


ವರದಿ:- ಅನಿಲ್ ಕುಮಾರ್ ಹುಲಿಕುಂಟೆ.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend